Google Doodle: ಸೌಥ್ ಇಂಡಿಯಾದ ಪ್ರಮುಖ ಆಹಾರ "ಇಡ್ಲಿ'ಗೆ ಗೂಗಲ್ ವಿಶೇಷ ಗೌರವ

ಪ್ರತಿಯೊಬ್ಬರಿಗೆ ಇಷ್ಟವಾಗುವ ದೇಶ ವಿದೇಶಗಳಲ್ಲೂ ಖ್ಯಾತಿ ಪಡೆದ ದಕ್ಷಿಣ ಭಾರತ ಆಹಾರ ಸಂಸ್ಕೃತಿಯ ಭಾಗವು ಆಗಿರುವ ಇಡ್ಲಿಯನ್ನು ಗೌರವಿಸಿ ಗೂಗಲ್ ಕಂಪನಿಯು ತನ್ನ ಲೋಗೋ ಬದಲಾಯಿಸಿದೆ. ಗೂಗಲ್ ವಿಶೇಷ ಡೂಡಲ್‌ನೊಂದಿಗೆ ಇಡ್ಲಿಆಹಾರ ಪದಾರ್ಥಕ್ಕೆ ಗೌರವ ಸೂಚಿಸಿದೆ. 2025 ಅಕ್ಟೋಬರ್ 11ರಂದು ಗೂಗಲ್ ತನ್ನ ಲೋಗೋದಲ್ಲಿ ಇಡ್ಲಿಗೆ ವಿಶೇಷ ಸ್ಥಾನ ನೀಡಿದೆ.

ಸಾಂಪ್ರದಾಯಿಕ ಬಾಳೆ ಎಲೆಯ ಮೇಲೆ ಹಾಕಲಾದ ಇಡ್ಲಿಗಳು, ಇಡ್ಲಿ ಪಾತ್ರೆಯ ಬೌಲ್‌ಗಳು ಮತ್ತು ಚಟ್ನಿ-ಸಾಂಬಾರ್ ಗೂಗಲ್ ಲೋಗೋ ಸೃಜನಾತ್ಮಕವಾಗಿ ಪರಿವರ್ತಿಸಲಾಗಿದೆ. ಇದು ಗೂಗಲ್ ಸರ್ಚ್ ಇಂಜಿನ್ ಹೋಮ್ ಪೇಜಿನಲ್ಲಿ ಕಾಣಿಸಿಕೊಂಡಿದೆ. ಕೋಟ್ಯಾಂತರ ಜನರು ಜನರು ಪ್ರೀತಿಸುವ ನೆಚ್ಚಿನ ಉಪಾಹಾರದಲ್ಲಿ ಇಡ್ಲಿಗೆ ವಿಶೇಷ ಸ್ಥಾನವಿದೆ. ಸಣ್ಣವರಿಂದ ಹಿಡಿದು ವೃದ್ಧರವರೆಗೂ ಇಡ್ಲಿ ಇಷ್ಟಪಡದವರಿಲ್ಲ ಎನ್ನಬಹುದು.

Google Doodle Celebrates South India s Beloved Idli How to Make Idli

ಇಂದಿನ ಗೂಗಲ್ ಡೂಡಲ್ ನಲ್ಲಿ ಅಕ್ಕಿ ಮತ್ತು ಉದ್ದಿನ ಬೇಳೆಯಿಂದ ತಯಾರಿಸಿದ ಇಡ್ಲಿಯನ್ನು ಸಾಲಾಗಿ ಜೋಡಿಸಲಾಗಿದೆ. ಆವಿಯಲ್ಲಿ ಬೇಯಿಸುತ್ತಿದ್ದಂತೆ ದಕ್ಷಿಣ ಭಾರತದ ಪ್ರಮುಖ ಆಹಾರ ಕೇಕ್‌ ರೀತಿಯಲ್ಲಿ ಮೃದುವಾಗಿ ಸಿದ್ಧವಾಗಿಬಿಡುತ್ತದೆ ಎಂದು ಗೂಗಲ್ ಬರೆದುಕೊಂಡಿದೆ. ಗೂಗಲ್‌ ಕಂಪನಿಯು ತನ್ನ ಅಧಿಕೃತ ಡೂಡಲ್ಸ್ ಪೋರ್ಟಲ್‌ನಲ್ಲಿ ಡೂಡಲ್ ಪ್ರಕಟಿಸಿ ಇಡ್ಲಿಗೆ ಸಾಂಸ್ಕೃತಿಕ ಗೌರವ ಸಮರ್ಪಿಸಿದೆ.

ಈ ಗೂಗಲ್ ಡೂಡಲ್ ಅನ್ನು ಸರಿಯಾಗಿ ಗಮನಿಸಿದರೆ, ಇಲ್ಲಿ ಇಡ್ಲಿ ತಯಾರಿಸುವ ಪ್ರತಿ ಹಂತವನ್ನು ವಿವರಿಸಿದಂತೆ ಕಾಣುತ್ತದೆ. ಹಸಿರು ಬಾಳೆಯ ಎಲೆ ಮೇಲೆ ಅಕ್ಕಿ ಧಾನ್ಯಗಳು ಮತ್ತು ಇಡ್ಲಿ ಪಾತ್ರೆಯಿಂದ ಹಿಡಿದು, ಮೃದುವಾದ, ನಯವಾದ ಕೇಕ್‌ ರೀತಿಯಯಾಗಿ ನೀರಿನ ಹವೆಗೆ (ಆವಿಯಲ್ಲಿ) ಬೇಯಿಸುವುದು. ತೆಂಗಿನಕಾಯಿ ಚಟ್ನಿ ಮತ್ತು ಸಾಂಬಾರ್‌ನಂತಹ ಕ್ಲಾಸಿಕ್ ರೀತಿಯಲ್ಲಿ ಬಡಿಸುವುದನ್ನು ಚಿತ್ರಿಸಲಾಗಿದೆ. ಇದೆಲ್ಲವು ಇಡ್ಲಿಗೆ ವೈಶಿಷ್ಯತೆ, ಪ್ರಾಮುಖ್ಯತೆಯನ್ನು ದೈನಂದಿನ ಆಹಾರದ ಭಾಗವಗಿದ್ದನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ ದಕ್ಷಿಣ ಭಾರತದ ಊಟ-ಆತಿಥ್ಯ ಸಂಪ್ರದಾಯಗವನ್ನು ತೋರ್ಪಡಿಸಲಾಗಿದೆ. ಬಾಳೆ ಎಲೆಯು ಶುದ್ಧತೆ ಮತ್ತು ಆಹಾರದ ಮೇಲಿನ ಗೌರವವನ್ನು ಸಂಕೇತವಾಗಿದೆ.

ಅಕ್ಟೋಬರ್ 11 ಆಚರಣೆ ಏಕೆ?

ವಿಶ್ವ ಇಡ್ಲಿ ದಿನವೆಂದು ಮಾರ್ಚ್ 30 ಅನ್ನು ಅಧಿಕೃತವಾಗಿ ಗುರುತಿಸಲಾಗಿದೆ. ಅಕ್ಟೋಬರ್ 11ಕ್ಕೆ ಸಂಬಂಧಿಸಿದ ಯಾವುದೇ ನಿರ್ದಿಷ್ಟ ಹಬ್ಬ ಅಥವಾ ವಾರ್ಷಿಕೋತ್ಸವ ಇಲ್ಲ. ಎಲ್ಲ ಹಿನ್ನೆಲೆಯ ಜನರನ್ನು ಒಂದುಗೂಡಿಸುವ ಆಹಾರ ಪದಾರ್ಥಗಳ ಪೈಕಿ ಇಡ್ಲಿಯನ್ನು ಹೆಚ್ಚು ಜನ ಇಷ್ಟಪಡಿಸುತ್ತಾರೆ. ಹೀಗಾಗಿ ಇಂದು ಪಾಕಶಾಲೆಯ ಮತ್ತು ಸಾಂಸ್ಕೃತಿಕ ಮಹತ್ವ ಆಚರಿಸಲು ಗೂಗಲ್ ಇಡ್ಲಿಯೊಂದಿಗೆ ತನ್ನ ಡೂಡಲ್ ಬದಲಾಯಿಸಿಕೊಂಡಿದೆ.

ಇಡ್ಲಿಯ ಸರಳತೆ, ಆರೋಗ್ಯ ಪ್ರಯೋಜನಗಳು ಸಿಗುತ್ತವೆ. ಹಳ್ಳಿಯಿಂದ ದಿಲ್ಲಿವರೆಗೆ, ಚೆನ್ನೈನಿಂದ ನ್ಯೂಯಾರ್ಕ್‌ಗೆ ಇಡ್ಲಿಗೆ ಅಭಿಮಾನಿಗಳಿದ್ದಾರೆ. ಅದನ್ನು ಇಷ್ಟಪಟ್ಟು ತಿನ್ನುತ್ತಾರೆ. ಗೂಗಲ್ ಕೇವಲ ಆಹಾರಕ್ಕೆ ಗೌರವ ಸೂಚಿಸುವುಲ್ಲ. ಭಾರತದ ಆಹಾರ ಶ್ರೀಮಂತತೆಯನ್ನು ಜಗತ್ತಿಗೆ ತೋರಿಸುವು ಉದ್ದೇಶ ಸಹ ಹೊಂದಿದೆ.

ಇಡ್ಲಿ, ಚಿಟ್ನಿ-ಸಾಂಬಾರ್ ಮಾಡುವುದು ಹೇಗೆ?

ಸಾಂಪ್ರದಾಯಿಕ ಇಡ್ಲಿ ತಯಾರಿಸಲು 12 ಗಂಟೆಗಳ ಪೂರ್ವ ಸಿದ್ಧತೆ ಬೇಕಾಗುತ್ತದೆ. ಅಕ್ಕಿಯ ಹಿಟ್ಟನ್ನು 12 ಗಂಟೆ ಮುಂಚಿತವಾಗಿ ಮೂರು ಹಂತದ ಪ್ರಕ್ರಿಯೆಯ ಮೂಲಕ ತಯಾರಿಸಬೇಕಾಗುತ್ತದೆ. ಮೊದಲು ಅಕ್ಕಿ ನೆನೆಸಿಟ್ಟು ನಂತರ ಅದಕ್ಕೆ ಉದ್ದಿನ ಬೇಳೆ, ಮೆಂತ್ಯ ಬೀಜ ಸಹ ಹಾಕಿ ಅದನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು. ರುಬ್ಬಿಕೊಂಡು ರಾತ್ರಿಯಿಡೀ ನೆನಸಿಡಬೇಕು. ಬೆಳಗ್ಗೆ ಇಡ್ಲಿ ಮಾಡುವಾಗ ಕೊಂಚ ಸೋಡಾ, ಉಪ್ಪು ಹಾಕಿ ಹುದುಗಿಸಬೇಕು. ಬಳಿಕ ಇಡ್ಲಿ ಪಾತ್ರೆಗೆ ಹಾಕಿಕೊಂಡು ನೀರಿನ ಆವಿಯಲ್ಲಿ ಬೇಯಿಸಬೇಕು. ಸುಮಾರು 10-15 ನಿಮಿಷಗಳ ಕಾಲ ಸಮಯ ಹಿಡಿಯುತ್ತದೆ.

ಬೇಸಿಕೊಂಡ ಬೇಳೆ, ತರಕಾರಿ ಜೊತೆಗೆ ವಗ್ಗರಣೆ ಹಾಕಿಕೊಂಡು, ಖಾರ, ಮಸಾಲೆ ಬೆರೆಸಿ ಕುದಿಬೇಕು. ಹುಣಸೆ ಹಣ್ಣು ರಸ ಬಿಟ್ಟುಕೊಂಡು ಪೂರ್ಣ ಕುದಿಸಿಕೊಂಡರೆ ಸಾಂಬಾರ್ ಸಿದ್ಧವಾಗುತ್ತದೆ. ಮತ್ತೊಂದೆಡೆ ತೆಂಗಿನಕಾಯಿಯನ್ನು ತುರಿದು, ಜೀರಿಗೆ, ಮೆಣಸಿಕಾಯಿ, ಕರಿಬೇವು ಹಾಕಿ ಮಿಕ್ಸಿ ಹಾಕಿ ರುಬ್ಬಿಕೊಳ್ಳಬೇಕು. ಅದಕ್ಕೆ ಸ್ವಲ್ಪವೇ ಸ್ವಲ್ಪ ಸಾಸಿವೆ, ಕರಿಬೇವು ಅನ್ನು ಎಣ್ಣೆಗೆ ಹಾಕಿ ಬೇಯಿಸಿ ಆ ಚಟ್ನಿಗೆ ಹಾಕಿಕೊಂಡು ತಿರುವಿದರೆ ರುಚಿಯಾದ ಚಟ್ನಿ ಸಿದ್ಧವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+