• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌ನಲ್ಲಿ ಒಂದೇ ದಿನ 16 ಕ್ಷೇತ್ರಗಳನ್ನು ಸುತ್ತಿದ ಪ್ರಧಾನಿ ಮೋದಿ!

|
Google Oneindia Kannada News

ಗಾಂಧಿನಗರ, ಡಿಸೆಂಬರ್ 01: ಮೊದಲ ಹಂತದ ಚುನಾವಣೆಯ ನಡೆಯುತ್ತಿರುವ ತವರು ರಾಜ್ಯ ಗುಜರಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮೆಗಾ ರೋಡ್‌ಶೋ ಅನ್ನು ನಡೆಸುತ್ತಿದ್ದಾರೆ. ಇದು ಭಾರತೀಯ ನಾಯಕರೊಬ್ಬರು ನಡೆಸಿದ ಮೊದಲ ಸುದೀರ್ಘ ರೋಡ್‌ಶೋ ಆಗಿದೆ.

ಪ್ರಧಾನಿ ಹಾದುಹೋಗುವ ಕ್ಷೇತ್ರಗಳಲ್ಲಿ ಮತದಾನ ಮಾಡಲು ಕೇವಲ ನಾಲ್ಕು ದಿನಗಳು ಮಾತ್ರ ಬಾಕಿ ಉಳಿದಿವೆ. ಇದು ಬಿಜೆಪಿಗೆ ಪ್ರತಿಷ್ಠೆಯ ಕದನವಾಗಿದೆ. ಕಳೆದ 1995 ರಿಂದ ಆಡಳಿತ ನಡೆಸುತ್ತಿರುವ ರಾಜ್ಯದಲ್ಲಿ ಸತತ ಏಳನೇ ಅವಧಿಗೆ ಪಕ್ಷವು ಗೆಲುವು ಸಾಧಿಸಿದೆ.

Gujarat Election 2022: ನಿಗದಿಯಾಗಿದ್ದ ಮದುವೆ ಸಮಯವನ್ನೇ ಬದಲಿಸಿಕೊಂಡು ಮತದಾ ವ್ಯಕ್ತಿGujarat Election 2022: ನಿಗದಿಯಾಗಿದ್ದ ಮದುವೆ ಸಮಯವನ್ನೇ ಬದಲಿಸಿಕೊಂಡು ಮತದಾ ವ್ಯಕ್ತಿ

ಗೋಧ್ರಾದಲ್ಲಿ ಸಾಬರಮತಿ ಎಕ್ಸ್‌ಪ್ರೆಸ್‌ನಲ್ಲಿ ಸಂಭವಿಸಿದ ಬೆಂಕಿಯ ಅವಘಡದ ನಂತರ 2002ರ ಗಲಭೆಯ ಕೇಂದ್ರಬಿಂದುಗಳಲ್ಲಿ ಒಂದಾದ ನರೋಡಾ ಗಾಮ್‌ನಿಂದ 50-ಕಿಮೀ ರೋಡ್‌ಶೋ ಗುರುವಾರ ಸಂಜೆ ಪ್ರಾರಂಭವಾಯಿತು. ಪ್ರಧಾನಿ ಮೋದಿ ನಡೆಸಿದ ರೋಡ್ ಶೋ ಮಾರ್ಗ ಯಾವ ರೀತಿಯಾಗಿತ್ತು? ಎಷ್ಟು ಕ್ಷೇತ್ರಗಳಲ್ಲಿ ಪ್ರಧಾನಿ ರೋಡ್ ಶೋ ಹಾದು ಹೋಯಿತು? ಮೊದಲ ಸುದೀರ್ಘ ರೋಡ್ ಶೋ ಅಂತಾ ಇದು ಏಕೆ ಅನಿಸಿಕೊಳ್ಳುತ್ತಿದೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಗುಜರಾತ್‌ನ 16 ಕಣಗಳಲ್ಲಿ ಪ್ರಧಾನಿ ರೋಡ್ ಶೋ

ಗುಜರಾತ್‌ನ 16 ಕಣಗಳಲ್ಲಿ ಪ್ರಧಾನಿ ರೋಡ್ ಶೋ

ಗುಜರಾತ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನಡೆಸುತ್ತಿರುವ ರೋಡ್ ಶೋ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಹಾದು ಹೋಗಲಿದೆ. ರಾಜ್ಯದ ಥಕ್ಕರ್‌ಬಾಪನಗರ, ಬಾಪುನಗರ, ನಿಕೋಲ್, ಅಮರೈವಾಡಿ, ಮಣಿನಗರ, ಡ್ಯಾನಿಲಿಂಬ್ಡಾ, ಜಮಾಲ್‌ಪುರ್ ಖಾಡಿಯಾ, ಎಲಿಸ್‌ಬ್ರಿಡ್ಜ್, ವೆಜಲ್‌ಪುರ್, ಘಟ್ಲೋಡಿಯಾ, ನರನ್‌ಪುರ್ ಮತ್ತು ಸಬರಮತಿ ಸೇರಿದಂತೆ 16 ವಿಧಾನಸಭಾ ಕ್ಷೇತ್ರಗಳ ಮೂಲಕ ಸಾಗಿದ ನಂತರ ಗಾಂಧಿನಗರ ದಕ್ಷಿಣದಲ್ಲಿ ಮುಕ್ತಾಯಗೊಳ್ಳಲಿದೆ. ಈ ಮಾರ್ಗದಲ್ಲಿ ಕ್ರಮಿಸುವ ರೋಡ್ ಶೋ ಸರಿಸುಮಾರು 3.5 ಗಂಟೆಗಳ ಕಾಲ ಸಾಗಲಿದೆ.

ಪ್ರಧಾನಿಯ ನೇತೃತ್ವದಲ್ಲಿ ಅತಿ ಉದ್ದದ ರೋಡ್ ಶೋ

ಪ್ರಧಾನಿಯ ನೇತೃತ್ವದಲ್ಲಿ ಅತಿ ಉದ್ದದ ರೋಡ್ ಶೋ

ಪ್ರಧಾನಮಂತ್ರಿ ನರೇಂದ್ರ ಮೋದಿ ನಡೆಸುತ್ತಿರುವ ರೋಡ್‌ಶೋ ಈ ಚುನಾವಣೆಯಲ್ಲಿ ಬಿಜೆಪಿಯ ಅತಿದೊಡ್ಡ ಕಾರ್ಯಕ್ರಮವಾಗಿದೆ. ಇಲ್ಲಿ ಸಾವಿರಾರು ಜನರು ಪಕ್ಷದ ಧ್ವಜಗಳನ್ನು ಬೀಸುತ್ತಾ ಹಬ್ಬದ ಡೋಲು ಬಾರಿಸುತ್ತಿದ್ದಾರೆ. ಹೂಮಾಲೆಗಳಿಂದ ಅಲಂಕರಿಸಲ್ಪಟ್ಟ ತೆರೆದ ಎಸ್‌ಯುವಿಯಲ್ಲಿ ಸವಾರಿ ಮಾಡುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ರಸ್ತೆಗಳಲ್ಲಿ ಸಾಲುಗಟ್ಟಿ ನಿಂತಿರುವ ಜನಸಮೂಹಕ್ಕೆ ಕೈ ಬೀಸುತ್ತಿದ್ದಾರೆ. ಇದು ಭಾರತೀಯ ರಾಜಕೀಯ ನಾಯಕನ ಅತಿ ಉದ್ದದ ರೋಡ್‌ಶೋ ಎಂದು ಪಕ್ಷ ಹೇಳಿಕೊಂಡಿದೆ. ಪಂಡಿತ್ ದೀನದಯಾಳ್ ಉಪಾಧ್ಯಾಯ, ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಸೇರಿದಂತೆ ಪ್ರಸಿದ್ಧ ವ್ಯಕ್ತಿಗಳನ್ನು ಗೌರವಿಸುವ ಸ್ಮಾರಕಗಳಲ್ಲಿ ದಾರಿಯುದ್ದಕ್ಕೂ 35 ನಿಲ್ದಾಣಗಳಿವೆ ಎಂದು ಬಿಜೆಪಿ ಹೇಳಿಕೊಂಡಿದೆ.

ನರೋಡಾ ಗಲಭೆ ಅಪರಾಧಿ ಪುತ್ರಿಗೆ ಟಿಕೆಟ್ ನೀಡಿದ ಬಿಜೆಪಿ

ನರೋಡಾ ಗಲಭೆ ಅಪರಾಧಿ ಪುತ್ರಿಗೆ ಟಿಕೆಟ್ ನೀಡಿದ ಬಿಜೆಪಿ

ಕಳೆದ 1990 ರಿಂದ ಪಕ್ಷಕ್ಕೆ ಮತ ಹಾಕುತ್ತಿರುವ ನರೋಡಾ ಕ್ಷೇತ್ರದಲ್ಲಿ ಗಲಭೆಯ ಅಪರಾಧಿಯ ಮಗಳಿಗೆ ಬಿಜೆಪಿ ಟಿಕೆಟ್ ನೀಡಿದೆ. 30 ವರ್ಷದ ಪಾಯಲ್ ಕುಕ್ರಾಣಿ ಬಿಜೆಪಿಯ ಅಭ್ಯರ್ಥಿ ಆಗಿದ್ದಾರೆ. 97 ಮುಸ್ಲಿಮರು ಕೊಲ್ಲಲ್ಪಟ್ಟ ನರೋಡಾ ಪಾಟಿಯಾ ಗಲಭೆ ಪ್ರಕರಣದ 16 ಅಪರಾಧಿಗಳಲ್ಲಿ ಒಬ್ಬರಾದ ಮನೋಜ್ ಕುಕ್ರಾಣಿ ಪುತ್ರಿಯೇ ಈ ಪಾಯಲ್ ಕುಕ್ರಾಣಿ. ಅರಿವಳಿಕೆ ತಜ್ಞೆಯಾಗಿರುವ ಅವರು ಈ ಬಾರಿ ಪಕ್ಷದಿಂದ ಕಣಕ್ಕಿಳಿದಿರುವ ಅತ್ಯಂತ ಕಿರಿಯ ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದಾರೆ.

ಈ ಹಿಂದೆ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮನೋಜ್ ಕುಕ್ರಾಣಿ ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ. ಗುಜರಾತ್ ಹೈಕೋರ್ಟ್ ಮನೋಜ್ ಮತ್ತು ಇತರ 15 ಜನರ ಶಿಕ್ಷೆಯನ್ನು ಎತ್ತಿಹಿಡಿದಿದೆ.

ನರೋಡಾ ಕ್ಷೇತ್ರದಲ್ಲಿ 'ಆಪ್' ಕಾ ಅಭ್ಯರ್ಥಿಯ ಕೈ ಹಿಡಿದ ಕೇಜ್ರಿವಾಲ್

ನರೋಡಾ ಕ್ಷೇತ್ರದಲ್ಲಿ 'ಆಪ್' ಕಾ ಅಭ್ಯರ್ಥಿಯ ಕೈ ಹಿಡಿದ ಕೇಜ್ರಿವಾಲ್

ಕಳೆದ 2017ರಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಅಖಾಡಕ್ಕೆ ಇಳಿದಿದ್ದ ಹಾಗೂ ಎರಡು ಅವಧಿ ಮುನ್ಸಿಪಲ್ ಕೌನ್ಸಿಲಪ್ ಆಗಿದ್ದ ಓಂಪ್ರಕಾಶ್ ತಿವಾರಿ ಅನ್ನು ಈ ಬಾರಿ ಆಪ್ ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ನರೋಡಾ ವಿಧಾನಸಭಾ ಕ್ಷೇತ್ರದಿಂದ ಓಂಪ್ರಕಾಶ್ ತಿವಾರಿ ಎಎಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಇದರ ಮಧ್ಯೆ 2002 ರಿಂದ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿಯ ಸಂಖ್ಯೆಯು ಸ್ಥಿರವಾಗಿ ಕುಗ್ಗುತ್ತಿದೆ. ಪ್ರಚಾರದ ಪ್ರಮುಖ ಮುಖವಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಜ್ಯದಲ್ಲಿ ಇದುವರೆಗೆ 20 ರೋಡ್ ಶೋ ನಡೆಸಿದ್ದು, ಎರಡನೇ ಹಂತದ ಮತದಾನಕ್ಕೂ ಮುಂಚಿತವಾಗಿ ಏಳು ಇತರ ಚುನಾವಣಾ ಮೆರವಣಿಗೆಯನ್ನು ನಿಗದಿಪಡಿಸಲಾಗಿದೆ.

ಗುಜರಾತ್‌ನಲ್ಲಿ ಎರಡನೇ ಹಂತದಲ್ಲಿ 93 ಕ್ಷೇತ್ರಗಳ ಮತದಾನ

ಗುಜರಾತ್‌ನಲ್ಲಿ ಎರಡನೇ ಹಂತದಲ್ಲಿ 93 ಕ್ಷೇತ್ರಗಳ ಮತದಾನ

ಗುಜರಾತ್‌ನ 93 ವಿಧಾನಸಭಾ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಸಲಾಗುತ್ತದೆ. ಈ ಸಂಬಂಧ ನವೆಂಬರ್ 10ರಂದು ಅಧಿಸೂಚನೆ ಹೊರಡಿಸಲಾಗಿದೆ. ನವೆಂಬರ್ 17ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು, ನವೆಂಬರ್ 18ರಂದು ನಾಮಪತ್ರ ಪರಿಶೀಲನೆ, ನವೆಂಬರ್ 21ರಂದು ನಾಮಪತ್ರ ವಾಪಸ್ ಪಡೆಯಲು ಕೊನೆ ದಿನಾಂಕವಾಗಿದೆ. ಡಿಸೆಂಬರ್ 5ರಂದು ಎರಡನೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಸಲಾಗುತ್ತದೆ. ಅಂತಿಮವಾಗಿ ಡಿಸೆಂಬರ್ 8ರಂದು 182 ವಿಇಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶ ಹೊರಬೀಳಲಿದೆ.

English summary
Gujarat Assembly Elections 2022: PM Narendra Modi Holds Longest-Ever Roadshow In State.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X