ಕೇರಳ ಸಂತ್ರಸ್ತರನ್ನು ಹುಡುಕಲು ನೆರವಾಗಲಿದೆ ಗೂಗಲ್ ಟೂಲ್!
ತಿರುವನಂತಪುರಂ, ಆಗಸ್ಟ್ 19: ಭಾರಿ ಮಳೆ, ಬಿರುಗಾಳಿ, ಜಲ ಪ್ರವಾಹದಿಂದ ತತ್ತರಿಸಿರುವ ದೇವರ ಸ್ವಂತ ನಾಡು ಕೇರಳಕ್ಕೆ ನೆರವಾಗಲು ಸರ್ಚ್ ಇಂಜಿನ್ ದೈತ್ಯ ಗೂಗಲ್ ಕೂಡಾ ಮುಂದಾಗಿದೆ.
ಕೇರಳಕ್ಕೆ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಟೆಲಿಕಾಂ ಸಂಸ್ಥೆಗಳು ಏಳು ದಿನಗಳ ವರೆಗೆ ಉಚಿತ ಸೇವೆ ನೀಡಲು ಮುಂದಾಗಿವೆ. ತಂತ್ರಜ್ಞಾನದ ಮೂಲಕ ಸಂತ್ರಸ್ತರಿಗೆ ನೆರವಾಗಲು ಸರ್ಚ್ ಇಂಜಿನ್ ತನ್ನ ಪರ್ಸನ್ ಫೈಂಡರ್ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದೆ.
ನಾಪತ್ತೆಯಾಗಿರುವವರು, ನೆರವು ಬೇಕಾದವರು ಈ ಟೂಲ್ ಬಳಕೆ ಮಾಡಬಹುದು. ಸದ್ಯ ಕೇರಳ ಪ್ರವಾಹಕ್ಕಾಗಿ ಈ ಟೂಲ್ ಲಭ್ಯವಿದೆ. ಈ ಲಿಂಕ್ ಕ್ಲಿಕ್ ಮಾಡಿ ಚೆಕ್ ಮಾಡಬಹುದು.

ಕೇರಳದಲ್ಲಿ ಪ್ರವಾಹದಲ್ಲಿ ಸಿಲುಕಿರುವವರು, ಇಂಟರ್ನೆಟ್ ಸಂಪರ್ಕ ಇಲ್ಲದೆಯೂ ಗೂಗಲ್ ಲೊಕೇಶನ್ ಶೇರ್ ಮಾಡಬಹುದು ಎಂದು ಗೂಗಲ್ ತಿಳಿಸಿದೆ. ಆಂಡ್ರಾಯ್ಡ್ ಅಥವಾ ಟ್ಯಾಬ್ಲೆಟ್ ಬಳಕೆದಾರರು ಗೂಗಲ್‌ನಲ್ಲಿ ಪ್ಲಸ್ ಕೋಡ್ ಬಳಸಿ, ತಾವಿರುವ ಪಕ್ಕಾ ಸ್ಥಳದ ಮಾಹಿತಿಯನ್ನು ಶೇರ್ ಮಾಡಬಹುದಾಗಿದೆ











Click it and Unblock the Notifications