ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಕಿಪಾಕ್ಸ್ ರೋಗಿಗಳನ್ನು ಪ್ರತ್ಯೇಕವಾಗಿರಿಸಲು ರಾಜ್ಯಗಳಿಗೆ ಕೇಂದ್ರದ ಸಲಹೆ

|
Google Oneindia Kannada News

ನವದೆಹಲಿ, ಮೇ 26: ಜಾಗತಿಕ ಮಟ್ಟದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಮಂಕಿಪಾಕ್ಸ್ ಅನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರೋಗಲಕ್ಷಣದ ರೋಗಿಗಳನ್ನು ಪ್ರತ್ಯೇಕವಾಗಿರಿಸಲು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಸಲಹೆ ನೀಡಿದೆ.

ಮಂಕಿಪಾಕ್ಸ್ ಪತ್ತೆಯಾದ ರಾಷ್ಟ್ರಗಳಿಂದ ಆಗಮಿಸಿದ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳನ್ನು ನೋಡಿಕೊಳ್ಳಲು ಮತ್ತು ಗೊತ್ತುಪಡಿಸಿದ ಆರೋಗ್ಯ ಸೌಲಭ್ಯಗಳಲ್ಲಿ ಅವರನ್ನು ಪ್ರತ್ಯೇಕಿಸಲು ಆಸ್ಪತ್ರೆಗಳಿಗೆ ನಿರ್ದೇಶಿಸುವಂತೆ ಸೂಚಿಸಲಾಗಿದೆ.

ಹುಷಾರ್: ಮಂಕಿಪಾಕ್ಸ್ ಸೋಂಕಿಗೂ 21 ದಿನ ಕ್ವಾರೆಂಟೈನ್! ಹುಷಾರ್: ಮಂಕಿಪಾಕ್ಸ್ ಸೋಂಕಿಗೂ 21 ದಿನ ಕ್ವಾರೆಂಟೈನ್!

ಮೂಲಗಳ ಪ್ರಕಾರ, ಇದುವರೆಗೆ ಕೆನಡಾದಿಂದ ಮಂಕಿಪಾಕ್ಸ್ ಸೋಂಕಿನ ಲಕ್ಷಣಗಳನ್ನು ಹೊಂದಿರುವ ಒಬ್ಬ ಪ್ರಯಾಣಿಕರನ್ನು ಮಾತ್ರ ಪ್ರತ್ಯೇಕಿಸಲಾಗಿದೆ. ಆದಾಗ್ಯೂ, ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ) ನಲ್ಲಿ ನಡೆಸಿದ ಪರೀಕ್ಷೆಯ ನಂತರ ಪ್ರಯಾಣಿಕರಿಂದ ಸಂಗ್ರಹಿಸಲಾದ ಮಾದರಿಯಲ್ಲಿ ಸೋಂಕು ಪತ್ತೆಯಾಗಿಲ್ಲ ಎಂಬುದು ದೃಢಪಟ್ಟಿದೆ.

ದೇಶದ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಪರೀಕ್ಷೆ

ದೇಶದ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಪರೀಕ್ಷೆ

ಪ್ರಯಾಣಿಕರು ಬಂದಿಳಿದ ವಿಮಾನ ನಿಲ್ದಾಣದ ಹೆಸರನ್ನು ಇಲ್ಲಿ ಬಹಿರಂಗಪಡಿಸಲಾಗುವುದಿಲ್ಲ. ದೇಶದ ವಿಮಾನ ನಿಲ್ದಾಣಗಳು ಮತ್ತು ಬಂದರುಗಳಲ್ಲಿ ಆರೋಗ್ಯ ಅಧಿಕಾರಿಗಳ ಕಣ್ಗಾವಲು ಹೆಚ್ಚಿಸಲು ಮತ್ತು ಮಂಕಿಪಾಕ್ಸ್ ಪೀಡಿತ ದೇಶಗಳಿಂದ ಆಗಮಿಸಿದ ಹಾಗೂ ರೋಗಲಕ್ಷಣವನ್ನು ಹೊಂದಿರುವ ಪ್ರಯಾಣಿಕರನ್ನು ಪ್ರತ್ಯೇಕಿಸಲು ಮತ್ತು ಅವರ ಮಾದರಿಗಳನ್ನು ತನಿಖೆಗಾಗಿ NIV ಗೆ ಕಳುಹಿಸಲು ಸಚಿವಾಲಯವು ಸೂಚಿಸಿದೆ.

ರೋಗದ ಲಕ್ಷಣಗಳು 21 ದಿನದ ನಂತರ ಇರುವುದಿಲ್ಲ

ರೋಗದ ಲಕ್ಷಣಗಳು 21 ದಿನದ ನಂತರ ಇರುವುದಿಲ್ಲ

ಮಂಕಿಪಾಕ್ಸ್ ರೋಗಿಗಳಲ್ಲಿ ಸಾಮಾನ್ಯವಾಗಿ 7-14 ದಿನಗಳವರೆಗೂ ಕಾವು ಇರುತ್ತದೆ. ಆದರೆ 5-21 ದಿನಗಳ ನಂತರದಲ್ಲಿ ರೋಗದ ಲಕ್ಷಣಗಳು ಇರುವುದಿಲ್ಲ. ಆರೋಗ್ಯ ಸೌಲಭ್ಯಗಳಲ್ಲಿ ರೋಗಲಕ್ಷಣಗಳ ಕೊರತೆಯಿಂದ ವಿಮಾನ ನಿಲ್ದಾಣದ ಸ್ಕ್ರೀನಿಂಗ್ ಸಮಯದಲ್ಲಿ ತಪ್ಪಿಸಿಕೊಂಡ ವ್ಯಕ್ತಿಗಳಲ್ಲಿ ರೋಗಲಕ್ಷಣಗಳು ಕಂಡು ಬಂದಲ್ಲಿ ಅಂಥವರನ್ನು ಪತ್ತೆ ಹಚ್ಚುವುದೇ ಮುಂದಿನ ಗುರಿಯಾಗಿದೆ, "ಎಂದು ಅಧಿಕಾರಿಯೊಬ್ಬರು ವಿವರಿಸಿದರು.

ಭಾರತದಲ್ಲಿ ಮಂಕಿಪಾಕ್ಸ್ ತಡೆಗಟ್ಟುವಿಕೆಗೆ ಮಾರ್ಗಸೂಚಿ

ಭಾರತದಲ್ಲಿ ಮಂಕಿಪಾಕ್ಸ್ ತಡೆಗಟ್ಟುವಿಕೆಗೆ ಮಾರ್ಗಸೂಚಿ

ಆರೋಗ್ಯ ಸಚಿವಾಲಯವು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC) ಸಹಯೋಗದೊಂದಿಗೆ ಮಂಕಿಪಾಕ್ಸ್ ಚಿಕಿತ್ಸೆ ಮತ್ತು ತಡೆಗಟ್ಟುವಿಕೆಗಾಗಿ ಸಮಗ್ರ ಮಾರ್ಗಸೂಚಿಗಳನ್ನು ರೂಪಿಸುತ್ತಿದೆ.

ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಿದ ಮಧ್ಯಂತರ ಸಲಹೆಯಲ್ಲಿ, "ಇತ್ತೀಚಿಗೆ ದೃಢೀಕರಿಸಿದ ಅಥವಾ ಶಂಕಿತ ಮಂಕಿಪಾಕ್ಸ್ ಪ್ರಕರಣಗಳನ್ನು ಹೊಂದಿರುವ ಅಥವಾ ದೃಢಪಡಿಸಿದ ಅಥವಾ ಶಂಕಿತ ಮಂಕಿಪಾಕ್ಸ್ ಹೊಂದಿರುವ ವ್ಯಕ್ತಿ ಅಥವಾ ಜನರೊಂದಿಗೆ ಸಂಪರ್ಕವನ್ನು ವರದಿ ಮಾಡಿದ ಅಥವಾ ಸೋಂಕು ಹೆಚ್ಚಿರುವ ದೇಶಕ್ಕೆ ಕಳೆದ 21 ದಿನಗಳಲ್ಲಿ ಭೇಟಿ ನೀಡಿದ ಹಾಗೂ ವಿವರಿಸಲಾಗದ ದದ್ದು ಹೊಂದಿರುವವರ ಬಗ್ಗೆ ಗಮನಹರಿಸಲು ಸಚಿವಾಲಯ ತಿಳಿಸಿದೆ.

ಮಂಕಿಪಾಕ್ಸ್ ಸೋಂಕು ಕಂಡು ಬಂದರೇನು ಕ್ರಮ?

ಮಂಕಿಪಾಕ್ಸ್ ಸೋಂಕು ಕಂಡು ಬಂದರೇನು ಕ್ರಮ?

ಎಲ್ಲಾ ಶಂಕಿತ ಪ್ರಕರಣಗಳನ್ನು ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮದ ಜಿಲ್ಲಾ ಕಣ್ಗಾವಲು ಅಧಿಕಾರಿಗೆ ವರದಿ ಮಾಡಬೇಕು. ಕೋಶಕಗಳು, ರಕ್ತ, ಕಫ ಇತ್ಯಾದಿಗಳಿಂದ ದ್ರವವನ್ನು ಒಳಗೊಂಡಿರುವ ಮಾದರಿಗಳನ್ನು ಮಂಕಿಪಾಕ್ಸ್ ಪರೀಕ್ಷೆಗಾಗಿ ಪುಣೆಯ NIV ಗೆ ಕಳುಹಿಸಲು ಶಿಫಾರಸು ಮಾಡಲಾಗಿದೆ. ಒಂದು ವೇಳೆ ಪಾಸಿಟಿವ್ ಕೇಸ್ ಪತ್ತೆಯಾದಲ್ಲಿ, ಕಳೆದ 21 ದಿನಗಳಲ್ಲಿ ರೋಗಿಯ ಸಂಪರ್ಕಗಳನ್ನು ಗುರುತಿಸಲು ತಕ್ಷಣ ಸಂಪರ್ಕ ಪತ್ತೆಹಚ್ಚುವಿಕೆಯನ್ನು ಪ್ರಾರಂಭಿಸಬೇಕು ಎಂದು ಸಲಹೆಯಲ್ಲಿ ತಿಳಿಸಲಾಗಿದೆ.

ಯಾವ ಯಾವ ದೇಶಗಳಲ್ಲಿದೆ ಮಂಕಿಪಾಕ್ಸ್

ಯಾವ ಯಾವ ದೇಶಗಳಲ್ಲಿದೆ ಮಂಕಿಪಾಕ್ಸ್

ಯುರೋಪ್ ಖಂಡದ ಆರೋಗ್ಯ ಸಂಸ್ಥೆಗಳು ಯಾವ ರಾಷ್ಟ್ರಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ ಎಂಬುದನ್ನು ತಿಳಿಸಿವೆ. ಯುಕೆ, ಸ್ಪೇನ್, ಪೋರ್ಚುಗಲ್, ಜರ್ಮನಿ, ಬೆಲ್ಜಿಯಂ, ಫ್ರಾನ್ಸ್, ನೆದರ್ಲೆಂಡ್, ಇಟಲಿ ಮತ್ತು ಸ್ವೀಡನ್ ರಾಷ್ಟ್ರದಲ್ಲಿ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿರುವ ಬಗ್ಗೆ ದೃಢಪಡಿಸಲಾಗಿದೆ. ಇದರ ಜೊತೆಗೆ ಯುನೈಟೆಡ್ ಸ್ಟೇಟ್ಸ್, ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲೂ ಸೋಂಕು ಪಕ್ಕಾ ಆಗಿದೆ.

ಏನಿದು ಮಂಕಿಪಾಕ್ಸ್ ವೈರಸ್, ಯಾರಿಗೆ ಅಪಾಯ?

ಏನಿದು ಮಂಕಿಪಾಕ್ಸ್ ವೈರಸ್, ಯಾರಿಗೆ ಅಪಾಯ?

ಮಂಕಿಪಾಕ್ಸ್ ವೈರಸ್ ಎನ್ನುವುದು ಜನರ ನಡುವೆ ಸುಲಭವಾಗಿ ಹರಡುವುದಿಲ್ಲ, ಆದರೆ ಈ ವೈರಸ್ ಇಲಿಗಳಂತಹ ಸೋಂಕಿತ ಜೀವಿಗಳಿಂದ ಮನುಷ್ಯರಿಗೆ ಹರಡುತ್ತದೆ. ಮಂಕಿಪಾಕ್ಸ್ ಅಪರೂಪದ ಕಾಯಿಲೆಯಾಗಿದ್ದು, ಸೋಂಕಿತ ಪ್ರಾಣಿಯ ಕಡಿತದಿಂದ ಅಥವಾ ಅದರ ರಕ್ತ, ದೇಹದ ದ್ರವಗಳು ಅಥವಾ ತುಪ್ಪಳವನ್ನು ಸ್ಪರ್ಶಿಸುವ ಮೂಲಕ ಮಂಗನ ಕಾಯಿಲೆ ಅಂಟಿಕೊಳ್ಳಬಹುದು. ಇದು ಇಲಿಗಳು, ಅಳಿಲುಗಳಂತಹ ಪ್ರಾಣಿಗಳಿಂದ ಹರಡುತ್ತದೆ ಎಂದು ಭಾವಿಸಲಾಗಿದೆ. ಸರಿಯಾಗಿ ಬೇಯಿಸದ ಸೋಂಕಿತ ಪ್ರಾಣಿಯ ಮಾಂಸವನ್ನು ತಿನ್ನುವ ಮೂಲಕವೂ ರೋಗವು ಹರಡುವ ಸಾಧ್ಯತೆಯಿದೆ.

ಜ್ವರ, ಸ್ನಾಯು ನೋವು, ಗಾಯಗಳು ಮತ್ತು ಶೀತಗಳು ಮಾನವರಲ್ಲಿ ಮಂಗನ ಕಾಯಿಲೆಯ ಸಾಮಾನ್ಯ ಲಕ್ಷಣಗಳಾಗಿವೆ. ಮಂಕಿಪಾಕ್ಸ್‌ನ ವೈರಸ್ ಕಾವು ಕಾಲಾವಧಿಯು ಸಾಮಾನ್ಯವಾಗಿ 6 ರಿಂದ 13 ದಿನಗಳವರೆಗೆ ಇರುತ್ತದೆ. ಆದರೆ WHO ಪ್ರಕಾರ 5 ರಿಂದ 21 ದಿನಗಳವರೆಗೆ ಇರುತ್ತದೆ.

English summary
Central Govt advises isolation of suspected monkeypox patient under designated health facilities in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X