Chicken: ಒಂದು ವಾರ ಚಿಕನ್ ತಿನ್ನಬೇಡಿ ಎಂದು ಸರ್ಕಾರದಿಂದ ಖಡಕ್ ಎಚ್ಚರಿಕೆ, ಏಕೆ?
ನಾನ್‌ವೆಜ್ ಪ್ರಿಯರಿಗೆ ಸರ್ಕಾರವೇ ದೊಡ್ಡ ಶಾಕ್ ನೀಡಿದೆ. ಈಗೆಲ್ಲ ವಾರದ ಎಲ್ಲ ದಿನವೂ ಮಾಂಸಾಹಾರ ತಿನ್ನುವವರಿದ್ದಾರೆ. ಕೆಲವರಿಗೆ ನಾನ್‌ವೆಜ್ ಪ್ರತಿದಿನದ ಆಹಾರದ ಮೆನುವಿನಲ್ಲಿ ಇರಲೇಬೇಕು ಎನ್ನುವವರೂ ಇದ್ದಾರೆ. ಆದರೆ ಈಗ ಸರ್ಕಾರವೇ ದಯವಿಟ್ಟು ಒಂದು ವಾರ ಚಿಕನ್ ತಿನ್ನಬೇಡಿ ಎನ್ನುವ ಮೂಲಕ ಮಾಂಸಾಹಾರ ಪ್ರಿಯರಿಗೆ ಆಘಾತ ನೀಡಿದೆ. ಇದಕ್ಕೆ ಬಲವಾದ ಕಾರಣವೂ ಇದೆ.
ಹೌದು ಪಕ್ಕದ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಸಾರ್ವಜನಿಕರಿ ಚಿಕನ್ ತಿನ್ನದಂತೆ ನಿರ್ಬಂಧ ಹೇರಲಾಗಿದೆ. ಈ ಎರಡೂ ರಾಜ್ಯದ ಜನರು ಚಿಕನ್ ಅನ್ನು ಪ್ರಧಾನವಾಗಿ ಸೇವನೆ ಮಾಡುತ್ತಾರೆ. ಹೀಗಿರುವಾಗ ಅವರಿಗೆ ಚಿಕನ್ ತಿನ್ನಬೇಡಿ ಎಂದು ಸರ್ಕಾರ ಹೇಳುತ್ತಿರುವುದು ತುಸು ಬೇಸರವೂ ತರಿಸಿದೆ. ಆದರೆ, ಪರಿಸ್ಥಿತಿ ಬಿಗಡಾಯಿಸಿರುವುದರಿಂದ ಅಲ್ಲಿನ ಜನರು ಚಿಕನ್‌ಗೆ ಗುಡ್‌ಬೈ ಹೇಳಲೇಬೇಕಿದೆ. ಇದಕ್ಕೆ ಅಸಲಿ ಕಾರಣ ಏನು ಎಂಬುದನ್ನು ಇಲ್ಲಿ ತಿಳಿಯಿರಿ.

ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಇತ್ತೀಚೆಗೆ ಹಕ್ಕಿಜ್ವರ ಹೆಚ್ಚಾಗುತ್ತಿದೆ. ಈ ರಾಜ್ಯಗಳಲ್ಲಿ ಈಗಾಗಲೇ ಹಕ್ಕಿಜ್ವರದ ಶಂಕೆ ಮೇರೆಗೆ 5 ಲಕ್ಷಕ್ಕೂ ಅಧಿಕ ಸೋಂಕು ಪೀಡಿತ ಕೋಳಿಗಳು ಹಾಗೂ ಮೊಟ್ಟೆಗಳನ್ನು ನಾಶಪಡಿಸಲಾಗಿದೆ. ಹಕ್ಕಿಜ್ವರ ಹೆಚ್ಚಾಗುತ್ತಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಕನಿಷ್ಠ ಇನ್ನೊಂದು ವಾರ ಯಾರೂ ಚಿಕನ್ ತಿನ್ನಬೇಡಿ ಎಂದು ಸರ್ಕಾರ ಮನವಿ ಮಾಡಿಕೊಂಡಿದೆ. ಈ ಬಗ್ಗೆ ಎಲ್ಲೆಡೆ ಪ್ರಕಟಣೆಗಳನ್ನು ಹೊರಡಿಸಿ, ಮೈಕ್ ಮೂಲಕವೂ ಹಳ್ಳಿ ಹಳ್ಳಿಗಳಲ್ಲಿ ಜನರಿಗೆ ತಿಳಿಸುತ್ತಿದೆ.
ಪಶ್ಚಿಮ ಗೋದಾವರಿ ಜಿಲ್ಲೆಯ ವೇಲ್ಪುರು ಮತ್ತು ಪೂರ್ವ ಗೋದಾವರಿ ಜಿಲ್ಲೆಯ ಕಾನೂರು ಅಗ್ರಹಾರಂ ಎಂಬ ಎರಡು ಸ್ಥಳಗಳಲ್ಲಿ H5N1 ಪತ್ತೆಯಾದ ನಂತರ ಆಂಧ್ರಪ್ರದೇಶದ ಪಶುಸಂಗೋಪನಾ ಅಧಿಕಾರಿಗಳು ಎರಡು ಕೋಳಿ ಫಾರಂಗಳಲ್ಲಿ ಕೋಳಿಗಳನ್ನು ಕೊಲ್ಲಲು ಪ್ರಾರಂಭಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಇದರಿಂದ ಚಿಕನ್‌ಗೆ ಬೇಡಿಕೆ ತಗ್ಗಿದೆ. ಕೋಳಿ ಬೆಲೆಯಲ್ಲೂ ತೀವ್ರ ಕುಸಿತಕ್ಕೆ ಕಾರಣವಾಗಿದೆ.

ಐಸಿಎಆರ್-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ-ಸೆಕ್ಯುರಿಟಿ ಅನಿಮಲ್ ಡಿಸೀಸ್ (ಎನ್‌ಐಎಚ್‌ಎಸ್‌ಎಡಿ) ಇತ್ತೀಚೆಗೆ ಪರೀಕ್ಷೆಗೆ ಕಳುಹಿಸಲಾದ ಮಾದರಿಗಳಿಂದ ವೈರಲ್ ರೋಗವನ್ನು ಪತ್ತೆಹಚ್ಚಿದೆ ಎಂದು ಪಶುಸಂಗೋಪನಾ ಇಲಾಖೆ ನಿರ್ದೇಶಕ ದಾಮೋದರ್ ನಾಯ್ಡು ಹೇಳಿದ್ದಾರೆ.
ಈ ಭೀತಿ ಶುರುವಾದ ಹಿನ್ನೆಲೆ ಕೋಳಿ ಮಾಂಸದ ಬೆಲೆ 250 ರೂಪಾಯಿಯಿಂದ 150 ರೂಪಾಯಿಗೆ ಕುಸಿದಿದ್ದು, ಕೋಳಿ ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರಿದೆ. ಪಕ್ಕದ ತೆಲಂಗಾಣದಲ್ಲಿಯೂ ಹಕ್ಕಿಜ್ವರದ ಸಾವುಗಳು ಸಂಭವಿಸಿದ್ದು, ಈ ಬಗ್ಗೆ ಅಧಿಕೃತವಾಗಿ ಇನ್ನೂ ದೃಢಪಟ್ಟಿಲ್ಲ.
ಆಂಧ್ರಪ್ರದೇಶದಲ್ಲಿ ಹಕ್ಕಿಜ್ವರ ಪತ್ತೆಯಾದ ಒಂದು ಕಿಲೋಮೀಟರ್ ವ್ಯಾಪ್ತಿಯನ್ನು ರೆಡ್ ಝೋನ್ ಎಂದು ಘೋಷಿಸಲಾಗಿದೆ. ಹಾನಿಗೊಳಗಾದ ಕೋಳಿ ಫಾರಂಗಳಿಗೆ ಪ್ರವೇಶಿಸದಂತೆ ಸಲಹೆ ನೀಡಲಾಗಿದೆ. ಅಲ್ಲದೆ ರೆಡ್ ಝೋನ್‌ಗಳಲ್ಲಿರುವ ಎಲ್ಲ ಕೋಳಿ ಮಾಂಸದ ಅಂಗಡಿಗಳನ್ನು ಮುಚ್ಚಲು ಆದೇಶಿಸಿದೆ. ಕಳೆದ ತಿಂಗಳಿನಿಂದ ಈ ಪ್ರದೇಶಗಳಲ್ಲಿ ಸುಮಾರು ನಾಲ್ಕು ಲಕ್ಷ ಕೋಳಿಗಳು ಸಾವನ್ನಪ್ಪಿವೆ.
ಆಂಧ್ರಪ್ರದೇಶದ ಮುಖ್ಯ ಕಾರ್ಯದರ್ಶಿಗೆ ಇತ್ತೀಚೆಗೆ ಬರೆದ ಪತ್ರದಲ್ಲಿ, ಭಾರತ ಸರ್ಕಾರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ಪಶು ಸಂಗೋಪನೆಯ ಕ್ರಿಯಾ ಯೋಜನೆಯಲ್ಲಿ ವಿವರಿಸಿದಂತೆ ಅಗತ್ಯ ಕ್ರಮಗಳನ್ನು ರಾಜ್ಯ ಸರ್ಕಾರವು ಸೋಂಕಿತ ಮತ್ತು ಕಣ್ಗಾವಲು ಪ್ರದೇಶಗಳ ಘೋಷಣೆ ಸೇರಿದಂತೆ ತಕ್ಷಣವೇ ಕಾರ್ಯಪ್ರವೃತ್ತರಾಗುವಂತೆ ಆದೇಶಿಸಿದೆ. ಈ ಹಿನ್ನೆಲೆ ಸೋಂಕು ತಗ್ಗುವವರೆಗೆ ಚಿಕನ್ ಸೇವನೆ ನಿಲ್ಲಿಸಿ ಎಂದು ಸರ್ಕಾರ ಮನವಿ ಮಾಡಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications