ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್-19: ಕೇಂದ್ರ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗೆ ಬಂತು ಹೊಸ ಮಾರ್ಗಸೂಚಿ

|
Google Oneindia Kannada News

ನವದೆಹಲಿ, ಜೂನ್ 9: ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 9,987 ಕೋವಿಡ್-19 ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ. ಆ ಮೂಲಕ ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 2,66,598ಕ್ಕೆ ಏರಿಕೆಯಾಗಿದೆ.

Recommended Video

Amit Shah : Government may have made a mistake while dealing with Corona.! | Narendra Modi | BJP

ಕೇಂದ್ರ ಸರ್ಕಾರದ ಹಲವು ಸಚಿವಾಲಯ ಮತ್ತು ಇಲಾಖೆಗಳಲ್ಲಿನ ಅನೇಕ ಅಧಿಕಾರಿಗಳಿಗೂ ಕೊರೊನಾ ವೈರಸ್ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ದೇಶದ ಎಲ್ಲ ಕಚೇರಿಗಳಲ್ಲಿ ಈ ನಿಯಮಗಳ ಪಾಲನೆ ಕಡ್ಡಾಯ! ದೇಶದ ಎಲ್ಲ ಕಚೇರಿಗಳಲ್ಲಿ ಈ ನಿಯಮಗಳ ಪಾಲನೆ ಕಡ್ಡಾಯ!

ಕಛೇರಿಗಳಲ್ಲಿ ಕೇಂದ್ರ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ವಲಯ ಪಾಲಿಸಲೇಬೇಕಾದ ನಿಯಮಗಳು ಇಂತಿವೆ:

ಯಾರಿಗೆ ಕಛೇರಿಯೊಳಗೆ ಪ್ರವೇಶ.?

ಯಾರಿಗೆ ಕಛೇರಿಯೊಳಗೆ ಪ್ರವೇಶ.?

* ರೋಗ ಲಕ್ಷಣ ಇಲ್ಲದವರಿಗೆ ಮಾತ್ರ ಕಛೇರಿಯೊಳಗೆ ಪ್ರವೇಶ.

* ಕೆಮ್ಮು/ನೆಗಡಿ/ಜ್ವರ ಇದ್ದವರು ಕಡ್ಡಾಯವಾಗಿ ಮನೆಯಲ್ಲೇ ಇರತಕ್ಕದ್ದು.

* ಕಂಟೇನ್ಮೆಂಟ್ ಝೋನ್ ನಲ್ಲಿ ವಾಸಿಸುವ ಅಧಿಕಾರಿ/ಸಿಬ್ಬಂದಿ ಕಛೇರಿಗೆ ಬರುವ ಹಾಗಿಲ್ಲ. ಕಂಟೇನ್ಮೆಂಟ್ ಝೋನ್ ಡಿ-ನೋಟಿಫೈ ಆಗುವವರೆಗೂ ಮನೆಯಿಂದಲೇ ಕೆಲಸ ಮಾಡಬೇಕು.

* ದಿನದಲ್ಲಿ 20 ಕ್ಕಿಂತ ಹೆಚ್ಚು ಅಧಿಕಾರಿ/ಸಿಬ್ಬಂದಿ ಕಛೇರಿ ಪ್ರವೇಶಿಸುವಂತಿಲ್ಲ. ಉಳಿದ ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡಬೇಕು.

* ಅಂಡರ್ ಸೆಕ್ರೆಟರಿ/ಡೆಪ್ಯುಟಿ ಸೆಕ್ರೆಟರಿ ಒಂದೇ ಕ್ಯಾಬಿನ್ ನಲ್ಲಿದ್ದರೆ, ಸಾಮಾಜಿಕ ಅಂತರವನ್ನು ಗಮನದಲ್ಲಿಟ್ಟುಕೊಂಡು ಪರ್ಯಾಯ ದಿನ ಕಾರ್ಯ ನಿರ್ವಹಿಸಬೇಕು.

* ಯಾವುದೇ ವಿಭಾಗದಲ್ಲೂ ಒಮ್ಮೆಗೆ 2 ಕ್ಕಿಂತ ಹೆಚ್ಚು ಅಧಿಕಾರಿಗಳು ಇರುವಂತಿಲ್ಲ.

ಫೇಸ್ ಮಾಸ್ಕ್ ಕಡ್ಡಾಯ

ಫೇಸ್ ಮಾಸ್ಕ್ ಕಡ್ಡಾಯ

* ವೆಂಟಿಲೇಷನ್ ಗಾಗಿ ಕಛೇರಿಯ ಎಲ್ಲಾ ಕಿಟಕಿಗಳನ್ನು ತೆರೆಯಬೇಕು.

* ಫೇಸ್ ಮಾಸ್ಕ್ ಮತ್ತು ಫೇಸ್ ಶೀಲ್ಡ್ ಗಳನ್ನು ಕಛೇರಿಯಲ್ಲಿ ಸದಾ ಕಾಲ ಧರಿಸಿರಬೇಕು.

* ಮಾಸ್ಕ್ ಧರಿಸಲಿಲ್ಲ ಅಂದ್ರೆ ಕಠಿಣ ಕ್ರಮ ಕೈಗೊಳ್ಳಲಾಗುವುದು.

* ಹಳದಿ ಬಣ್ಣದ ವೈದ್ಯಕೀಯ ತ್ಯಾಜ್ಯ ಬಿನ್ ನಲ್ಲಿ ಮಾತ್ರ ಬಳಕೆಯಾದ ಮಾಸ್ಕ್ ಮತ್ತು ಗ್ಲೌಸ್ ಗಳನ್ನು ವಿಲೇವಾರಿ ಮಾಡಬೇಕು.

* ಬಳಕೆಯಾದ ಮಾಸ್ಕ್ ಗಳನ್ನು ಎಲ್ಲೆಂದರಲ್ಲಿ ಬಿಸಾಡುವಂತಿಲ್ಲ.

ಮಾರ್ಗಸೂಚಿ: ಮಾಲ್ ತೆರೆಯಬಹುದು, ಆದರೆ ಚಿತ್ರಮಂದಿರ ಬಂದ್ಮಾರ್ಗಸೂಚಿ: ಮಾಲ್ ತೆರೆಯಬಹುದು, ಆದರೆ ಚಿತ್ರಮಂದಿರ ಬಂದ್

ಫೇಸ್ ಟು ಫೇಸ್ ಮೀಟಿಂಗ್ ಇಲ್ಲ

ಫೇಸ್ ಟು ಫೇಸ್ ಮೀಟಿಂಗ್ ಇಲ್ಲ

* ಫೇಸ್ ಟು ಫೇಸ್ ಮೀಟಿಂಗ್/ಸಭೆ/ಚರ್ಚೆಗಳನ್ನು ಆದಷ್ಟು ಅವಾಯ್ಡ್ ಮಾಡತಕ್ಕದ್ದು.

* ಮೀಟಿಂಗ್/ಸಭೆಗಳಿಗೆ ಅಧಿಕಾರಿಗಳು/ಸಿಬ್ಬಂದಿ ಇಂಟರ್ ಕಾಮ್/ಫೋನ್/ವಿಡಿಯೋ ಕಾನ್ಫರೆನ್ಸ್ ಬಳಸಬಹುದು.

* ಕಛೇರಿಯ ಕೊಠಡಿಗಳಿಂದಲೇ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸತಕ್ಕದ್ದು.

* ಪ್ರತಿ ಅರ್ಧಗಂಟೆಗೊಮ್ಮೆ ಕೈ ತೊಳೆಯುವುದು ಕಡ್ಡಾಯ.

* ಕಛೇರಿಯ ಕಾರಿಡಾರ್ ಗಳಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಇಡತಕ್ಕದ್ದು.

ಭಾರತ ಅನ್ ಲಾಕ್: ಜೂ.9ರಿಂದ ಮಾಲ್, ರೆಸ್ಟೋರೆಂಟ್, ಕಚೇರಿ ಓಪನ್!ಭಾರತ ಅನ್ ಲಾಕ್: ಜೂ.9ರಿಂದ ಮಾಲ್, ರೆಸ್ಟೋರೆಂಟ್, ಕಚೇರಿ ಓಪನ್!

1 ಮೀಟರ್ ಅಂತರ ಕಾಯ್ದುಕೊಳ್ಳಿ

1 ಮೀಟರ್ ಅಂತರ ಕಾಯ್ದುಕೊಳ್ಳಿ

* ಎಲೆಕ್ಟ್ರಿಕ್ ಸ್ವಿಚ್, ಬಾಗಿಲ ಚಿಲಕ, ಎಲಿವೇಟರ್ ಬಟನ್, ವಾಷ್ ರೂಮ್ ಫಿಕ್ಸ್ಚರ್ ಸೇರಿದಂತೆ ಎಲ್ಲರೂ ಅವಶ್ಯಕವಾಗಿ ಬಳಸುವ ವಸ್ತುಗಳನ್ನು ಗಂಟೆಗೊಮ್ಮೆ ಸ್ವಚ್ಛ ಪಡಿಸಬೇಕು.

* ಕೀ-ಬೋರ್ಡ್, ಮೌಸ್, ಫೋನ್, ಎಸಿ, ರಿಮೋಟ್ ಸೇರಿದಂತೆ ವೈಯುಕ್ತಿಕ ವಸ್ತುಗಳನ್ನು ಅಧಿಕಾರಿ/ಸಿಬ್ಬಂದಿ ಸ್ವಚ್ಛಗೊಳಿಸತಕ್ಕದ್ದು.

* ಕುಳಿತುಕೊಳ್ಳುವಾಗ/ನಡೆದಾಡುವಾಗ ಕನಿಷ್ಟ 1 ಮೀಟರ್ ಅಂತರವನ್ನು ಕಾಯ್ದುಕೊಳ್ಳಬೇಕು.

English summary
Government of India issues fresh guidelines for officials and staffers of Central Government to prevent spread of Covid 19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X