ಮೈಸೂರು ಸೇರಿ 5 ನಗರಗಳಲ್ಲಿ ಪ್ಲಾಸ್ಟಿಕ್ ನೋಟ್ ಪ್ರಯೋಗ

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಮಾರ್ಚ್ 17: 10 ರೂಪಾಯಿಯ ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ಬಿಡುವ ಮುನ್ನ ಪರೀಕ್ಷಾರ್ಥ ಪ್ರಯೋಗ ನಡೆಸಲು ಕೇಂದ್ರ ಸರಕಾರ ನಿರ್ಧರಿಸಿದೆ.

ಬಹಳ ಹಿಂದೆಯೇ ಕೇಂದ್ರ ಸರಕಾರ ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರುವ ಚಿಂತನೆ ನಡೆಸಿತ್ತು. ಇದಕ್ಕಾಗಿ ಬೇರೆ ಬೇರೆ ಹವಾಮಾನ ಇರುವ ದೇಶದ 5 ನಗರಗಳನ್ನು ಪ್ರಯೋಗ ನಡೆಸಲು ಆಯ್ಕೆ ಮಾಡಿಕೊಳ್ಳಲಾಗಿದೆ. ಇದೀಗ ಈ ನಗರಗಳಲ್ಲಿ 10 ರೂಪಾಯಿಯ 100 ಕೋಟಿ ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ಬಿಡಲಾಗುತ್ತಿದೆ.[ಶಶಿ ತರೂರ್: ಆನ್ಲೈನಿನಲ್ಲಿ ಉದಯಿಸುತ್ತಿರುವ ಪ್ರಧಾನಮಂತ್ರಿ!]

ಎಲ್ಲೆಲ್ಲಾ ಪ್ರಯೋಗ?

ಎಲ್ಲೆಲ್ಲಾ ಪ್ರಯೋಗ?

ಕರ್ನಾಟಕದ ಮೈಸೂರು, ಕೇರಳದ ಕೊಚ್ಚಿ, ಹಿಮಾಚಲ ಪ್ರದೇಶದ ಶಿಮ್ಲಾ, ಒಡಿಶಾದ ಭುವನೇಶ್ವರ, ರಾಜಸ್ಥಾನದ ಜೈಪುರಗಳಲ್ಲಿ ಈ ಪ್ಲಾಸ್ಟಿಕ್ ನೋಟುಗಳ ಪ್ರಯೋಗ ನಡೆಯಲಿದೆ. ಬೇರೆ ಬೇರೆ ಹವಾಮಾನ ಹೊಂದಿರುವುದರಿಂದ ನೋಟುಗಳ ಪರೀಕ್ಷೆಗೆ ಈ ನಗರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಪ್ರಯೋಗದ ಫಲಿತಾಂಶಗಳನ್ನು ಆಧರಿಸಿ ದೇಶದಲ್ಲಿ ಸದ್ಯದಲ್ಲೇ ಪ್ಲಾಸ್ಟಿಕ್ ನೋಟು ಚಲಾವಣೆಗೆ ಬರಲಿದೆ.

ಹಳೇ ತೀರ್ಮಾನ

ಹಳೇ ತೀರ್ಮಾನ

ಕಳೆದ ಡಿಸೆಂಬರಿನಲ್ಲಿ ದೇಶದಲ್ಲಿ ಪ್ಲಾಸ್ಟಿಕ್ ನೋಟುಗಳನ್ನು ಜಾರಿಗೆ ತರುವುದಾಗಿ ಸರಕಾರ ಸಂಸತ್ತಿನಲ್ಲಿ ಹೇಳಿತ್ತು. ಆದಾದ ನಂತರ ನೋಟು ಮುದ್ರಣ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಈ ಕುರಿತು ಹೇಳಿಕೆ ನೀಡಿದ್ದ ಸರಕಾರ, "ಪ್ಲಾಸ್ಟಿಕ್ ಅಥವಾ ಪಾಲಿಮರ್ ಬ್ಯಾಂಕ್ ನೋಟುಗಳನ್ನು ಮುದ್ರಣ ಮಾಡಲು ನಿರ್ಧರಿಸಲಾಗಿದೆ," ಎಂದು ಹೇಳಿತ್ತು.[ಖರ್ಗೆಗೆ ಕೊಕ್, ಚುನಾವಣೆಯಲ್ಲಿ ಮುಗ್ಗರಿಸಿದ ರಾಹುಲ್ ವಿಪಕ್ಷ ನಾಯಕ!]

ಎಲ್ಲೆಲ್ಲಾ ಬಳಕೆಯಲ್ಲಿದೆ

ಎಲ್ಲೆಲ್ಲಾ ಬಳಕೆಯಲ್ಲಿದೆ

ಪ್ಲಾಸ್ಟಿಕ್ ನೋಟುಗಳ ಬಳಕೆ ಈಗಾಗಲೇ ಹಲವು ದೇಶಗಳಲ್ಲಿ ಜಾರಿಯಲ್ಲಿದೆ. ಆಸ್ಟ್ರೆಲಿಯಾ, ಸ್ಕಾಟ್ ಲ್ಯಾಂಡ್, ಕೆನಡಾ, ಚಿಲಿ, ಮಾಲ್ಡೀವ್ಸ್, ನ್ಯೂಜಿಲ್ಯಾಂಡ್ ಮುಂತಾದ ದೇಶಗಳಲ್ಲಿ ಈಗಾಗಲೇ ಪ್ಲಾಸ್ಟಿಕ್ ನೋಟುಗಳು ಜಾರಿಯಲ್ಲಿವೆ. ಕಳ್ಳ ನೋಟುಗಳ ಬಳಕೆ ತಡೆಗಟ್ಟಲು ಮೊದಲ ಬಾರಿಗೆ ಆಸ್ಟ್ರೇಲಿಯಾದಲ್ಲಿ ಪ್ಲಾಸ್ಟಿಕ್ ನೋಟುಗಳ ಬಳಕೆ ಆರಂಭಿಸಲಾಗಿತ್ತು.

ಲಾಭಗಳು

ಲಾಭಗಳು

ಪ್ಲಾಸ್ಟಿಕ್ ನೋಟುಗಳನ್ನು ನಕಲು ಮಾಡುವುದು ಕಷ್ಟ. ಮಾಡಿದರೂ ತಕ್ಷಣ ಪತ್ತೆ ಹಚ್ಚಬಹುದು. ಇನ್ನು ಬಾಳಿಕೆ ಜಾಸ್ತಿ. ಸಾಮಾನ್ಯವಾಗಿ 5 ವರ್ಷಗಳವರೆಗೆ ಪ್ಲಾಸ್ಟಿಕ್ ನೋಟುಗಳು ಬಾಳಿಕೆ ಬರುತ್ತವೆ. ಇದರಿಂದ ಮತ್ತೆ ಮತ್ತೆ ಪ್ರಿಂಟ್ ಮಾಡುವ ಖರ್ಚು ಉಳಿತಾಯವಾಗಲಿದೆ. ನೋಟುಗಳು ನೋಡಲು ಸ್ಪಷ್ಟವಾಗಿ ಕಾಣುತ್ತವೆ. ಈ ನೋಟುಗಳು ವಾಟರ್ ಪ್ರೂಫ್ ಕೂಡಾ ಆಗಿದ್ದು, ಧೂಳು ಮೊದಲಾದುವುಗಳಿಂದ ರಕ್ಷಣೆ ಮಾಡಿಕೊಳ್ಳಬಹುದು.[ಕೇಂದ್ರ ಸರಕಾರಿ ನೌಕರರಿಗೆ ನರೇಂದ್ರ ಮೋದಿ ಬಂಪರ್ ಗಿಫ್ಟ್]

ಸಮಸ್ಯೆಗಳೇನು?

ಸಮಸ್ಯೆಗಳೇನು?

ನೋಟನ್ನು ಮಡಚುವುದು ಕಷ್ಟ. ಜತೆಗೆ ಇದರ ಉತ್ಪಾದನಾ ವೆಚ್ಚವೂ ಜಾಸ್ತಿ. ಇನ್ನು ನೋಟುಗಳು ಜಾರುವುದರಿಂದ ಲೆಕ್ಕ ಮಾಡುವುದು ಸ್ವಲ್ಪ ಕಷ್ಟವಾಗಲಿದೆ. ಈ ನೋಟುಗಳನ್ನು ಎಟಿಎಂಗಳನ್ನು ಜಾರಿಗೆ ತರಲು ಈಗಿರುವ ಎಟಿಎಂ ಯಂತ್ರಗಳನ್ನು ಬದಲಿಸಬೇಕಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The government is set to conduct a field trial of plastic notes that it proposes to introduce. Initially a field trial had been undertaken at Kochi, Mysuru, Jaipur, Shimla and Bhubaneswar. The trial would now be conducted in five more locations. It was decided that plastic notes would be introduced in the country soon.
Please Wait while comments are loading...