• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಚುನಾವಣೆ: ಇಂದು ಮತಕಟ್ಟೆಗಳಲ್ಲಿ ಬಿಗಿ ಭದ್ರತೆ

|
Google Oneindia Kannada News

ಅಹಮದಾಬಾದ್ ಡಿಸೆಂಬರ್ 1: ಗುಜರಾತ್ ವಿಧಾನಸಭೆ ಚುನಾವಣೆ 2022 ರ ಮೊದಲ ಹಂತದ ಮತದಾನ ಆರಂಭಗೊಂಡಿದೆ. ಇಂದು 788 ಅಭ್ಯರ್ಥಿಗಳ ಭವಿಷ್ಯ ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ (ಇವಿಎಂ) ಲಾಕ್ ಆಗಲಿದೆ. ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ನೂರಾರು ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧರಿಸುವ ಮತದಾನ ಗುರುವಾರ (ಡಿಸೆಂಬರ್ 1) ಬೆಳಗ್ಗೆ 7 ಗಂಟೆಗೆ ಆರಂಭವಾಗಿದೆ. ಕಚ್, ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್‌ನ 19 ಜಿಲ್ಲೆಗಳಲ್ಲಿ ಹರಡಿರುವ 89 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಚುನಾವಣಾ ಆಯೋಗದ ಪ್ರಕಾರ ಸಂಜೆ 5 ಗಂಟೆಗೆ ಮತದಾನ ಮುಕ್ತಾಯವಾಗಲಿದೆ.

ಗುಜರಾತ್ ಚುನಾವಣೆಯಲ್ಲಿ ಒಟ್ಟು 39 ರಾಜಕೀಯ ಪಕ್ಷಗಳು ಸ್ಪರ್ಧಿಸುತ್ತಿವೆ. ಮೊದಲ ಹಂತದಲ್ಲಿ 788 ಅಭ್ಯರ್ಥಿಗಳ ಪೈಕಿ 718 ಪುರುಷ ಅಭ್ಯರ್ಥಿಗಳು ಮತ್ತು 70 ಮಹಿಳಾ ಅಭ್ಯರ್ಥಿಗಳು ಇದ್ದಾರೆ. ಒಟ್ಟು 2,39,76,670 ಮತದಾರರು ಮತದಾನ ಮಾಡಲಿದ್ದಾರೆ. ಇವರಲ್ಲಿ 1,24,33,362 ಪುರುಷರು, 1,1,5,42,811 ಮಹಿಳೆಯರು ಮತ್ತು 497 ತೃತೀಯಲಿಂಗಿಗಳಿದ್ದಾರೆ. 4 ಲಕ್ಷಕ್ಕೂ ಹೆಚ್ಚು ಅಂಗವಿಕಲ (ಪಿಡಬ್ಲ್ಯುಡಿ) ಮತದಾರರು ಸಹ ಮತ ಚಲಾಯಿಸಲು ಅರ್ಹರಾಗಿದ್ದಾರೆ.

ಮತಕಟ್ಟೆಗಳಲ್ಲಿ ಮತದಾನ ಆರಂಭ

80 ವರ್ಷ ಮೇಲ್ಪಟ್ಟ ಸುಮಾರು 9.8 ಲಕ್ಷ ಹಿರಿಯ ನಾಗರಿಕರು ಮತದಾನ ಮಾಡಲು ಸಾಧ್ಯವಾಗುತ್ತದೆ. ಸುಮಾರು 10,000 ಮತದಾರರು 100 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. ಕೆಲವು ಬೂತ್‌ಗಳನ್ನು (182) ಪಿಡಬ್ಲ್ಯುಡಿ ನೌಕರರು ಸ್ಥಾಪಿಸಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ರಾಜೀವ್ ಕುಮಾರ್ ತಿಳಿಸಿದ್ದಾರೆ. ಅದೇ ರೀತಿ ಕೆಲವು ಬೂತ್‌ಗಳನ್ನು (1,274) ಮಹಿಳೆಯರೇ ಸ್ಥಾಪಿಸಿದ್ದಾರೆ. ಇದು ಅವರ ಸಬಲೀಕರಣದ ಪ್ರದರ್ಶನವಾಗಿದೆ. ಮತದಾನ ನಡೆಯುವ ಜಿಲ್ಲೆಗಳಲ್ಲಿ ಒಟ್ಟು 25,430 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಸಾಕಷ್ಟು ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.

25,430 ಮತಗಟ್ಟೆಗಳಲ್ಲಿ ಮತದಾನ

25,430 ಮತಗಟ್ಟೆಗಳಲ್ಲಿ ಮತದಾನ

ಗುಜರಾತಿನಲ್ಲಿ ಮೊದಲ ಹಂತದ ಚುನಾವಣೆಯಲ್ಲಿ 25,430 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ನಗರ ಪ್ರದೇಶದಲ್ಲಿ 9,014 ಮತಗಟ್ಟೆಗಳಲ್ಲಿ 16,416 ಗ್ರಾಮೀಣ ಪ್ರದೇಶದಲ್ಲಿ 18 ರಿಂದ 19 ವರ್ಷದೊಳಗಿನ 5,74,560 ಮತದಾರರು, 99 ವರ್ಷ ಮೇಲ್ಪಟ್ಟ 4,945 ಮತದಾರರು ಮತ್ತು 163 ಅನಿವಾಸಿ ಭಾರತೀಯ ಮತದಾರರು, ಪುರುಷರು 38 ಮಂದಿ ಮಹಿಳೆಯರು ಮತಚಲಾಯಿಸಲಿದ್ದಾರೆ. ಮೊದಲ ಹಂತದ ಮತದಾನದಲ್ಲಿ 19 ಜಿಲ್ಲೆಗಳ 13,065 ಮತಗಟ್ಟೆಗಳ ನೇರ ವೆಬ್‌ಕಾಸ್ಟಿಂಗ್ ಮಾಡಲಾಗುವುದು. ಮುಖ್ಯ ಚುನಾವಣಾಧಿಕಾರಿಯಿಂದ ಗಾಂಧಿನಗರದಲ್ಲಿ ರಾಜ್ಯ ಮಟ್ಟದ ಮೇಲ್ವಿಚಾರಣಾ ಕೋಶವನ್ನು ಸ್ಥಾಪಿಸಲಾಗಿದೆ. ಚುನಾವಣಾ ಆಯೋಗದ ಪ್ರಕಾರ ಬೆಳಗ್ಗೆ 6.30ರಿಂದ ಮತದಾನ ಪ್ರಕ್ರಿಯೆ ಮುಗಿಯುವವರೆಗೆ ನಿರಂತರ ನಿಗಾ ಇರಿಸಲಾಗುತ್ತದೆ. ಗುಜರಾತ್‌ನಲ್ಲಿ 2022 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮತದಾನ ಪ್ರಕ್ರಿಯೆಯ ಮೇಲೆ ನಿಕಟ ನಿಗಾ ಇಡಲು ರಾಜ್ಯದ ಶೇಕಡಾ 50 ಕ್ಕಿಂತ ಹೆಚ್ಚು ಮತದಾನ ಕೇಂದ್ರಗಳ ಲೈವ್ ವೆಬ್‌ಕಾಸ್ಟಿಂಗ್ ಮಾಡಲಾಗುವುದು. ಮೊದಲ ಹಂತದಲ್ಲಿ ಕಚ್, ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್‌ನ 19 ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ.

ಭದ್ರತಾ ವ್ಯವಸ್ಥೆ

ಭದ್ರತಾ ವ್ಯವಸ್ಥೆ

ಚುನಾವಣೆಗೆ ಮೊದಲ ಹಂತದಲ್ಲಿ ಒಟ್ಟು 34,324 ಬ್ಯಾಲೆಟ್ ಯೂನಿಟ್‌ಗಳು, ಅಷ್ಟೇ ಸಂಖ್ಯೆಯ ಕಂಟ್ರೋಲ್ ಯೂನಿಟ್‌ಗಳು ಮತ್ತು 38,749 ವೋಟರ್ ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಯಂತ್ರಗಳನ್ನು ಬಳಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.

ಚುನಾವಣಾ ಪ್ರಕ್ರಿಯೆ ಸುಗಮವಾಗಿ ನಡೆಯಲು ಒಟ್ಟು 2,20,288 ತರಬೇತಿ ಪಡೆದ ಅಧಿಕಾರಿಗಳು ಮತ್ತು ನೌಕರರು ಕರ್ತವ್ಯ ನಿರ್ವಹಿಸಲಿದ್ದಾರೆ ಮತ್ತು ಮೊದಲ ಹಂತದಲ್ಲಿ 27,978 ಪ್ರಿಸೈಡಿಂಗ್ ಅಧಿಕಾರಿಗಳು ಮತ್ತು 78,985 ಮತಗಟ್ಟೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದೆ.

ಜಡೇಜಾ ಪತ್ನಿ ವಿಶ್ವಾಸ

ಜಡೇಜಾ ಪತ್ನಿ ವಿಶ್ವಾಸ

ಜಾಮ್‌ನಗರ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತು ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ರವೀಂದ್ರ ಜಡೇಜಾ, "ಇಂದು ಬಹಳ ಮಹತ್ವದ ದಿನ. ಎಲ್ಲ ಬಿಜೆಪಿ ಕಾರ್ಯಕರ್ತರ ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಆದಷ್ಟು ಮತದಾನ ಮಾಡುವಂತೆ ಜನರಲ್ಲಿ ಮನವಿ ಮಾಡುತ್ತೇನೆ'' ಎಂದರು.

English summary
Gujarat Assembly Election 2022: Today the first phase of voting is going on in 89 constituencies spread over 19 districts of Gujarat and tight police security has been provided.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X