• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೋವಿಡ್19ಗೂ ಮಲೇರಿಯಾ ಮದ್ದು ಬಳಸಿ: ಆರೋಗ್ಯ ಇಲಾಖೆ

|

ನವದೆಹಲಿ, ಮಾರ್ಚ್ 23: ವಿಶ್ವವ್ಯಾಪಿಯಾಗಿ ಎಲ್ಲರಲ್ಲೂ ಭೀತಿ ಹುಟ್ಟಿಸಿರುವ ಕೊವಿಡ್19ಗೆ ಮಲೇರಿಯಾ ಕಾಯಿಲೆಗೆ ನೀಡುವ ಪೇಕ್ವಿನಿಲ್ ಔಷಧವನ್ನು ಕೋವಿಡ್19 ರೋಗಿಗಳಿಗೆ ನೀಡಬಹುದು ಎಂದು ರಾಷ್ಟ್ರೀಯ ಮೆಡಿಕಲ್ ಸಂಶೋಧನೆ ಕೌನ್ಸಿಲ್ ಹೇಳಿದೆ.

   Karnataka will be under complete lockdown | Karnataka LockDown | Oneindia kannada

   ಆದರೆ, ಮಲೇರಿಯಾ ರೋಗಿಗಳಿಗೆ ಪ್ಲೇಕ್ವೆನಿಲ್ ಹೆಸರಿನಲ್ಲಿ ನೀಡಲಾಗುವ ಹೈಡ್ರೋಕ್ಸಿಕ್ಲೋರೊಕ್ವೆನ್(HCQ) ಎಂಬ Anti-Malaria ಔಷಧ ಬಳಕೆಗೆ ನಿರ್ಬಂಧ ಹೇರಲಾಗಿದ್ದು, ಎಲ್ಲರೂ ಬಳಕೆ ಅಥವಾ ಅಕ್ರಮ ದಾಸ್ತಾನು ಮಾಡುವಂತಿಲ್ಲ. ಈ ಬಗ್ಗೆ ಗಮನ ಹರಿಸಲು ರಾಷ್ಟ್ರೀಯ ಟಾಸ್ಕ್ ಫೋರ್ಸ್ ನೇಮಿಸಲಾಗಿದೆ.

   ಬೆಂಗಳೂರಿನಲ್ಲಿ ಕೊರೊನಾ ವಾರ್ ರೂಮ್; ವಿಶೇಷತೆ ಏನು?

   ಆದರೆ, ಸದ್ಯಕ್ಕೆ ತೀರಾ ಅಗತ್ಯ ಬಿದ್ದರೆ ಮಾತ್ರ ಎಚ್ ಸಿ ಕ್ಯೂವನ್ನು ಕೋವಿಡ್19 ರೋಗಿಗಳಿಗೆ ನೀಡಲು ಅನುಮತಿಯಿದೆ. ಮನೆಯಲ್ಲೇ ಕೋವಿಡ್19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಮಾತ್ರ ಬಳಸಲು ಸೂಚಿಸಲಾಗಿದೆ.

   ಮಲೇರಿಯಾಕ್ಕೆ ಬಳಸುವ ಈ ಲಸಿಕೆ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಟ್ವೀಟ್ ನಲ್ಲಿ ಇತ್ತೀಚೆಗೆ ಉಲ್ಲೇಖಿಸಿದ್ದರು. HCQ ಹಾಗೂ ಅಜಿಥ್ರೋಮೈಸಿನ್ ಬಳಕೆಯಿಂದ ವೈದ್ಯಕೀಯ ಲೋಕದಲ್ಲಿ ಭಾರಿ ಬದಲಾವಣೆ ಸಾಧ್ಯ ಎಂದಿದ್ದರು.

   ಸಾಮಾನ್ಯವಾಗಿ ಹೈಡ್ರೋಕ್ಸಿಕ್ಲೋರೊಕ್ವೆನ್ ಜೊತೆಗೆ Anti biotic ಅಜಿಥ್ರೋಮೈಸಿನ್ ಸೇರಿಸಿ ಸರಿ ಪ್ರಮಾಣದಲ್ಲಿ ನೀಡುತ್ತಾ ಬಂದರೆ ಆರಂಭಿಕ ಹಂತದ ಕೊವಿಡ್ 19 ಸಾರ್ಸ್ CoV 2 ಇತ್ಯಾದಿ ಹೊಗಲಾಡಿಸಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಆದರೆ, ಕೋವಿಡ್19ಗೆ ಈ ಎರಡು ಲಸಿಕೆಯ ಜೋಡಿಗೆ ರಾಮಬಾಣ ಎಂಬುದು ಇನ್ನೂ ದೃಢಪಟ್ಟಿಲ್ಲ.

   ಕೊರೊನಾ: ರಾಜ್ಯ ಸರಕಾರ ಎಡವುತ್ತಿರುವುದು ಈ 3 ವಿಚಾರದಲ್ಲಿ, ತುರ್ತಾಗಿ ಗಮನಕೂಡಬೇಕಿದೆ

   ಕೊವಿಡ್19ಗೆ ಲಸಿಕೆ ಕಂಡು ಹಿಡಿಯಲು ಯುರೋಪಿಯನ್ ಯೂನಿಯನ್, ಚೀನಾ ಅಲ್ಲದೆ ಯುಎಸ್ ವಿಜ್ಞಾನಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಮಲೇರಿಯಾಕ್ಕೆ ನೀಡಲಾಗುವ ಲಸಿಕೆಯನ್ನು ಕೋವಿಡ್19ಕ್ಕೆ ಬಳಸುವ ಬಗ್ಗೆ ಪ್ರತಿಕ್ರಿಯಿಸಿರುವ ಫ್ರೆಂಚ್ ವಿಜ್ಞಾನಿಗಳು, ಆರಂಭಿಕ ಹಂತದ ಚಿಕಿತ್ಸೆಗೆ ಉಪಯುಕ್ತವಾಗಲಿದೆ ಎಂದಿದ್ದಾರೆ.

   English summary
   Govt regulates distribution of Hydroxychloroquine for Covid19 treatment. Hydroxychloroquine, commonly knowns as chloroquine or Plaquenil, will now only be available to health care workers as well as persons caring for COVID-19 patients in households.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X