ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟ

By Mahesh
|
Google Oneindia Kannada News

ವದೆಹಲಿ, ಅಕ್ಟೋಬರ್ 25: ಗುಜರಾತ್ ವಿಧಾನಸಭಾ ಚುನಾವಣೆಗಳ ದಿನಾಂಕವನ್ನು ಚುನಾವಣಾ ಆಯೋಗ ಗುರುವಾರ (ಅಕ್ಟೋಬರ್ 12) ಪ್ರಕಟಿಸಿದೆ.

ಹಿಮಾಚಲ ಪ್ರದೇಶ ಚುನಾವಣೆ ದಿನಾಂಕ ಪ್ರಕಟ ಹಿಮಾಚಲ ಪ್ರದೇಶ ಚುನಾವಣೆ ದಿನಾಂಕ ಪ್ರಕಟ

ಗುಜರಾತಿನಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 9 ಹಾಗೂ 14ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಡಿಸೆಂಬರ್ 18ರಂದು ಮತ ಎಣಿಕೆ ನಡೆಯಲಿದೆ. ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ ಕೂಡಾ ಡಿಸೆಂಬರ್ 18ರಂದೇ ಪ್ರಕಟವಾಗಲಿದೆ.

ಮುಖ್ಯ ಚುನಾವಣಾಧಿಕಾರಿ ಎ.ಕೆ ಜ್ಯೋತಿ ಅವರು ಸುದ್ದಿಗೋಷ್ಠಿ ನಡೆಸಿ, ಹಿಮಾಚಲಪ್ರದೇಶ ವಿಧಾನಸಭಾ ಚುನಾವಣೆ ಚುನಾವಣೆ ದಿನಾಂಕ ಘೋಷಿಸಿದರು.

Gujarat Assembly Election Dates announced

* ಎಲ್ಲಾ ಮತಗಟ್ಟೆಗಳಲ್ಲಿ ವಿಡಿಯೋ ಚಿತ್ರೀಕರಣಕ್ಕೆ ಸೂಚನೆ.
* ಗುಜರಾತಿನ ಅಭ್ಯರ್ಥಿಗೆ ಚುನಾವಣಾ ಖರ್ಚು ವೆಚ್ಚ 28 ಲಕ್ಷ ರು ಮಿತಿ.

* ಚುನಾವಣಾ ನೀತಿ ಸಂಹಿತೆ ಈ ಕ್ಷಣದಿಂದಲೆ ಜಾರಿಗೆ ಬರಲಿದೆ.

* 50,128 ಮತಗಟ್ಟೆ ಸ್ಥಾಪನೆಎಲ್ಲಾ ಮತಗಟ್ಟೆಗಳಲ್ಲಿ ವಿವಿಪ್ಯಾಟ್ ಬಳಕೆ, ಅಕ್ರಮಗಳ ಬಗ್ಗೆ ದೂರು ಸಲ್ಲಿಸಲು ಪ್ರತ್ಯೇಕ ಮೊಬೈಲ್ ಅಪ್ಲಿಕೇಷನ್.
* ಚುನಾವಣೆ ಖರ್ಚು ವೆಚ್ಚ ಭರಿಸಲು ಪ್ರತ್ಯೇಕ ಬ್ಯಾಂಕ್ ಖಾತೆ ಆರಂಭಿಸಲು ಅಭ್ಯರ್ಥಿಗಳಿಗೆ ಸೂಚನೆ.

ಮೊದಲ ಹಂತದಲ್ಲಿ 19 ಜಿಲ್ಲೆಯಲ್ಲಿ 89 ಅಸೆಂಬ್ಲಿ ಸ್ಥಾನಕ್ಕೆ ಮತದಾನ
ನವೆಂಬರ್ 14 : ಚುನಾವಣಾಧಿಸೂಚನೆ ಪ್ರಕಟ
ನವೆಂಬರ್ 21 : ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕ
ನವೆಂಬರ್ 22 : ನಾಮಪತ್ರ ಪರಿಶೀಲನೆ
ನವೆಂಬರ್ 24 : ನಾಮಪತ್ರ ಹಿಂಪಡೆಯಲು ಕೊನೆ ದಿನಾಂಕ.
ಡಿಸೆಂಬರ್ 9 (ಶನಿವಾರ): ಮತದಾನ
ಡಿಸೆಂಬರ್ 18 (ಭಾನುವಾರ): ಮತ ಎಣಿಕೆ

ಎರಡನೇ ಹಂತದ ಮತದಾನ:14 ಜಿಲ್ಲೆಗಳಲ್ಲಿನ 93 ಅಸೆಂಬ್ಲಿ ಸ್ಥಾನ

ನವೆಂಬರ್ 20 : ಚುನಾವಣಾಧಿಸೂಚನೆ ಪ್ರಕಟ
ನವೆಂಬರ್ 27 : ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕ
ನವೆಂಬರ್ 28 : ನಾಮಪತ್ರ ಪರಿಶೀಲನೆ
ನವೆಂಬರ್ 30 : ನಾಮಪತ್ರ ಹಿಂಪಡೆಯಲು ಕೊನೆ ದಿನಾಂಕ.
ಡಿಸೆಂಬರ್ 14 (ಗುರುವಾರ): ಮತದಾನ
ಡಿಸೆಂಬರ್ 18 (ಭಾನುವಾರ): ಮತ ಎಣಿಕೆ
ಡಿಸೆಂಬರ್ 20 : ಚುನಾವಣಾ ಪ್ರಕ್ರಿಯೆ ಅಂತ್ಯ.

ತ್ರಿಕೋನ ಸ್ಪರ್ಧೆ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್ ಸಿ), ಭಾರತೀಯ ಜನತಾ ಪಾರ್ಟಿ(ಬಿಜೆಪಿ) ಹಾಗೂ ಆಮ್ ಆದ್ಮಿ ಪಕ್ಷ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ.

ಗುಜರಾತಿನ ಹಾಲಿ ಅಸೆಂಬ್ಲಿಯಲ್ಲಿ 182 ವಿಧಾನಸಭಾ ಸ್ಥಾನಗಳಿದ್ದು, ಬಿಜೆಪಿ 118 ಶಾಸಕರು, ಕಾಂಗ್ರೆಸ್ 42, ಎನ್ ಸಿ ಪಿಯ 2 ಹಾಗೂ ಜೆಡಿಯುನ ಒಬ್ಬ ಶಾಸಕರಿದ್ದಾರೆ.

English summary
The Election Commission on Wednesday said that the assembly elections in Gujarat would be held in two phases on December 9 and 14. The counting of votes would be held on December 18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X