ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿರಿಕ್ ವಿಮಾನ ಪ್ರಯಾಣಿಕರಿಗೆ ಇನ್ಮುಂದೆ 2 ವರ್ಷ 'ಹಾರಾಟ ನಿಷೇಧ'

By Sachhidananda Acharya
|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 8: ವಿಮಾನಯಾನ ಸಂಸ್ಥೆಗಳ ಸಿಬ್ಬಂದಿಗಳ ಮೇಲೆ ನಡೆದ ಸರಣಿ ದೌರ್ಜನ್ಯ ಘಟನೆಗಳ ನಂತರ ಇದೀಗ ಕಿರಿಕ್ ಪ್ರಯಾಣಿಕರಿಗೆ ಹಾರಾಟ ನಿಷೇಧ ವಿಧಿಸಲು ವಿಮಾನಯಾನ ಸಚಿವಾಲಯ ನಿರ್ಧರಿಸಿದೆ. ಈ ಸಂಬಂಧ ಇಂದು ಹಾರಾಟ ನಿಷೇಧದ ಮಾರ್ಗಸೂಚಿಯನ್ನು ಸಚಿವಾಲಯ ಬಿಡುಗಡೆ ಮಾಡಿದೆ.

ಏರ್ ಟಿಕೆಟ್ ಬುಕ್ಕಿಂಗಿಗೆ ಗುರುತಿನ ಚೀಟಿ ಕಡ್ಡಾಯ !ಏರ್ ಟಿಕೆಟ್ ಬುಕ್ಕಿಂಗಿಗೆ ಗುರುತಿನ ಚೀಟಿ ಕಡ್ಡಾಯ !

ಇದು ಭಾರತದ ಮೊದಲ ನೋ ಫ್ಲೈ ಲಿಸ್ಟ್ ಮಾರ್ಗಸೂಚಿಯಾಗಿದೆ. ಮಾರ್ಗಸೂಚಿ ಬಿಡುಗಡೆ ಮಾಡಿದ ನಾಗರೀಕ ವಿಮಾನಯಾನ ರಾಜ್ಯ ದರ್ಜೆ ಸಚಿವ ಜಯಂತ್ ಸಿನ್ಹಾ, ಪ್ರಯಾಣಿಕರ ಸುರಕ್ಷತೆಯ ಕಾರಣಕ್ಕೆ ಈ ರೀತಿಯ ಪಟ್ಟಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

Government releases no fly list rules for unruly passengers

ಪ್ರಯಾಣಿಕರ ಅಶಿಸ್ತಿನ ವರ್ತನೆಗೆ ಅನುಸಾರವಾಗಿ ಈ ನಿಯಮಾವಳಿಗಳ ಪ್ರಕಾರ ಶಿಕ್ಷೆ ನೀಡಲಾಗುತ್ತದೆ. ಒಟ್ಟು ಮೂರು ಹಂತದ ನೋ ಫ್ಲೈ ಲಿಸ್ಟ್ ಈ ನಿಯಮಾವಳಿಯಲ್ಲಿದೆ.

ಹಂತ 1 : ಮೌಖಿಕ ಅಶಿಸ್ತಿನ ವರ್ತನೆಗಳು; ಕೀಳು ಭಾಷೆಯಲ್ಲಿ ಬೈಯುವುದು ಇತ್ಯಾದಿ. ಈ ರೀತಿಯ ನಡವಳಿಕೆಗೆ ಮೂರು ತಿಂಗಳವರೆಗೆ ಹಾರಾಟ ನಿಷೇಧ ವಿಧಿಸಬಹುದಾಗಿದೆ.

ಹಂತ 2: ದೈಹಿಕ ದೌರ್ಜನ್ಯಗಳು; ಹಲ್ಲೆ ಮಾಡುವುದು, ಹಲ್ಲೆಗೆ ಯತ್ನಿಸುವುದು, ತಳ್ಳುವುದು, ಹೊಡೆಯುವುದು ಇತ್ಯಾದಿ. ಈ ರೀತಿಯ ನಡವಳಿಕೆಗಳಿಗೆ 6 ತಿಂಗಳವರೆಗೆ ಹಾರಾಟ ನಿಷೇಧ ಹೇರಲು ಹೊಸ ನಿಯಮಾವಳಿಗಳಲ್ಲಿ ಅವಕಾಶವಿದೆ.

ಹಂತ 3: ಜೀವ ಬೆದರಿಕೆಯ ನಡವಳಿಕೆಗಳು; ಇದರಡಿಯಲ್ಲಿ ಗಂಭೀರವಾಗಿ ಹಲ್ಲೆ ಮಾಡುವುದು, ಜೀವ ಬೆದರಿಕೆ ಹಾಕುವುದು, ವಿಮಾನಯಾನ ಸಂಸ್ಥೆಯ ವಸ್ತುಗಳಿಗೆ ಹಾನಿ ಮಾಡುವಂಥ ನಡವಳಿಕೆಗಳನ್ನು ಪರಿಗಣಿಸಲಾಗುತ್ತದೆ. ಈ ರೀತಿಯ ಕೃತ್ಯಗಳಿಗೆ ಕನಿಷ್ಠ 2 ವರ್ಷ ಮತ್ತು ಗರಿಷ್ಠ ಮಿತಿಯಲ್ಲದಷ್ಟು ವರ್ಷಗಳವರೆಗೆ ಹಾರಾಟ ನಿಷೇಧ ವಿಧಿಸಲು ಹೊಸ ನಿಯಮಾವಳಿಗಳಲ್ಲಿ ಅವಕಾಶವಿದೆ.

ಹಾರಾಟ ನಿಷೇಧದ ಅಂತಿಮ ತೀರ್ಮಾನವನ್ನು ನಿವೃತ್ತ ಜಿಲ್ಲಾ ನ್ಯಾಯಾಧೀಶರ ನೇತೃತ್ವದ ಸಮಿತಿ ತೆಗೆದುಕೊಳ್ಳಲಿದೆ. 30 ದಿನಗಳ ಒಳಗೆ ತನ್ನ ತೀರ್ಪನ್ನು ಸಮಿತಿಯು ನೀಡಲಿದೆ.

ಇನ್ನು ಸದ್ಯಕ್ಕೆ ಅಸ್ತಿತ್ವದಲ್ಲಿರುವ ಕಾನೂನುಗಳ ಪ್ರಕಾರವೂ ಈ ಎಲ್ಲಾ ಕೃತ್ಯಗಳ ಬಗ್ಗೆ ಕ್ರಮ ಕೈಗೊಳ್ಳಬಹುದಾಗಿದೆ. ಇದಲ್ಲದೆ ಹೆಚ್ಚುವರಿಯಾಗಿ ಈ ಹಾರಾಟ ನಿಷೇಧವನ್ನು ಕಿರಿಕ್ ಪ್ರಯಾಣಿಕರ ಮೇಲೆ ಹೇರಲಾಗುತ್ತದೆ

English summary
Civil Aviation Minister Ashok Gajapathi Raju released India's first three-tier rules for a national no-fly list on Friday in an effort to keep blacklisted people off airlines to ensure safety and check unruly behaviour.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X