ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶದಿಂದ ಭಾರತಕ್ಕೆ ಬರಲು, ಇಲ್ಲಿಂದ ವಿದೇಶಕ್ಕೆ ತೆರಳಲು ಮಾರ್ಗಸೂಚಿ

|
Google Oneindia Kannada News

ಬೆಂಗಳೂರು, ಮೇ 6: ವಿದೇಶದಲ್ಲಿರುವ ಭಾರತೀಯರಿಗೆ ತಾಯ್ನಾಡಿಗೆ ಮರಳಲು ಹಾಗೂ ಭಾರತದಿಂದ ವಿದೇಶಕ್ಕೆ ತೆರಳಲಿರುವ ಪ್ರಯಾಣಿಕರಿಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಕೊವಿಡ್ 19 ರೋಗ ಭಾರತ ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ದೇಶಗಳಿಗೆ ಹರಡಿದೆ. ಹೀಗಾಗಿ ಬೇರೆ ದೇಶದಲ್ಲಿರುವ ಭಾರತೀಯರು ಹಲವು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಅಲ್ಲದೇ ಪೋಷಕರ ಒತ್ತಾಯದ ಮೇರೆಗೆ ಕೆಲವರು ಭಾರತಕ್ಕೆ ಬರಲು ಒಲವು ತೋರಿಸಿದ್ದಾರೆ.

ಅಂತೆಯೇ ಭಾರತಕ್ಕೆ ಈಗಾಗಲೇ ಬಂದಿರುವ ಕೆಲವು ಮಂದಿ ಮರಳಿ ವಿದೇಶಕ್ಕೆ ಹೋಗುವ ಪ್ರಯತ್ನದಲ್ಲಿದ್ದಾರೆ ಇಂತವರು ಆರೋಗ್ಯ ಸಚಿವಾಲಯ ನೀಡಿರುವ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕಿದೆ.

Protocol For Indian Nationals Stranded Outside The Country And Persons To Travel Abroad

ವಿದೇಶದಿಂದ ಭಾರತಕ್ಕೆ ಬರುವವರಿಗೆ ಮಾರ್ಗಸೂಚಿ

<strong>ಕರ್ನಾಟಕದಲ್ಲಿ ಕೊವಿಡ್ 19 ರೋಗಿಗಳಿಗೆ ಪರಿಷ್ಕೃತ ಡಿಸ್ಚಾರ್ಜ್ ಮಾರ್ಗಸೂಚಿ</strong>ಕರ್ನಾಟಕದಲ್ಲಿ ಕೊವಿಡ್ 19 ರೋಗಿಗಳಿಗೆ ಪರಿಷ್ಕೃತ ಡಿಸ್ಚಾರ್ಜ್ ಮಾರ್ಗಸೂಚಿ

-ಭಾರತಕ್ಕೆ ಮರಳುವವರು ಆಯಾ ದೇಶದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಭೇಟಿ ನೀಡಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು.ಹಾಗೆಯೇ ಕೆಲವು ಅಗತ್ಯ ಮಾಹಿತಿಗಳನ್ನು ನೀಡಬೇಕು.
-ಭಾರತೀಯ ವಿಮಾನಯಾನ ಸಚಿವಾಲಯವು ವಿದೇಶದಿಂದ ಭಾರತಕ್ಕೆ ಬರುವವರಿಗಾಗಿ ವಿಶೇಷ ವಿಮಾನ ವ್ಯವಸ್ಥೆ ಮಾಡಲಿದೆ. ಹಾಗೆಯೇ ಮಿಲಿಟರಿ ಅಫೇರ್ಸ್ ಇಲಾಖೆಯು ನೌಕಾ ಹಡಗುಗಳ ಮೂಲಕ ಹಲವು ಮಂದಿಯನ್ನು ಕರೆ ತರಲಿದೆ. ಆದರೆ ವಿಮಾನ ಹಾಗೂ ಹಡಗಿನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಕೊರೊನಾ ನೆಗೆಟಿವ್ ಇರಬೇಕು.
-ಅಲ್ಪಾವಧಿ ವೀಸಾ ಇರುವವರು, ವಲಸೆ ಕಾರ್ಮಿಕರು, ಗರ್ಭಿಣಿ,ವಿದ್ಯಾರ್ಥಿಗಳು, ತುರ್ತು ವೈದ್ಯಕೀಯ ಚಿಕಿತ್ಸೆ, ಕುಟುಂಬಸ್ಥರ ಮರಣ ಹೀಗೆ ಅತಿ ಅಗತ್ಯವಿರುವವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
-ನೋಂದಣಿಯಲ್ಲಿ ಅವರ ಹೆಸರು, ವಿಳಾಸ, ಹುಟ್ಟಿದ ದಿನಾಂಕ, ಲಿಂಗ, ಮೊಬೈಲ್ ನಂಬರ್, ನೀವು ತಲುಪಬೇಕಾದ ಸ್ಥಳದ ಕುರಿತು ಮಾಹಿತಿ ನೀಡಬೇಕು.
-ಭಾರತಕ್ಕೆ ಬಂದಿಳಿದ ದಿನದಿಂದ 14 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್‌ಗೆ ತೆರಳಬೇಕು.
-ವಿಮಾನ ಹಾಗೂ ಹಡಗಿನಲ್ಲಿ ಬಂದ ಪ್ರಯಾಣಿಕರಿಗೆ ಎಂಇಎ ಥರ್ಮಲ್ ಸ್ಕ್ರೀನಿಂಗ್ ಮಾಡಲಿದೆ. ಕೊರೊನಾ ಲಕ್ಷಣಗಳು ಇಲ್ಲದವರು ಮಾತ್ರ ಹಡಗು, ವಿಮಾನದಲ್ಲಿ ಪ್ರಯಾಣಿಸಬಹುದಾಗಿದೆ.
-ಎಲ್ಲಾ ಪ್ರಯಾಣಿಕರು 'ಆರೋಗ್ಯ ಸೇತು' ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಳ್ಳಬೇಕು.
-ಒಂದೊಮ್ಮೆ ಸ್ಕ್ರೀನಿಂಗ್ ಸಂದರ್ಭದಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿದರೆ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಬೇಕು.
-14 ದಿನಗಳ ನಂತರ ಕೊವಿಡ್ 19 ನೆಗೆಟೀವ್ ಬಂದರೆ ಅವರು ಮನೆಗಳಿಗೆ ತೆರಳಬಹುದಾಗಿದೆ. ಮನೆಗೆ ತೆರಳಿದ ಬಳಿಕವೂ ಮುಂದಿನ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಬೇಕು.

Protocol For Indian Nationals Stranded Outside The Country And Persons To Travel Abroad

ಭಾರತದಿಂದ ವಿದೇಶಕ್ಕೆ ತೆರಳುವವರಿಗೆ ಮಾರ್ಗಸೂಚಿ

-ವಿದೇಶಕ್ಕೆ ತೆರಳಲು ಭಾರತೀಯ ವಿಮಾನಯಾನ ಸಚಿವಾಲಯದ ಬಳಿ ಮನವಿ ಮಾಡಬೇಕು. ಯಾವ ಕಾರಣಗಳಿಗಾಗಿ ಭಾರತಕ್ಕೆ ಬಂದಿದ್ದು, ಯಾಕಾಗಿ ಹಿಂದಿರುಗುತ್ತಿದ್ದೀರ ಎನ್ನುವ ಮಾಹಿತಿ ನೀಡಬೇಕು.
-ಬೇರೆ ದೇಶದ ಪೌರತ್ವ ಹೊಂದಿರಬೇಕು, ಕನಿಷ್ಟ ಒಂದು ವರ್ಷದ ಅವಧಿಯ ವೀಸಾ ಹೊಂದಿರಬೇಕು. ಗ್ರೀನ್ ಅಥವಾ ಒಸಿಐ ಕಾರ್ಡ್ ದಾರರಾಗಿರಬೇಕು.
-ಭಾರತದಿಂದ ವಿದೇಶಕ್ಕೆ ತೆರಳುವವರಿಗಾಗಿ ವಿಶೇಷ ವಿಮಾನ ವ್ಯವಸ್ಥೆ ಕಲ್ಪಿಸಲಾಗುತ್ತದೆ.
-ವಿಮಾನ ಪ್ರಯಾಣ ವೆಚ್ಚವನ್ನು ಪ್ರಯಾಣಿಕರೇ ಭರಿಸಬೇಕಿದೆ.
-ಪ್ರಯಾಣಕ್ಕೂ ಮುನ್ನ ಭಾರತದಲ್ಲಿ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಕೊರೊನಾ ಲಕ್ಷಣಗಳು ಇಲ್ಲದವರು ಮಾತ್ರ ವಿದೇಶಕ್ಕೆ ಪ್ರಯಾಣಿಸಬಹುದಾಗಿದೆ.
-ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು, ಪರಿಸರ ಸ್ವಚ್ಛತೆ, ರೆಸ್ಪಿರೇಟರಿ ಹೈಜಿನ್, ಕೈಗಳನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು.

English summary
The Ministry Of Home Affairs Issued Standard Operating Protocols for Movement Of Indian Nationals stranded outside the country and of specified persons to travel abroad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X