ಗುಜರಾತಿನ ಕಚ್ ನಲ್ಲಿ ಐಎಸ್ಐ ಏಜೆಂಟ್ ಗಳ ಬಂಧನ

Posted By:
Subscribe to Oneindia Kannada

ಗಾಂಧಿನಗರ, ಅಕ್ಟೋಬರ್ 13: ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ (ಐಎಸ್‍ಐ) ಬೆಂಬಲಿತ ಇಬ್ಬರು ಏಜೆಂಟ್ ಗಳನ್ನು ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಅಧಿಕಾರಿಗಳು ಬುಧವಾರ ರಾತ್ರಿ ಕಚ್ ಜಿಲ್ಲೆಯ ಖಾವ್ಡಾದಲ್ಲಿ ಬಂಧಿಸಿದ್ದಾರೆ. ಬಂಧಿತರು ವಿಚಾರಣೆ ವೇಳೆ ಅನೇಕ ಸ್ಫೋಟಕ ಮಾಹಿತಿಗಳು ಹೊರ ಬೀಳುವ ಸಾಧ್ಯತೆಯಿದೆ.

ಕಚ್ ಜಿಲ್ಲೆಯ ಖಾವ್ಡಾದಲ್ಲಿ ಕಾರ್ಯನಿರ್ವಹಿಸಿಸುತ್ತಿದ್ದ ಇಬ್ಬರು ಐಎಸ್‍ಐ ಏಜೆಂಟ್ ಗಳ ಮೇಲೆ ಅನುಮಾನದ ಹಿನ್ನೆಲೆಯಲ್ಲಿ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಅಧಿಕಾರಿಗಳು ಬಂಧಿಸಿದ್ದಾರೆ. ಇವರಿಬ್ಬರ ಮೇಲೆ ಕಳೆದ ಒಂದು ವರ್ಷದಿಂದ ನಿಗಾವಹಿಸಲಾಗಿತ್ತು. ಬಂಧಿತರ ಬಳಿ ಪಾಕಿಸ್ತಾನ ಸಿಮ್ ಹಾಗೂ ಮೊಬೈಲ್ ಫೋನ್ ಪತ್ತೆಯಾಗಿದೆ.

ATS nabs two suspected Pakistan spies in Kutch

ಸರ್ಜಿಕಲ್ ದಾಳಿಗೆ ಪ್ರತೀಕಾರವಾಗಿ ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಭಯೋತ್ಪಾದನಾ ಸಂಘಟನೆಗಳು ಸಂಚು ರೂಪಿಸುತ್ತಿವೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದ ಬೆನ್ನಲ್ಲೇ ಈ ಬೆಳವಣಿಗೆ ಕಂಡು ಬಂದಿದೆ. ಪಾಕಿಸ್ತಾನದ ಐಎಸ್‍ಐ ಮತ್ತು ಉಗ್ರರಿಗೆ ಮಹತ್ವದ ಮಾಹಿತಿಗಳನ್ನು ಈ ಪಾಕ್ ಮೂಲದ ಗೂಢಚಾರರು ನೀಡುತ್ತಿದ್ದರೆಂಬ ಅಂಶದ ಬಗ್ಗೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.

ಭಾರತೀಯ ಕಮ್ಯಾಂಡೋಗಳು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕೈಗೊಂಡ ಸರ್ಜಿಕಲ್ ದಾಳಿ ನಂತರ ಐಎಸ್‍ಐ ಸೂಚನೆ ಮೇರೆಗೆ ಅನೇಕ ಉಗ್ರರು ದೇಶದೊಳಗೆ ನುಸುಳಿ ವಿಧ್ವಂಸಕ ಕೃತ್ಯಗಳನ್ನು ಎಸಗಲಿದ್ದಾರೆ ಎಂಬ ಗುಪ್ತಚರ ಮಾಹಿತಿ ನೀಡಿತ್ತು. ಅದರಲ್ಲೂ ಗಡಿಭಾಗದಲ್ಲಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಉಗ್ರರು ಸಂಚು ರೂಪಿಸಿದ್ದಾರೆ ಎಂಬ ಮಾಹಿತಿ ಹೊರ ಬಂದಿದೆ. ಈಗ ಇವರಿಬ್ಬರ ವಿಚಾರಣೆ ನಂತರ ಇನ್ನಷ್ಟು ಮಾಹಿತಿ ಹೊರ ಬೀಳುವ ಸಾಧ್ಯತೆಯಿದೆ.(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Gujarat Anti-Terrorist Squad (ATS) has nabbed two persons allegedly working as spies for Pakistan's intelligence agency ISI, police said.
Please Wait while comments are loading...