ದೆಹಲಿಯಲ್ಲೂ ಕಾಮುಕರ ಅಟ್ಟಹಾಸ!

Posted By: Chethan
Subscribe to Oneindia Kannada

ನವದೆಹಲಿ, ಜ. 5: ನೂತನ ವರ್ಷಾಚರಣೆ ವೇಳೆ ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿರುವ ಈ ಸಂದರ್ಭದಲ್ಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯ ಮೇಲೆ ದೌರ್ಜನ್ಯ ನಡೆದಿರುವ ಮತ್ತೊಂದು ಘಟನೆ ನಡೆದಿದೆ.

ಗುರುವಾರ (ಜ. 5) ಮುಂಜಾನೆಯೇ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೋಜು ಮಸ್ತಿಯಲ್ಲಿ ತೊಡಗಿದ್ದ ಯುವಕರ ಗುಂಪೊಂದು ಬೈಕ್ ನಲ್ಲಿ ಸಾಗುತ್ತಿದ್ದ ಯುವತಿಯೊಬ್ಬಳನ್ನು ಎಳೆದು ಕೆಳಗೆ ಬೀಳಿಸಿ ಆಕೆಯ ಮೇಲೆ ದೌರ್ಜನ್ಯ ವೆಸಗಲು ಯತ್ನಿಸಿದ್ದಾರೆ.

Group of men tried to molestation a girl in delhi

ಘಟನೆಯ ಮತ್ತೊಂದು ಘೋರತೆಯೇನೆಂದರೆ, ಯುವತಿಯ ಚೀರಾಟ ಕೇಳಿ ಆಕೆಯ ರಕ್ಷಣೆಗೆ ಓಡಿಬಂದ ಪೊಲೀಸರು ಓಡಿಬಂದಿದ್ದಾರೆ. ಆದರೆ, ದುಷ್ಕರ್ಮಿಗಳು ಅವರ ಮೇಲೂ ಹಲ್ಲೆ ಮಾಡಿದ್ದು ಪೊಲೀಸರನ್ನು ಮನಬಂದಂತೆ ಥಳಿಸಿ ಓಡಿ ಹೋಗಿದ್ದಾರೆ. ಈ ವೇಳೆ, ಪೊಲೀಸರ ತಂಡದಲ್ಲಿದ್ದ ಎಸ್ ಐ ಪ್ರಕಾಶ್ ಎಂಬುವರ ತಲೆಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅಲ್ಲದೆ, ತಂಡದಲ್ಲಿದ್ದ ಇತರ ಪೊಲೀಸ್ ಪೇದೆಗಳಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಪೊಲೀಸರು ಬಂದ ಜೀಪಿಗೂ ಹಾನಿ ಮಾಡಿದ್ದಾರೆ. ಈ ಎಲ್ಲಾ ಘಟನಾವಳಿಗಳ ಹೊರತಾಗಿಯೂ ಮಹಿಳೆ ಸುರಕ್ಷಿತವಾಗಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ತನಿಖೆ ಆರಂಭಿಸಿರುವ ಪೊಲೀಸರು, ಹಲ್ಲೆ ಮಾಡಿರುವ ಯುವಕರು ವಿದ್ಯಾರ್ಥಿಗಳೆಂದು ಅಭಿಪ್ರಾಯಪಟ್ಟಿದ್ದಾರೆ. ಕೆಲವಾರು ಪ್ರವೇಶ ಪರೀಕ್ಷೆಗಳಿಗಾಗಿ ದೆಹಲಿಯ ಹಾಸ್ಟೆಲ್, ಪಿಜಿಗಳಲ್ಲಿ ಬೀಡುಬಿಟ್ಟಿರುವ ಯುವಕರೇ ಈ ಕೃತ್ಯ ಎಸಗಿರಬಹುದೆಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Group of men tried to molestation a girl in delhi and attacked police who rushed to save the girl.
Please Wait while comments are loading...