ಗೋರಖ್ ಪುರ ದುರಂತ: ತುರ್ತು ಸಭೆ ಕರದ ಯೋಗಿ ಆದಿತ್ಯನಾಥ್

Posted By:
Subscribe to Oneindia Kannada

ಗೋರಖ್ ಪುರ(ಉತ್ತರ ಪ್ರದೇಶ), ಆಗಸ್ಟ್ 12: ಕಳೆದ 48 ಗಂಟೆಗಳಲ್ಲಿಉತ್ತರ ಪ್ರದೇಶದ ಗೋರಕ್ ಪುರದಲ್ಲಿ ಎನ್ಸೆಫಾಲಿಟಿಸ್ (encephalitis) ಎಂಬ ಮೆದುಳು ಸಂಬಂಧಿ ರೋಗಕ್ಕೆ 30 ಮಕ್ಕಳು ಅಸುನೀಗಿರುವ ದುರಂತಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಮುಖ್ಯಮಂತ್ರಿ ಆದಿತ್ಯನಾಥ್ ತುರ್ತು ಸಭೆಯೊಂದನ್ನು ಕರೆದಿದ್ದಾರೆ.

48 ಗಂಟೆಗಳಲ್ಲಿ ಯೋಗಿ ಆದಿತ್ಯನಾಥ್ ತವರಲ್ಲಿ 30 ಮಕ್ಕಳ ದಾರುಣ ಬಲಿ

ಸಭೆಯಲ್ಲಿ ಇಲ್ಲಿನ ಆರೋಗ್ಯ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್, ವೈದ್ಯಕೀಯ ಶಿಕ್ಷಣ ಸಚಿವ ಅಶುತೋಷ್ ಟಂಡನ್ ಸೇರಿದಂತೆ ಉತ್ತರ ಪ್ರದೇಶ ಸಚಿವಾಲಯದ ಪ್ರಮುಖರು ಭಾಗವಹಿಸಲಿದ್ದಾರೆ.

Gorakhpur tragedy: CM Adityanath calles emergency meeting

ಆಗಸ್ಟ್ 10-11 ರಲ್ಲಿ ಎನ್ಸೆಫಾಲಿಟಿಸ್ ಎಂಬ ಮೆದುಳು ಸಂಬಂಧಿ ರೋಗದಿಂದ ಬಳಲುತ್ತಿದ್ದ 30 ಮಕ್ಕಳು ಅಸುನೀಗಿದ್ದು, ಮಕ್ಕಳಿಗೆ ಅಗತ್ಯವಿದ್ದ ಆಮ್ಲಜನಕವನ್ನು ಪೂರೈಸುವಲ್ಲಿ ಈ ಮಕ್ಕಳು ದಾಖಲಾಗಿದ್ದ ಬಾಬಾ ರಾಘವ್ ದಾಸ್ ಮೆಡಿಕಲ್ ಕಾಲೇಜ್ ವಿಫಲವಾಗಿತ್ತು ಎಂಬ ಆರೋಪ ಕೇಳಿಬರುತ್ತಿದ್ದು, ಅಸುನೀಗಿದ ಮಕ್ಕಳ ಪೋಷಕರು ಸರ್ಕಾರ ಮತ್ತು ಆಸ್ಪತ್ರೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Uttar Pradesh Chief Minister Yogi Adityanath has called an emergency meeting on Aug 12th following the tragic deaths of over 30 infants at Gorakhpur's Baba Raghav Das Medical College's hospital due to alleged disruption in the supply of liquid oxygen.
Please Wait while comments are loading...