ಕೊವಿಡ್ 19 ಜತೆ ಡೆಂಗ್ಯೂ, ಮಲೇರಿಯಾ ಚಿಕಿತ್ಸೆಗೂ ಮಾರ್ಗಸೂಚಿ ಪ್ರಕಟ

ನವದೆಹಲಿ, ಅಕ್ಟೋಬರ್ 13: ಕೊರೊನಾ ಆತಂಕದ ಸಮಯದಲ್ಲೇ ಕೇಂದ್ರ ಆರೋಗ್ಯ ಇಲಾಖೆ ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾ ರೋಗ ಚಿಕಿತ್ಸೆಗೂ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಕೊರೊನಾ ಸೋಂಕು ಒಂದೆಡೆ ಬಾಧಿಸುತ್ತಿದ್ದರೆ ಇನ್ನೊಂದೆಡೆ ಚಿಕನ್ ಗುನ್ಯಾ, ಮಲೇರಿಯಾ, ಡೆಂಗ್ಯೂನಂತಹ ರೋಗಗಳು ಕೂಡ ತೊಂದರೆ ಕೊಡುತ್ತಿವೆ ಹೀಗಾಗಿ ರೋಗದ ಚಿಕಿತ್ಸೆಯ ಕುರಿತು ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ.

ಕೊರೊನಾ ಸೋಂಕು ಮೊದಲ ಬಾರಿಗೆ ದೇಶದ ಜನರನ್ನು ಆತಂಕ್ಕೀಡು ಮಾಡಿದೆ, ಆದರೆ ಮಲೇರಿಯಾ, ಡೆಂಗ್ಯೂದಂತಹ ರೋಗಗಳು ಪ್ರತಿ ವರ್ಷವೂ ಜನರನ್ನು ನರಕಕ್ಕೆ ತಳ್ಳುತ್ತಿದೆ.

Govt Issued Guidelines For COVID-19 Co-Infections With Dengue, Flu And Other Seasonal Diseases

ಇದೀಗ ಕೊರೊನಾ ಸೋಂಕಿನ ಜತೆ ಡೆಂಗ್ಯೂ ಕೂಡ ಸೇರಿಕೊಂಡು, ಎರಡಕ್ಕೂ ಚಿಕಿತ್ಸೆ ನೀಡುವುದು ವೈದ್ಯರಿಂದ ಸಾಧ್ಯವಾಗುತ್ತಿಲ್ಲ.

ಜ್ವರ, ಶೀತ, ಕಫ, ಆಯಾಸ, ತಲೆನೋವು, ಗಂಟಲು ಕೆರೆತ, ಮಾನಸಿಕ ಖಿನ್ನತೆ ಇದ್ದರೆ ವೈದ್ಯರನ್ನು ಭೇಟಿಯಾಗುವುದು ಒಳಿತು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಒಂದೊಮ್ಮೆ ಕೊರೊನಾ ಸೋಂಕಿನ ಜತೆ ಬೇರೆ ಸಾಂಕ್ರಾಮಿಕ ರೋಗಗಳು ಸೇರಿಕೊಂಡರೆ ಮನುಷ್ಯನ ಪ್ರಾಣಕ್ಕೆ ಅಪಾಯ. ಕೊರೊನಾ ಸೋಂಕು ಹಾಗೂ ಪ್ರತಿ ವರ್ಷವೂ ಬರುವ ಅಥವಾ ಕಾಡುವ ರೋಗಗಳ ಪರಿಣಾಮ ಬೇರೆಯೇ ಆಗಿರುತ್ತದೆ.

ಎರಡರಿಂದ ಮೂರು ರೋಗಗಳು ಒಂದೇ ಸಮಯಕ್ಕೆ ಬರುವ ಸಾಧ್ಯತೆ ಇರುವುದರಿಂದ ತುಂಬಾ ಎಚ್ಚರಿಕೆಯಿಂದಿರಬೇಕು. ಆಸ್ಪತ್ರೆಗಳು ಕೂಡ ಇಂತಹ ಪ್ರಕರಣಗಳಿಗೆ ಚಿಕಿತ್ಸೆ ನೀಡಲು ಸಿದ್ಧವಿರಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+