ಭಾರತದ ಮೊದಲ ಮಹಿಳಾ ವಕೀಲೆಗೆ ಗೂಗಲ್ ಡೂಡಲ್ ನಮನ
ಭಾರತದ ಹಲವು ಮೊದಲುಗಳಿಗೆ ನಾಂದಿ ಹಾಡಿದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕೊರ್ನೆಲಿಯಾ ಸರೋಬ್ಜಿ ಅವರನ್ನು ಗೂಗಲ್ ಡೂಡಲ್ ನೆನಪಿಸಿಕೊಂಡು, ನಮನ ಸಲ್ಲಿಸಿದೆ. ನ.15 ರಂದು ಅವರ ಜನ್ಮದಿನವಾದ್ದರಿಂದ ಅವರ ಸಾಧನೆಗಳನ್ನು ಗೂಗಲ್ ನೆನಪಿಸಿದೆ.
ಕೊರ್ನೆಲಿಯಾ ಸರೋಬ್ಜಿ(15.11.1866-6.7.1954) ಜನಿಸಿದ್ದು ನಾಸಿಕ್ ನಲ್ಲಿ. ಚಿಕ್ಕವಯಸ್ಸಿನಿಂದಲೂ ಅಸಾಧ್ಯ ಬುದ್ಧಿವಂತರಾಗಿದ್ದ ಕೊರ್ನೆಲಿಯಾ ಮುಂಬೈ ವಿಶ್ವವಿದ್ಯಾಲಯದ ಮೊದಲ ಮಹಿಳಾ ಪದವಿಧರೆ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಅಷ್ಟೇ ಅಲ್ಲ, ಆಕ್ಸಫರ್ಡ್ ವಿಶ್ವಿದ್ಯಾಲಯದಲ್ಲಿ ಕಾನೂನುಶಾಸ್ತ್ರ ಓದಿದ ಮೊದಲ ಮಹಿಳೆ ಸಹ ಅವರೇ. ಭಾರತದ ಮೊದಲ ಮಹಿಳಾ ವಕೀಲೆ ಎಂಬ ಹೆಗ್ಗಳಿಕೆಯೂ ಅವರದು.

ಹಲವು ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು, ಭಾರತದಲ್ಲಿದ್ದ ಹಲವು ಸಾಮಾಜಕ ಅನಿಷ್ಟಗಳನ್ನು ಬದಿಗೊತ್ತಲು ಶ್ರಮಿಸಿದವರು.
ಲವ್ ಅಂಡ್ ಲೈಫ್ ಬಿಯೋಂಡ್ ದ ಪರ್ಧಾ, ಸನ್ ಬೇಬೀಸ್, ಬಿಟ್ವೀನ್ ಟ್ವೈಲೈಟ್ಸ್: ಬೀಯಿಂಗ್ ಸ್ಟಡೀಸ್ ಆಫ್ ಇಂಡಿಯಾ ವುಮನ್ ಬೈ ಒನ್ ಆಫ್ ದೆಮ್ ಮುಂತಾದ ಪುಸ್ತಕಗವಳನ್ನೂ ಇವರು ರಚಿಸಿದ್ದಾರೆ. ಇಷ್ಟೆಲ್ಲ ಸಾಧನೆ ಮಾಡಿದ ಭಾರತೀಯ ಮಹಿಳೆಯೊಬ್ಬರನ್ನು ನೆನೆವ ಮೂಲಕ, ಅವರ ಸಾಧನೆಯನ್ನು ಪರಿಚಯಿಸಿದ್ದಕ್ಕೆ ಗೂಗಲ್ ಡೂಡಲ್ ಗೆ ನಮನ.












Click it and Unblock the Notifications