ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Gujarat Elections 2022: ಬೂತ್‌ ವಶಪಡಿಸಿಕೊಳ್ಳುವುದು ಸೇರಿದಂತೆ ಕಾಂಗ್ರೆಸ್‌ನಿಂದ 6 ಪ್ರಕರಣ ದಾಖಲು

|
Google Oneindia Kannada News

ಗಾಂಧಿನಗರ, ಡಿಸೆಂಬರ್‌ 01: ದೇಶದಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಗುಜರಾತ್‌ ವಿಧಾನಸಭೆಗೆ ಮೊದಲ ಹಂತದ ಮತದಾನ ಇಂದು ಮುಗಿದಿದೆ. ಶೇ.60 ಮತದಾನವಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ.

89 ವಿಧಾನಸಭೆಗೆ ನಡೆದ ಮೊದಲ ಹಂತದ ಮತದಾನ ಪ್ರಕ್ರಿಯೆಯಲ್ಲಿ ಹಲವು ಲೋಪದೋಷಗಳ ಕಂಡುಬಂದಿವೆ ಎಂದು ವಿರೋಧ ಪಕ್ಷ ಕಾಂಗ್ರೆಸ್‌ ಆರೋಪಿಸಿದೆ.

Gujarat Election 2022 Phase 1 : ಗುಜರಾತ್‌: ಮೊದಲ ಹಂತದಲ್ಲಿ ಯಾವ ಕ್ಷೇತ್ರಗಳಲ್ಲಿ ಮತದಾನ? Gujarat Election 2022 Phase 1 : ಗುಜರಾತ್‌: ಮೊದಲ ಹಂತದಲ್ಲಿ ಯಾವ ಕ್ಷೇತ್ರಗಳಲ್ಲಿ ಮತದಾನ?

ಈ ಸಂಬಂಧ ಆರು ವಿಭಿನ್ನ ದೂರುಗಳನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ಸಲ್ಲಿಸಿದೆ.

Gujarat Assembly Elections 2022 Congress submitted six different complaints

ಸುರೇಂದ್ರ ನಗರ ಜಿಲ್ಲೆಯಲ್ಲಿ 'ಮತದಾನದ ಕೇಂದ್ರವನ್ನು ವಶಪಡಿಸಿಕೊಳ್ಳವುದು' ಸೇರಿದಂತೆ ಒಟ್ಟು ಆರು ಪ್ರಕರಣಗಳನ್ನು ಕಾಂಗ್ರೆಸ್‌ ದಾಖಲಿಸಿದೆ.

ಮೊದಲ ಹಂತದ ಮತದಾನದ ಬಗ್ಗೆ ಪ್ರತಿಕ್ರಿಯಿಸಿರುವ ಗುಜರಾತ್ ಮುಖ್ಯ ಚುನಾವಣಾಧಿಕಾರಿ ಪಿ ಭಾರತಿ, 'ಇಂದು ನಡೆದ ಮೊದಲ ಹಂತದ ವಿಧಾನಸಭಾ ಚುನಾವಣೆಯ ಮತದಾನ ಶಾಂತಿಯುತವಾಗಿ ಮುಕ್ತಾಯಗೊಂಡಿದೆ' ಎಂದು ಹೇಳಿದ್ದಾರೆ.

ಗುಜರಾತ್ ವಿಧಾನಸಭೆಯ ಮೊದಲ ಹಂತದ ಚುನಾವಣೆಯಲ್ಲಿ ಶೇ.60.20ರಷ್ಟು ಮತದಾನವಾಗಿದೆ ಎಂದು ಭಾರತೀಯ ಚುನಾವಣಾ ಆಯೋಗ ಮಾಹಿತಿ ನೀಡಿದೆ.

Gujarat Assembly Elections 2022 Congress submitted six different complaints

ದೇವಭೂಮಿ ದ್ವಾರಕಾದಲ್ಲಿ ಶೇ 59.11 ಕ್ಕಿಂತ ಹೆಚ್ಚು ಮತದಾನವಾಗಿದೆ. ಅಮ್ರೇಲಿಯಲ್ಲಿ ಶೇಕಡವಾರು (52.73), ಭರೂಚ್ (59.36), ಭಾವನಗರ (51.34), ಭಾವನಗರ (51.34), ಬೊಟಾಡ್ (51.64), ಜಾಮ್‌ನಗರ (53.98), ಜುನಾಗಢ್ (52.04), ಕಚ್ಚ್ (54.52), ನವಸಾರಿ (65), ರಾಜ್‌ಕೋಟ್ (51.66), ಸೂರತ್ (57.16), ಸುರೇಂದ್ರನಗರ (58.14), ಮತ್ತು ವಲ್ಸಾದ್ (62.46) ರಷ್ಟು ಮತದಾನವಾಗಿದೆ.

ಒಟ್ಟು ಮತದಾರರಲ್ಲಿ 1,24,33,362 ಪುರುಷರು ಮತ್ತು 1,1,5,42,811 ಮಹಿಳೆಯರು ಇದ್ದಾರೆ. ಡಿಸೆಂಬರ್ 5 ರಂದು ಎರಡನೇ ಹಂತದ ಮತದಾನ ನಡೆಯಲಿದ್ದು, ಹಿಮಾಚಲ ಪ್ರದೇಶ ಚುನಾವಣೆಯೊಂದಿಗೆ ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.

English summary
Gujarat Assembly Elections 2022 Opposition Congress submitted six different complaints, one of them related to "booth capturing" in Surendranagar district, to election authorities after first phase of voting on 89 Assembly seats ended today,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X