India-Canada diplomat: ಕುಸಿದ ರಾಜತಾಂತ್ರಿಕ ಸಂಬಂಧ, ಕೆನಡಾದಿಂದ ಭಾರತದ ಹೈ ಕಮಿಷನರ್ ವಾಪಾಸ್...
ನವದೆಹಲಿ, ಅಕ್ಟೋಬರ್ 14: ಕೆನಡಾದಲ್ಲಿ ಕಳೆದ ವರ್ಷ ನಡೆದ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಪ್ರಕರಣದ ವಿಚಾರವಾಗಿ ಕೆನಡಾ ಹಾಗೂ ಭಾರತದ ಮಧ್ಯೆ ರಾಜತಾಂತ್ರಿಕ ವ್ಯತ್ಯಾಸಗಳು ಸೃಷ್ಟಿಯಾಗಿವೆ. ಅಲ್ಲದೇ ಕೆನಡಾ ಪ್ರಧಾನಿ ಭಾರತದ ಮೇಲೆ ಅನುಮಾನ ವ್ಯಕ್ತಪಡಿಸಿದ್ದನ್ನು ಭಾರತ ಖಂಡಿಸಿದೆ. ಅಲ್ಲದೇ ಆ ದೇಶದಲ್ಲಿರುವ ಭಾರತೀಯ ಹೈ ಕಮಿಷನರ್ ಅನ್ನು ಹಿಂಡೆಯಲು ಸರ್ಕಾರ ನಿರ್ಧರಿಸಿದೆ ಎಂದು ಸೋಮವಾರ ವರದಿ ಆಗಿದೆ.
ಕೆನಡಾ ಸರ್ಕಾರದ ಭದ್ರತೆ ಬಗ್ಗೆ ನಮಗೆ ಖಾತ್ರಿ ಇಲ್ಲ ಎಂದಿರುವ ಭಾರತವು, ಖಲಿಸ್ತಾನಿ ಭಯೋತ್ಪಾದಕನ ಹತ್ಯೆಯಲ್ಲಿ ಭಾರತೀಯ ಹೈ ಕಮಿಷನರ್ ಸಂಜಯ್ ಕುಮಾರ್ ವರ್ಮಾ ಮೇಲೆ ಅನುಮಾನ ಪಟ್ಟ ಕೆನಡಾ ಪ್ರಧಾನಿ ಆರೋಪವನ್ನು ನಿರಾಕರಿಸಿದೆ. ನಿಮ್ಮ ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲದ ಕಾರಣ ಕೇಂದ್ರ ಸರ್ಕಾರವು ಹೈಕಮಿಷನರ್ ಅನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದೆ ಎಂದು ಕೆನಡಾ ಸಚಿವಾಲಯಕ್ಕೆ ತಿಳಿಸಿದೆ.

ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತೀಯ ಹೈಕಮಿಷನರ್ ಅವರ ಮೇಲೆ ಶಂಕಿಸಿದ ಕೆನಡಾ ಅವರ ಮೇಲೆ ತನಿಖೆ ಕೈಗೊಳ್ಳುವುದಾಗಿ ಹೇಳುತ್ತಿದ್ದಂತೆ ಉಭಯ ದೇಶಗಳ ಮಧ್ಯದ ಸಂಬಂಧ ಹಳಸಿತು. ರಾಜತಾಂತ್ರಿಕ ಸಂಬಂಧ ಮತ್ತಷ್ಟು ಕುಸಿಯಿತು.
ಭಾರತೀಯ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ ಅವರ ಮೇಲೆ ಭಯೋತ್ಪಾದಕ ಹತ್ಯೆಯ ಶಂಕೆಯು, ಹೊರಿಸಲಾದ ಆರೋಪವು ಹಾಸ್ಯಾಸ್ಪದವಾಗಿದೆ ಎಂದು ಭಾರತ ಕಟುವಾಗಿ ತಿರುಗೇಟು ಕೊಟ್ಟಿದೆ. ಕೆನಡಾದಲ್ಲಿರುವ ಭಾರತದ ಹೈ ಕಮಿಷನರ್ ಸಂಜಯ್ ಕುಮಾರ್ ವರ್ಮಾ ಅವರು 36 ವರ್ಷಗಳ ಸುದೀಘ ಮತ್ತು ಅತ್ಯುತ್ತಮ ವೃತ್ತಿಜೀವನ ನಡೆಸಿದ ರಾಜತಾಂತ್ರಿಕರಾಗಿದ್ದಾರೆ ಎಂದು ಭಾರತ ಹೆಮ್ಮೆ ವ್ಯಕ್ತಪಡಿಸಿದೆ.
ಅವರು ಕೇವಲ ಕೆನಡಾದಲ್ಲಿ ಮಾತ್ರವಲ್ಲದೇ ಜಪಾನ್ ಮತ್ತು ಸುಡಾನ್‌ನಲ್ಲಿ ರಾಯಭಾರಿ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಚೀನಾ, ಇಟಲಿ ಹಾಗೂ ವಿಯೆಟ್ನಾಂಗಳಲ್ಲಿ ಭಾರತೀಯನಾಗಿ, ಕೇಂದ್ರ ಸರ್ಕಾರದ ಪರ ಸೇವೆ ಮಾಡಿದ್ದಾರೆ. ಕೆನಡಾ ಸದ್ಯ "ರಾಜಕೀಯ ಲಾಭಕ್ಕಾಗಿ ಹೀಗೆ ಭಾರತದ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದೆ. ಭಾರತದ ಮೇಲೆ ಮಸಿ ಬಳಿಯಲು ಯತ್ನಿಸುತ್ತಿದೆ ಎಂದು ಭಾರತ ಸರ್ಕಾರ ದೂರಿದೆ.
ಭಾರತದಿಂದ 06 ಕೆನಡ ಅಧಿಕಾರಿಗಳು ಔಟ್
ಕೇವಲ ಕೆನಡಾದಿಂದ ಭಾರತವು ಹೈಕಮಿಷನರ್ ಅವರನ್ನು ವಾಪಾಸ್ ಕರೆಸಿಕೊಳ್ಳುತ್ತಿಲ್ಲ. ನಿಜ್ಜರ್ ಹತ್ಯೆಯಲ್ಲಿ ಭಾರತ ಪಿತೂರಿ ಮಾಡಿದೆ ಎಂಬ ಆರೋಪಿಸುತ್ತಿದ್ದಂತೆ ಭಾರತ ಸರ್ಕಾರ ದೇಶದಲ್ಲಿರುವ 06 ಕೆನಡಾ ರಾಜತಾಂತ್ರಿಕ ಅಧಿಕಾರಿಗಳನ್ನು ಹೊರ ಹಾಕಲು ಸಹ ತಿರ್ಮಾನ ಕೈಗೊಂಡಿದೆ.
2023ರ ಜೂನ್‌ನಲ್ಲಿ ಕೆನಡಾದಲ್ಲಿ ಜರುಗಿದ ಖಲಿಸ್ತಾನಿ ಭಯೋತ್ಪಾದಕ ಹರ್ದಿಪ್ ಸಿಂಗ್ ನಿಜ್ಜರ್ ಹತ್ಯಾ ಪ್ರಕರಣದಲ್ಲಿ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ಭಾರತೀಯ ಹೈಕಮಿಷನರ್ ಮೇಲೆ ಆರೋಪ ಹೊರಸಿದ್ದಾರೆ. ಅವರ ವಿರುದ್ಧ ಅಲ್ಲಿನ ಸರ್ಕಾರ ತನಿಖೆಗೆ ಮುಂದಾಗಿದೆ. ಇದೆಲ್ಲವು ಆಧಾರ ರಹಿತ ಆರೋಪ, ಇದ್ಯಾವುದು ಸ್ವೀಕಾರಾರ್ಹವಲ್ಲ ಎಂದು ತನ್ನ ಸಂಬಂಧ ಮುರಿದುಕೊಳ್ಳಲು ಭಾರತ ಮುಂದಾಗಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದಾಗುತ್ತಿದೆ. ಪ್ರಧಾನಿ ಮೋದಿಯವರ ನಿರ್ಧಾರವನ್ನು ವಿವಿಧ ದೇಶಗಳು ಸ್ವಾಗತಿಸಲಿವೆ.
ಆರೋಪಗಳಿಗೆ ತಿರುಗೇಟು ನೀಡಿದ ಭಾರತವು, ಕೆನಡಾ ಅಧ್ಯಕ್ಷ ಟ್ರೂಡೊ ನೇತೃತ್ವದಲ್ಲಿ ಸರ್ಕಾರದ ವಿರುದ್ಧ ನಿಯಮಗಳಂತೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.












Click it and Unblock the Notifications