• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಚುನಾವಣೆ: ಬಂಡಾಯ ಶಾಸಕರನ್ನು ಅಮಾನತು ಮಾಡಿದ ಬಿಜೆಪಿ

|
Google Oneindia Kannada News

ಅಹಮದಾಬಾದ್, ನ. 20: ಗುಜರಾತ್ ವಿಧಾನಸಭಾ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ 7 ನಾಯಕರನ್ನು ಬಿಜೆಪಿ ಭಾನುವಾರ ಅಮಾನತುಗೊಳಿಸಿದೆ.

ಮುಂಬರುವ ಚುನಾವಣೆಗೆ ಪಕ್ಷದಿಂದ ಟಿಕೆಟ್ ನಿರಾಕರಿಸಿದ ನಂತರ ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ ತನ್ನ ಏಳು ಪಕ್ಷದ ನಾಯಕರನ್ನು ಬಿಜೆಪಿ ಅಮಾನತುಗೊಳಿಸಿದೆ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಕ್ಕಾಗಿ ಏಳು ಶಾಸಕರನ್ನು ಆರು ವರ್ಷಗಳ ಕಾಲ ಅಮಾನತುಗೊಳಿಸಲಾಗಿದೆ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ಸಿಆರ್ ಪಾಟೀಲ್ ತಿಳಿಸಿದ್ದಾರೆ.

ಗುಜರಾತ್ ಚುನಾವಣೆ: ಗರಿಗೆದರಿದ ಚುನಾವಣ ಪ್ರಚಾರ, ಭಾನುವಾರ ಮೋದಿ, ಶಾ ರ್‍ಯಾಲಿಗುಜರಾತ್ ಚುನಾವಣೆ: ಗರಿಗೆದರಿದ ಚುನಾವಣ ಪ್ರಚಾರ, ಭಾನುವಾರ ಮೋದಿ, ಶಾ ರ್‍ಯಾಲಿ

ನರ್ಮದಾ ಜಿಲ್ಲೆಯ ನಂದೋಡ್‌ನ ಹರ್ಷದ್ ವಾಸವ, ಜುನಾಗಢದ ಕೇಶೋದ್ ಜುನಾಗಢದಿಂದ ಟಿಕೆಟ್ ಬಯಸಿದ್ದ ಅರವಿಂದ್ ಲಡಾನಿ ಅವರನ್ನು ಅಮಾನತುಗೊಳಿಸಲಾಗಿದೆ.

ಬಂಡಾಯವೆದ್ದ ಏಳು ಬಿಜೆಪಿ ಶಾಸಕರ ಅಮಾನತು

ಬಂಡಾಯವೆದ್ದ ಏಳು ಬಿಜೆಪಿ ಶಾಸಕರ ಅಮಾನತು

ಸುರೇಂದ್ರನಗರದ ಧಂಗದ್ರಾದಿಂದ ಛತ್ರಸಿಂಗ್ ಗುಂಜಾರಿಯಾ, ವಲ್ಸಾದ್‌ನ ಪರಡಿಯಿಂದ ಕೇತನ್ ಭಾಯ್ ಪಟೇಲ್, ರಾಜ್‌ಕೋಟ್ ಗ್ರಾಮಾಂತರದಿಂದ ಭರತ್ ಭಾಯಿ ಚಾವ್ಡಾ, ಗಿರ್ ಸೋಮನಾಥ್ ಜಿಲ್ಲೆಯ ವೆರಾವಲ್‌ನಿಂದ ಉದಯ್ ಭಾಯಿ ಶಾ ಮತ್ತು ಅಮ್ರೇಲಿಯ ರಾಜುಲಾ ಅವರಿಂದ ಟಿಕೆಟ್ ಬಯಸಿದ್ದ ಕರಣ್ ಭಾಯಿ ಬಾರಯ್ಯ ಅಮಾನತುಗೊಂಡಿದ್ದಾರೆ.

ಗುಜರಾತಿನಲ್ಲಿ ಏಳನೇ ಅವಧಿಗೆ ಅಧಿಕಾರ ನಡೆಸಲು ಬಯಸುತ್ತಿರುವ ಬಿಜೆಪಿ 42 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿದೆ. 160 ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಿಸಿದ್ದ ಬಿಜೆಪಿ 38 ಹಾಲಿ ಶಾಸಕರನ್ನು ಕೈಬಿಟ್ಟಿದೆ.

ಇದರಲ್ಲಿ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಮಾಜಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಸೇರಿದಂತೆ ಪಕ್ಷದ ಹಲವು ಪ್ರಮುಖಡರಿಗೆ ಟಿಕೆಟ್ ನಿರಾಕರಿಸಲಾಗಿದೆ.

ಅತ್ಯಧಿಕ ಸ್ಥಾನಗಳಲ್ಲಿ ಗೆಲುವ ಸಾಧಿಸುವ ವಿಶ್ವಾಸದಲ್ಲಿ ಬಿಜೆಪಿ

ಅತ್ಯಧಿಕ ಸ್ಥಾನಗಳಲ್ಲಿ ಗೆಲುವ ಸಾಧಿಸುವ ವಿಶ್ವಾಸದಲ್ಲಿ ಬಿಜೆಪಿ

ಗುಜರಾತ್‌ನಲ್ಲಿ ಕಳೆದ 27 ವರ್ಷಗಳಿಂದ ಅಧಿಕಾರದಲ್ಲಿರುವ ಭಾರತೀಯ ಜನತಾ ಪಕ್ಷ, 2017ರ ಗುಜರಾತ್ ಚುನಾವಣೆಯಲ್ಲಿ ಬಿಜೆಪಿ 182 ಸ್ಥಾನಗಳ ಪೈಕಿ 99 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. 2014 ರಲ್ಲಿ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದ ನರೇಂದ್ರ ಮೋದಿ ಗುಜರಾತ್‌ನಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿಯಾಗಿದ್ದಾರೆ.

ಈ ಬಾರಿ, ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಸಿಆರ್ ಪಾಟೀಲ್ ನಾಯಕತ್ವದಲ್ಲಿ ಪಕ್ಷವು ತನ್ನ ಅತ್ಯಧಿಕ ಸ್ಥಾನಗಳಲ್ಲಿ ಗೆಲ್ಲವ ಭರವಸೆ ಹೊಂದಿದೆ. ಬಿಜೆಪಿ ಭದ್ರಕೋಟೆಯಾಗಿರುವ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಭರ್ಜರಿ ಪೈಪೋಟಿ ನೀಡಲು ತಯಾರಾಗುತ್ತಿವೆ.

ಗುಜರಾತ್‌ನಲ್ಲಿ ಮೂರು ದಿನ ಪ್ರಧಾನಿ ಮೋದಿ ಪ್ರಚಾರ

ಗುಜರಾತ್‌ನಲ್ಲಿ ಮೂರು ದಿನ ಪ್ರಧಾನಿ ಮೋದಿ ಪ್ರಚಾರ

ಗುಜರಾತ್‌ನಲ್ಲಿ ಪ್ರಧಾನಿ ಮೋದಿ ನವೆಂಬರ್ 20 ರಿಂದ ನವೆಂಬರ್ 22 ರವರೆಗೆ ಸತತ ಮೂರು ದಿನಗಳ ಕಾಲ ಸೌರಾಷ್ಟ್ರದಲ್ಲಿ ರ್‍ಯಾಲಿಗಳನ್ನು ನಡೆಸಲು ನಿರ್ಧರಿಸಿದ್ದಾರೆ.

ಭಾನುವಾರ ಗುಜರಾತ್‌ನ ಧೋರಾಜಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿಯನ್ನು ಹೆಸರಿಸದೆ ಅವರನ್ನು ಮತ್ತು ಅವರ ಭಾರತ್ ಜೋಡೋ ಯಾತ್ರೆಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

"ಮೂರು ದಶಕಗಳಿಂದ ನರ್ಮದಾ ಅಣೆಕಟ್ಟು ಯೋಜನೆಯನ್ನು ಸ್ಥಗಿತಗೊಳಿಸಿದ ಮಹಿಳೆಯೊಂದಿಗೆ ಕಾಂಗ್ರೆಸ್ ನಾಯಕರೊಬ್ಬರು ಪಾದಯಾತ್ರೆ ನಡೆಸುತ್ತಿರುವುದು ಕಂಡುಬಂದಿದೆ. ನರ್ಮದಾ ಅಣೆಕಟ್ಟಿನ ವಿರುದ್ಧ ಹೋರಾಟ ನಡೆಸಿದವರ ಹೆಗಲ ಮೇಲೆ ಕೈಯಿಟ್ಟುಕೊಂಡು ಪಾದಯಾತ್ರೆ ನಡೆಸುತ್ತಿದ್ದಾರೆ. ಅಣೆಕಟ್ಟೆ ಕಟ್ಟದಿದ್ದರೇ ಇಂದು ಏನಾಗುತ್ತಿತ್ತು?" ಎಂದು ಮೋದಿ ಕಿಡಿ ಕಾರಿದ್ದಾರೆ.

ಗುಜರಾತ್‌ನಲ್ಲಿ ಬಿಜೆಪಿ ಭರ್ಜರಿ ಜಯ ಕಾಣಲಿದೆ; ಹಾರ್ದಿಕ್ ಪಟೇಲ್

ಗುಜರಾತ್‌ನಲ್ಲಿ ಬಿಜೆಪಿ ಭರ್ಜರಿ ಜಯ ಕಾಣಲಿದೆ; ಹಾರ್ದಿಕ್ ಪಟೇಲ್

ಅಸ್ತಿತ್ವದಲ್ಲಿರುವ ಕೋಟಾಕ್ಕೆ ಧಕ್ಕೆಯಾಗದಂತೆ 10 ಪ್ರತಿಶತದಷ್ಟು ಆರ್ಥಿಕವಾಗಿ ದುರ್ಬಲ ವರ್ಗದ (ಇಡಬ್ಲ್ಯೂಎಸ್) ಮೀಸಲಾತಿ ನೀಡುವ ಕೇಂದ್ರದ ನಿರ್ಧಾರವು ಗುಜರಾತ್‌ನಲ್ಲಿ ಪಟೇಲರ ಅನೇಕ ಸಮಸ್ಯೆಗಳನ್ನು ಪರಿಹರಿಸಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸಮುದಾಯವು ಬಿಜೆಪಿಯ ಬೃಹತ್ ಜಯವನ್ನು ಖಚಿತಪಡಿಸುತ್ತದೆ ಎಂದು ಪಕ್ಷದ ನಾಯಕ ಹಾರ್ದಿಕ್ ಪಟೇಲ್ ಹೇಳಿದ್ದಾರೆ.

182 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಗುಜರಾತ್ ರಾಜ್ಯದಲ್ಲಿ 89 ಸ್ಥಾನಗಳಿಗೆ ಡಿಸೆಂಬರ್ 1 ರಂದು ಚುನಾವಣೆ ನಡೆಯಲಿದೆ. ಮೊದಲ ಹಂತದ ಮತದಾನದಲ್ಲಿ 70 ಮಹಿಳೆಯರು ಸೇರಿದಂತೆ ಒಟ್ಟು 788 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ಉಳಿದ 93 ಸ್ಥಾನಗಳಿಗೆ ಡಿಸೆಂಬರ್ 5 ರಂದು ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಚುನಾವಣಾ ಆಯೋಗವು ಇದುವರೆಗೆ 1,515 ನಾಮಪತ್ರಗಳನ್ನು ಸ್ವೀಕರಿಸಿದೆ. ಡಿಸೆಂಬರ್ 8 ರಂದು ಹಿಮಾಚಲ ಪ್ರದೇಶದ ಫಲಿತಾಂಶದ ಜೊತೆಗೆ ಗುಜರಾತ್ ಚುನಾವಣೆಯ ಫಲಿತಾಂಶ ಹೊರ ಬೀಳಲಿದೆ.

ನರೇಂದ್ರ ಮೋದಿ
Know all about
ನರೇಂದ್ರ ಮೋದಿ
English summary
Gujarat Assembly Elections 2022: BJP suspends seven MLAs who filed nominations as independent candidates in upcoming Gujarat polls. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X