ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗಸ್ಟ್ 15ಕ್ಕೆ ಮೋದಿ ಸರ್ಕಾರದಿಂದ ಮಹತ್ವದ ನಿರ್ಧಾರ ಪ್ರಕಟ?

|
Google Oneindia Kannada News

ನವದೆಹಲಿ, ಆಗಸ್ಟ್ 15: ನಿಕೋಟಿನ್ ಸೇವನೆ ಮೇಲೆ ಸಂಪೂರ್ಣ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇ-ಸಿಗರೇಟ್ ಗಳನ್ನು ಡ್ರಗ್ಸ್ ಎಂದು ಪರಿಗಣಿಸಿದ್ದು, ಸಂಪೂರ್ಣ ನಿಷೇಧ ಹೇರಲು ಮುಂದಾಗಿರುವ ಮೋದಿ ಸರ್ಕಾರ, ಈಗ ಸಿಗರೇಟು ಬಿಡಿಯಾಗಿ ಮಾರಾಟದ ಮೇಲೆ ಸಂಪೂರ್ಣ ನಿರ್ಬಂಧ ಹೇರಲು ಮುಂದಾಗಿದ್ದು, ಆಗಸ್ಟ್15ರಂದು ಈ ಕುರಿತು ಅಧಿಕೃತ ಪ್ರಕಟಣೆಯನ್ನು ಪ್ರಧಾನಿ ಮೋದಿ ಅವರೇ ಹೊರಡಿಸುವ ಸಾಧ್ಯತೆಯಿದೆ.

ಕೇಂದ್ರ ಬಜೆಟ್ ಮಂಡನೆಗೂ ಮುನ್ನವೇ ಧೂಮಪಾನಿಗಳಿಗೆ ಕಹಿ ಸುದ್ದಿ ಕೇಂದ್ರ ಬಜೆಟ್ ಮಂಡನೆಗೂ ಮುನ್ನವೇ ಧೂಮಪಾನಿಗಳಿಗೆ ಕಹಿ ಸುದ್ದಿ

Cigarettes and Other Tobacco Products Act (COTPA) ಸಿಗರೇಟು ಹಾಗೂ ಇತರ ತಂಬಾಕು ಉತ್ಪನ್ನ ಹಾಗೂ ಮಾರಾಟ ಕಾಯ್ದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತರಲು ಬಯಸಿದ್ದು, ಈ ಕುರಿತಂತೆ ಪ್ರಕ್ರಿಯೆಯನ್ನು ಕೇಂದ್ರ ಆರೋಗ್ಯ ಸಚಿವಾಲಯ ಆರಂಭಿಸಿದೆ. ಬಿಡಿ ಬಿಡಿಯಾಗಿ ಒಂದೆರಡು ಸಿಗರೇಟು ಮಾರಾಟ ಮಾಡುವಂತಿಲ್ಲ, ಪ್ಯಾಕ್ ಬದಲು ಲೂಸ್ ಸಿಗರೇಟು ಮಾರಾಟದ ಮೇಲೆ ನಿಷೇಧ ಹೇರುವ ಬಗ್ಗೆ ಚಿಂತನೆ ನಡೆಯುತ್ತಿದೆ. ನಿಯಮ ಮೀರಿದರೆ ಭಾರಿ ದಂಡ ತೆರಬೇಕಾಗುತ್ತದೆ ಎಂಬ ತಿದ್ದುಪಡಿಯನ್ನು ತರಲಾಗುತ್ತಿದೆ.

ಕರ್ನಾಟಕದಲ್ಲಿ ಇ -ಸಿಗರೇಟ್ ಸಂಪೂರ್ಣ ನಿಷೇಧ ಕರ್ನಾಟಕದಲ್ಲಿ ಇ -ಸಿಗರೇಟ್ ಸಂಪೂರ್ಣ ನಿಷೇಧ

ಹೊಗೆರಹಿತ ತಂಬಾಕು ಬಳಕೆ ಎಲ್ಲ ಪ್ರದೇಶಗಳಲ್ಲಿ ಇದ್ದರೂ, ಆಗ್ನೇಯ ಏಷ್ಯಾ ಪ್ರದೇಶದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ (301 ಮಿಲಿಯನ್) ಬಳಕೆದಾರರಿದ್ದು, ಇದು ಜಗತ್ತಿನ ಎಲ್ಲ ಬಳಕೆದಾರರ ಶೇ 82ರಷ್ಟಾಗಿದೆ.

Government may ban sale of loose cigarettes

ಪ್ರತಿ ವರ್ಷ ಜಗತ್ತಿನಲ್ಲಿ 7 ಮಿಲಿಯನ್ ಜನರು ತಂಬಾಕಿಗೆ ಬಲಿಯಾಗುತ್ತಿದ್ದಾರೆ. 2000ರಲ್ಲಿ ತಂಬಾಕು ಬಳಸುವವರ ಸಂಖ್ಯೆ ಶೇ 27 ರಷ್ಟಿದ್ದರೆ 2016ರಲ್ಲಿ ಶೇ 20ರಷ್ಟಿತ್ತು ಎಂದು ಡಬ್ಲ್ಯೂಎಚ್‌ಒದ ಹೊಸ ಜಾಗತಿಕ ವರದಿ ತಿಳಿಸಿದೆ. ತಂಬಾಕು ಬಳಕೆ ಮತ್ತು ಪರೋಕ್ಷವಾಗಿ ಧೂಮಪಾನಿಗಳಾಗುವವರು ಹೃದಯಾಘಾತ, ಪಾರ್ಶ್ವವಾಯುವಿನಂತಹ ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.

ಸಿಗರೇಟಿನ ಮೇಲೆ ಶೇ. 5ರಷ್ಟು ಹೆಚ್ಚುವರಿ ಸೆಸ್ ಹೇರಿದ ಸರ್ಕಾರ ಸಿಗರೇಟಿನ ಮೇಲೆ ಶೇ. 5ರಷ್ಟು ಹೆಚ್ಚುವರಿ ಸೆಸ್ ಹೇರಿದ ಸರ್ಕಾರ

WHO ಎಫ್ ಸಿಟಿಸಿ ಮಾರ್ಗಸೂಚಿಗಳಿಗೆ ಇದು ಹೆಚ್ಚು ಪರಿಣಾಮಕಾರಿಯಾಗಿರಲಿದೆ ಎನ್ನಲಾಗಿದ್ದು, ಸಾರ್ವಜನಿಕವಾಗಿ ನಿರ್ಬಂಧಿತ ಪ್ರದೇಶದಲ್ಲಿ ಧೂಮಪಾನ ಮಾಡಿದ ವ್ಯಕ್ತಿಗೆ 200 ರೂಪಾಯಿ ದಂಡ ವಿಧಿಸಲಾಗುತ್ತದೆ. ಈ ಹಿಂದೆ ತಂಬಾಕು ಉತ್ಪನ್ನ ಕಾಯ್ದೆಗೆ ಸಚಿವಾಲಯವು 2003 ರ ಸದನದಲ್ಲಿ ಹಲವಾರು ತಿದ್ದುಪಡಿಗಳನ್ನು ಪ್ರಸ್ತಾಪಿಸಲಾಗಿತ್ತು. ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕರಡು ತಿದ್ದುಪಡಿ ಮಸೂದೆಯನ್ನು 2015 ರಲ್ಲಿ ಸಾರ್ವಜನಿಕಗೊಳಿಸಲಾಗಿತ್ತು. 2017ರಲ್ಲಿ ಹಳೆ ಮಸೂದೆಯನ್ನು ಸಂಪೂರ್ಣ ತಿದ್ದುಪಡಿ ಮಾಡಿ, ಕರಡು ನಿಬಂಧನೆಗಳನ್ನು ಮರುಪರಿಶೀಲಿಸಲು ಮತ್ತು ಉತ್ತಮಗೊಳಿಸಲು ಸರ್ಕಾರ ಮುಂದಾಯಿತು. ಈ ಮುಂಚೆ 1000 ರು ದಂಡ ವಿಧಿಸಲಾಗುತ್ತಿತ್ತು.

English summary
The Union Health Ministry has re-initiated the process of amending the Cigarettes and Other Tobacco Products Act (COTPA).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X