Get Updates
Get notified of breaking news, exclusive insights, and must-see stories!

ಪಿಎಂ ಕೇರ್ಸ್‌ಗೆ ಸರ್ಕಾರದ ನಿಯಂತ್ರಣ, ಆದರೆ ಆರ್‌ಟಿಐ ಅನ್ವಯವಾಗಿಲ್ಲ: ಕೇಂದ್ರದ ಹೊಸ ವರಸೆ

ನವದೆಹಲಿ, ಡಿಸೆಂಬರ್ 25: ಕೋವಿಡ್ ಪರಿಹಾರದ ದೇಣಿಗೆಗಾಗಿ ಸ್ಥಾಪಿಸಲಾಗಿರುವ ಪಿಎಂ-ಕೇರ್ಸ್ ನಿಧಿಯನ್ನು ಸರ್ಜಾರವೇ ರಚಿಸಿರುವುದರಿಂದ ಅದು ಸಾರ್ವಜನಿಕ ಸ್ವತ್ತಾಗಿದೆ. ಆದರೆ ಅದು ಆರ್‌ಟಿಐ ವ್ಯಾಪ್ತಿಗೆ ಬರುವುದಿಲ್ಲ ಎಂಬ ವಿಚಿತ್ರ ಹೇಳಿಕೆಯನ್ನು ಸರ್ಕಾರ ನೀಡಿದೆ. ಕೆಲವು ದಿನಗಳ ಹಿಂದಷ್ಟೇ ಪಿಎಂಕೇರ್ಸ್‌ ವೆಬ್‌ಸೈಟ್ ನಿಧಿಯು ಖಾಸಗಿ ನಿಯಂತ್ರಣದಲ್ಲಿದೆ ಎಂದು ಹೇಳಿತ್ತು. ಆದರೆ ಈಗ ಹೊಸ ಆರ್‌ಟಿಐ ಪ್ರತಿಕ್ರಿಯೆಯಲ್ಲಿ ಅದಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿದೆ.

ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾದ ಅರ್ಜಿಗೆ ಪ್ರತಿಕ್ರಿಯೆ ನೀಡಿರುವ ಸರ್ಕಾರ, ಪಿಎಂ ಕೇರ್ಸ್ ಸಂಸ್ಥೆಯು ಭಾರತ ಸರ್ಕಾರದಿಂದ ಸ್ಥಾಪಿಸಿರುವ, ಸರ್ಕಾರದ ಸ್ವಾಮ್ಯ ಮತ್ತು ನಿಯಂತ್ರಣದಲ್ಲಿದೆ. ಆದರೆ ಅದು ಖಾಸಗಿ ನಿಧಿಗಳನ್ನು ಕೂಡ ಸಂಗ್ರಹಿಸುವುದರಿಂದ ಆರ್‌ಟಿಐ ಅಥವಾ ಮಾಹಿತಿಹಕ್ಕು ಕಾಯ್ದೆಯಡಿ ಬರುವುದಿಲ್ಲ ಎಂದು ತಿಳಿಸಿದೆ.

'ಈ ನಿಧಿಯು ಸಂಪೂರ್ಣವಾಗಿ ವ್ಯಕ್ತಿಗಳು/ಸಂಘಟನೆಗಳು/ಸಿಎಸ್‌ಆರ್‌ಗಳು (ಕಾರ್ಪೊರೇಟ್)/ ವಿದೇಶಿಗರು/ವಿದೇಶಿ ಸಂಘಟನೆಗಳು/ಪಿಎಸ್‌ಯುಗಳಿಂದ ಪಡೆದ ದೇಣಿಗೆಯ ಹಣವನ್ನು ಒಳಗೊಂಡಿದೆ. ಹಾಗೆಯೇ ಇದು ಸೂಕ್ತ ಸರ್ಕಾರದಿಂದ ಹಣಕಾಸನ್ನು ಪಡೆದುಕೊಳ್ಳುತ್ತಿಲ್ಲ ಮತ್ತು ಟ್ರಸ್ಟಿಗಳನ್ನಾಗಿ ಖಾಸಗಿ ವ್ಯಕ್ತಿಗಳಿಂದ ಆಡಳಿತ ನಡೆಸುತ್ತಿಲ್ಲ. ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 2 (h) ಅಡಿ ಈ ಮಾಹಿತಿ ಪಡೆಯಲು ಈ ನಿಯಮಗಳು ಕಡ್ಡಾಯವಾಗಿವೆ. ಹೀಗಾಗಿ ಪಿಎಂ ಕೇರ್ಸ್ ನಿಧಿಯನ್ನು ಸಾರ್ವಜನಿಕ ಪ್ರಾಧಿಕಾರವಾಗಿ ಪರಿಗಣಿಸಲಾಗದು' ಎಂದು ಆರ್‌ಟಿಐ ಪ್ರತಿಕ್ರಿಯೆಯೊಂದು ಹೇಳಿದೆ. ಮುಂದೆ ಓದಿ.

ಸರ್ಕಾರದ ಮಾಲೀಕತ್ವ ಇಲ್ಲ

ಸರ್ಕಾರದ ಮಾಲೀಕತ್ವ ಇಲ್ಲ

ಆದರೆ ಮಾರ್ಚ್ 27ರಂದು ಯಾವ ಟ್ರಸ್ಟ್ ಅಡಿ ನಿಧಿಯನ್ನು ಸ್ಥಾಪಿಸಲಾಗಿತ್ತೋ ಅದು, ತಾನು ಸರ್ಕಾರದ ಮಾಲೀಕತ್ವಕ್ಕೆ ಒಳಪಟ್ಟಿಲ್ಲ ಹಾಗೂ ಅದರ ನಿಯಂತ್ರಣದಲ್ಲಿ ಇಲ್ಲ ಎಂದು ಹೇಳಿತ್ತು. ಈ ವ್ಯತಿರಿಕ್ತದ ಹೇಳಿಕೆಗಳು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಕೋಟಿಗಟ್ಟಲೆ ಹಣ ಸಂಗ್ರಹ

ಕೋಟಿಗಟ್ಟಲೆ ಹಣ ಸಂಗ್ರಹ

ಪಿಎಂ ಕೇರ್ಸ್ ಬಗ್ಗೆ ಸರ್ಕಾರವೇ ನೀಡಿರುವ ವಿಭಿನ್ನ ಹೇಳಿಕೆಗಳಲ್ಲಿನ ವಿರೋಧಾಭಾಸದಿಂದ ಗೊಂದಲಗಳು ಮತ್ತಷ್ಟು ಹೆಚ್ಚಾಗಿವೆ. ಸರ್ಕಾರದ ಸಂಸ್ಥೆಯಂತೆ ರಚನೆಯಾಗಿರುವ ನಿಧಿಯು ವಿವಿಧ ದೇಣಿಗೆದಾರರಿಂದ ಕೋಟಿಗಟ್ಟಲೆ ಹಣವನ್ನು ಸಂಗ್ರಹಿಸಿದ್ದು, ಅಂತಹ ಸಂಘಟನೆಗಳು ಮತ್ತು ವ್ಯಕ್ತಿಗಳ ಮಾಹಿತಿ ಬಹಿರಂಗಪಡಿಸದಂತೆ ತಪ್ಪಿಸುತ್ತಿದೆ ಎನ್ನಲಾಗಿದೆ.

ಪ್ರಧಾನಿ ಅಧ್ಯಕ್ಷ, ಸಚಿವರು ಟ್ರಸ್ಟಿಗಳು

ಪ್ರಧಾನಿ ಅಧ್ಯಕ್ಷ, ಸಚಿವರು ಟ್ರಸ್ಟಿಗಳು

ಪಿಎಂ-ಕೇರ್ಸ್ ಟ್ರಸ್ಟ್ ಅನ್ನು ದೆಹಲಿಯ ಕಂದಾಯ ಇಲಾಖೆಯಲ್ಲಿ ನೋಂದಣಿ ಮಾಡಿಸಲಾಗಿದೆ. ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷರಾಗಿದ್ದು, ಹಿರಿಯ ಸಚಿವರು ಟ್ರಸ್ಟಿಗಳಾಗಿದ್ದಾರೆ. ಆದರೆ ಇತ್ತೀಚೆಗೆ ಫಂಡ್‌ನ ವೆಬ್‌ಸೈಟ್‌ನಲ್ಲಿ ಬಹಿರಂಗವಾಗಿದ್ದ ಟ್ರಸ್ಟ್‌ನ ಡೀಡ್, ತಾನು ಸರ್ಕಾರದ ನಿಧಿಯೆಂದು ಹೇಳಿಕೊಂಡಿರಲಿಲ್ಲ.

ನಿಯಂತ್ರಣ ಹೊಂದಿಲ್ಲ

ನಿಯಂತ್ರಣ ಹೊಂದಿಲ್ಲ

'ಟ್ರಸ್ಟ್ ಯಾವುದೇ ಸರ್ಕಾರ ಅಥವಾ ಸರ್ಕಾರದ ಯಾವುದೇ ಅಂಗದಿಂದ ಪೂರಕವಾಗಿ ಹಣಕಾಸು ಪಡೆದಿರುವ ಅಥವಾ, ನಿಯಂತ್ರಣವಾಗುತ್ತಿರುವ ಅಥವಾ ಮಾಲೀಕತ್ವಕ್ಕೆ ಒಳಪಟ್ಟಿಲ್ಲ ಅಥವಾ ಆ ಉದ್ದೇಶ ಹೊಂದಿಲ್ಲ. ಟ್ರಸ್ಟ್‌ನ ಕಾರ್ಯಾಚರಣೆಯಲ್ಲಿ ಯಾವುದೇ ಸ್ವರೂಪದಲ್ಲಿ ಕೇಂದ್ರ ಸರ್ಕಾರ ಅಥವಾ ಯಾವುದೇ ರಾಜ್ಯ ಸರ್ಕಾರಗಳು ನೇರ ಅಥವಾ ಪರೋಕ್ಷವಾಗಿ ನಿಯಂತ್ರಣ ಹೊಂದಿಲ್ಲ' ಎಂದು ಟ್ರಸ್ಟ್ ಡೀಡ್ ಹೇಳಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+