ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಚುನಾವಣೆಗೆ ಕಾಂಗ್ರೆಸ್‌ನ 40 ಸ್ಟಾರ್ ಪ್ರಚಾರಕರಲ್ಲಿ ಖರ್ಗೆ, ಸೋನಿಯಾ, ರಾಹುಲ್

|
Google Oneindia Kannada News

ನವದೆಹಲಿ, ನವೆಂಬರ್ 16: ಗುಜರಾತ್ ಚುನಾವಣೆಗೆ ಕಾಂಗ್ರೆಸ್ ತನ್ನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಗಾಂಧಿ ವಾದ್ರಾ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಭೂಪೇಶ್ ಬಘೇಲ, ಸಚಿನ್ ಪೈಲೆಟ್, ಜಿಗ್ನೇಶ್ ಮೇವಾನಿ, ಕನ್ಹಯ್ಯ ಕುಮಾರ್ ಸೇರಿದಂತೆ ಇತರರು ಸ್ಟಾರ್ ಪ್ರಚಾರಕರಾಗಿ ಗುಜರಾತ್‌ನಲ್ಲಿ ಪ್ರಚಾರ ಮಾಡಲಿದ್ದಾರೆ.

ಈ ಬಾರಿ ಬಿಜೆಪಿ ಭದ್ರಕೋಟೆಯಾದ ಗುಜರಾತ್‌ನಲ್ಲಿ ತ್ರಿಕೋನ ಸ್ಪರ್ಧೆ ನಡೆಯಲಿದೆ. ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ 24 ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರದಲ್ಲಿರುವ ಆಡಳಿತಾರೂಢ ಬಿಜೆಪಿಗೆ ಎಎಪಿ ಹಾಗೂ ಕಾಂಗ್ರೆಸ್ ಕಠಿಣ ಸ್ಪರ್ಧೆ ನೀಡಲಿವೆ. ಈಗಾಗಲೇ ಬಿಜೆಪಿ ಹಾಗೂ ಎಎಪಿ ಹಲವಾರು ಯೋಜನೆಗಳ ಭರವಸೆಯನ್ನು ನೀಡಿದ್ದು ಅದಕ್ಕೆ ಸೆಡ್ಡು ಹೊಡೆದಂತೆ ಕಾಂಗ್ರೆಸ್ ಹಲವಾರು ಯೋಜನೆಗಳ ಮೂಲಕ ಮತದಾರರನ್ನು ಸೆಳೆಯಲಿದೆ.

ಕಲಬುರಗಿ: ಖಾಸಗಿ ಅಂಗಗಳನ್ನು ಕತ್ತರಿಸಿ ಬಿಜೆಪಿ ಮುಖಂಡನ ಭೀಕರ ಹತ್ಯೆ ಕಲಬುರಗಿ: ಖಾಸಗಿ ಅಂಗಗಳನ್ನು ಕತ್ತರಿಸಿ ಬಿಜೆಪಿ ಮುಖಂಡನ ಭೀಕರ ಹತ್ಯೆ

3,000 ನಿರುದ್ಯೋಗ ಭತ್ಯೆ

ಸರ್ಕಾರ ಮತ್ತು ಅರೆ ಸರ್ಕಾರಿ ಇಲಾಖೆಗಳಲ್ಲಿ 10 ಲಕ್ಷ ಉದ್ಯೋಗಗಳು, 10 ಲಕ್ಷದವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ, 500 ಕ್ಕೆ ಎಲ್‌ಪಿಜಿ ಸಿಲಿಂಡರ್ ಮತ್ತು ಪ್ರತಿ ತಿಂಗಳು 300 ಉಚಿತ ವಿದ್ಯುತ್ ಯುನಿಟ್‌ಗಳಂತಹ ಪ್ರಮುಖ ಭರವಸೆಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯದಲ್ಲಿ ಬಿಜೆಪಿಗೆ ಸವಾಲು ಹಾಕಲು ಕಾಂಗ್ರೆಸ್ ಸಿದ್ಧವಾಗಿದೆ.

ಶನಿವಾರ ತನ್ನ ಪ್ರಣಾಳಿಕೆಯನ್ನು ಹೊರತಂದಿರುವ ಕಾಂಗ್ರೆಸ್ ತಿಂಗಳಿಗೆ 3,000 ನಿರುದ್ಯೋಗ ಭತ್ಯೆ, ದಿವ್ಯಾಂಗರು, ವಿಧವೆಯರು, ಹಿರಿಯ ನಾಗರಿಕರು ಮತ್ತು ನಿರ್ಗತಿಕ ಮಹಿಳೆಯರಿಗೆ 2,000 ಪಿಂಚಣಿ ಮತ್ತು ಮೀನುಗಾರರಿಗೆ 3 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡುವುದಾಗಿ ಭರವಸೆ ನೀಡಿದೆ.

11 ಅಪರಾಧಿಗಳಿಗೆ ಜೈಲು ಶಿಕ್ಷೆ ನೀಡುವ ಭರವಸೆ

11 ಅಪರಾಧಿಗಳಿಗೆ ಜೈಲು ಶಿಕ್ಷೆ ನೀಡುವ ಭರವಸೆ

ಮಾತ್ರವಲ್ಲದೆ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ 2002 ರ ಬಿಲ್ಕಿಸ್ ಬಾನೋ ಪ್ರಕರಣದಲ್ಲಿ 11 ಅಪರಾಧಿಗಳಿಗೆ ಜೈಲಿನಿಂದ ಅಕಾಲಿಕ ಬಿಡುಗಡೆಗೆ ಅವಕಾಶ ಮಾಡಿಕೊಟ್ಟಿರುವ ರಾಜ್ಯ ಸರ್ಕಾರ ನೀಡಿದ್ದ ಉಪಶಮನವನ್ನು ಹಿಂಪಡೆಯುವುದಾಗಿ ಹೇಳಿದೆ. ಮುಂಬರುವ ಗುಜರಾತ್ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರೆ ಅಹಮದಾಬಾದ್‌ನ ಮೊಟೆರಾ ಪ್ರದೇಶದಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದ ಹೆಸರನ್ನು ಸರ್ದಾರ್ ಪಟೇಲ್ ಕ್ರೀಡಾಂಗಣ ಎಂದು ಮರುಸ್ಥಾಪಿಸುವುದಾಗಿ ಪಕ್ಷವು ಭರವಸೆ ನೀಡಿದೆ.

ಐದು ಚುನಾವಣಾ ವೀಕ್ಷಕರ ನೇಮಕ

ಐದು ಚುನಾವಣಾ ವೀಕ್ಷಕರ ನೇಮಕ

ಜೊತೆಗೆ ಸೋಮವಾರ ಪಕ್ಷ ರಾಜ್ಯ ಚುನಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಐದು ಚುನಾವಣಾ ವೀಕ್ಷಕರನ್ನು ನೇಮಿಸಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಅವರು ಸೂರತ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ದಕ್ಷಿಣ ವಲಯಕ್ಕೆ ಪಕ್ಷದ ವೀಕ್ಷಕರಾಗಿರುತ್ತಾರೆ ಮತ್ತು ಮೋಹನ್ ಪ್ರಕಾಶ್ ಅವರು ಸೌರಾಷ್ಟ್ರ ವಲಯದಲ್ಲಿ ಚುನಾವಣೆಯನ್ನು ನೋಡಿಕೊಳ್ಳುತ್ತಾರೆ ಮತ್ತು ರಾಜ್‌ಕೋಟ್‌ನಲ್ಲಿ ಪ್ರಧಾನ ಕಚೇರಿಯಲ್ಲಿರುತ್ತಾರೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಅವರನ್ನು ಬರೋಡಾದಲ್ಲಿ ಇರಿಸಲಾಗುತ್ತದೆ. ಇವರು ಮಧ್ಯ ಪ್ರದೇಶದ ಚುನಾವಣೆಯನ್ನು ನೋಡಿಕೊಳ್ಳುತ್ತಾರೆ. ಬಿಕೆ ಹರಿಪ್ರಸಾದ್ ಉತ್ತರ ವಲಯವನ್ನು ನೋಡಿಕೊಳ್ಳುತ್ತಾರೆ. ಇವರು ಅಹಮದಾಬಾದ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುತ್ತಾರೆ. ಕಾಂಗ್ರೆಸ್ ಮುಖಂಡ ಕೆ.ಎಚ್.ಮುನಿಯಪ್ಪ ಐದನೇ ವಲಯ ವೀಕ್ಷಕರಾಗಲಿದ್ದಾರೆ.

ಮತದಾನ ಮತ್ತು ಫಲಿತಾಂಶದ ದಿನಾಂಕ

ಮತದಾನ ಮತ್ತು ಫಲಿತಾಂಶದ ದಿನಾಂಕ

182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ. ಗುಜರಾತ್‌ನ ಒಟ್ಟು 182 ವಿಧಾನಸಭಾ ಸ್ಥಾನಗಳ ಪೈಕಿ 89 ಸ್ಥಾನಗಳಿಗೆ ಡಿಸೆಂಬರ್ 1 ರಂದು ಮತ್ತು ಉಳಿದ 93 ಸ್ಥಾನಗಳಿಗೆ ಡಿಸೆಂಬರ್ 5 ರಂದು ಮತದಾನ ನಡೆಯಲಿದೆ.ಗುಜರಾತ್ 182 ವಿಧಾನಸಭಾ ಸ್ಥಾನಗಳನ್ನು ಹೊಂದಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ 99 ಸ್ಥಾನಗಳನ್ನು ಗೆದ್ದು ಸತತ ಆರನೇ ಬಾರಿ ಗೆಲುವನ್ನು ಸಾಧಿಸಿತ್ತು. ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ 77 ಸ್ಥಾನಗಳನ್ನು ಗಳಿಸಿತ್ತು.

ಶೇಕಡಾವಾರು ಲೆಕ್ಕದಲ್ಲಿ ಬಿಜೆಪಿ ಶೇಕಡಾ 49.05 ಮಾನ್ಯ ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಶೇಕಡಾ 42.97 ರಷ್ಟು ಮತಗಳನ್ನು ಪಡೆದಿತ್ತು. ಕಳೆದ ವಿಧಾನಸಭಾ ಚುನಾವಣೆಯ ನಂತರ ಕೆಲವು ಸದಸ್ಯರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರಿಂದ ಬಿಜೆಪಿ ಸದನದಲ್ಲಿ ತನ್ನ ಸಂಖ್ಯೆಯನ್ನು 111 ಕ್ಕೆ ಹೆಚ್ಚಿಸಿಕೊಂಡಿತು. ಕಾಂಗ್ರೆಸ್ ಸಂಖ್ಯೆ 62 ಕ್ಕೆ ಇಳಿಯಿತು.

English summary
Gujarat Assembly Elections 2022, Gujarat Elections, List of Congress star campaigners released, party chief Malliakrjun Kharge, UPA chairperson Sonia Gandhi, party MP Rahul Gandhi, general secretary Priyanka Gandhi Vadra, CMs Ashok Gehlot-Bhupesh Baghel, Sachin Pilot, Jignesh Mevani, Kanhaiya Kumar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X