ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಗೂಗಲ್ ಸಿಇಒ ಸುಂದರ್ ಪಿಚೈ ಪ್ರತಿಕ್ರಿಯೆ

|
Google Oneindia Kannada News

ನವದೆಹಲಿ, ಡಿಸೆಂಬರ್ 03: ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಅವರಿಗೆ ನೀಡಿ ಗೌರವಿಸಲಾದ ಪದ್ಮಭೂಷಣ ಪ್ರಶಸ್ತಿಯನ್ನು ಯುಎಸ್‌ನಲ್ಲಿರುವ ಭಾರತದ ರಾಯಭಾರಿ ಹಸ್ತಾಂತರಿಸಿದರು. ಅಮೆರಿಕದಲ್ಲಿರುವ ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು ಶುಕ್ರವಾರ ಈ ಪ್ರಶಸ್ತಿಯನ್ನು ಪಿಚೈ ಅವರಿಗೆ ನೀಡಿದರು.

ವ್ಯಾಪಾರ ಮತ್ತು ಕೈಗಾರಿಕೆ ವಿಭಾಗದ ಅಡಿಯಲ್ಲಿ ಗಣರಾಜ್ಯೋತ್ಸವದ ಮುನ್ನಾದಿನದಂದು ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣವನ್ನು ಸುಂದರ್ ಪಿಚೈ ಅವರಿಗೆ ಘೋಷಿಸಲಾಯಿತು.

ಗೂಗಲ್‌ ಮಾತೃಸಂಸ್ಥೆ ಆಲ್ಫಾಬೆಟ್‌ನಿಂದ 10,000 ಉದ್ಯೋಗಿ ವಜಾಕ್ಕೆ ಚಿಂತನೆಗೂಗಲ್‌ ಮಾತೃಸಂಸ್ಥೆ ಆಲ್ಫಾಬೆಟ್‌ನಿಂದ 10,000 ಉದ್ಯೋಗಿ ವಜಾಕ್ಕೆ ಚಿಂತನೆ

ಪಿಚೈ ಅವರಿಗೆ ಪ್ರತಿಷ್ಠಿತ ಪ್ರಶಸ್ತಿಯನ್ನು ಹಸ್ತಾಂತರಿಸಿದ ತರಂಜಿತ್ ಸಿಂಗ್ ಸಂಧು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ, "ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಅವರಿಗೆ ಪದ್ಮಭೂಷಣವನ್ನು ಹಸ್ತಾಂತರಿಸಲು ಸಂತೋಷವಾಗಿದೆ. ಮಧುರೈನಿಂದ ಮೌಂಟೇನ್ ವ್ಯೂಗೆ ಸುಂದರ್ ಅವರ ಸ್ಪೂರ್ತಿದಾಯಕ ಪ್ರಯಾಣ, ಆರ್ಥಿಕ ಮತ್ತು ತಾಂತ್ರಿಕ ಸಂಬಂಧಗಳನ್ನು ಬಲಪಡಿಸುವುದು, ಜಾಗತಿಕ ನಾವೀನ್ಯತೆಗೆ ಭಾರತೀಯ ಪ್ರತಿಭೆಗಳ ಕೊಡುಗೆಯನ್ನು ಪುನರುಚ್ಚರಿಸುತ್ತದೆ," ಎಂದು ಸಂಧು ಹೇಳಿದರು.

Google CEO Sundar Pichai reaction after get Honoured With Padma Bhushan

ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ:

ಈ ಸಮಾರಂಭದಲ್ಲಿ ಸ್ಯಾನ್ ಫ್ರಾನ್ಸಿಸ್ಕೋದ ಭಾರತದ ಕಾನ್ಸುಲ್ ಜನರಲ್ ಟಿ ವಿ ನಾಗೇಂದ್ರ ಪ್ರಸಾದ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಇದೇ ಕಾರ್ಯಕ್ರಮದಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಅವರ ಕುಟುಂಬದವರೂ ಇದ್ದರು.

ಸುಂದರ್ ಪಿಚೈ ಹೇಳಿದ್ದೇನು?:

"ಈ ಅಗಾಧವಾದ ಗೌರವಕ್ಕಾಗಿ ನಾನು ಭಾರತ ಸರ್ಕಾರ ಮತ್ತು ಭಾರತದ ಜನರಿಗೆ ತುಂಬಾ ಕೃತಜ್ಞನಾಗಿದ್ದೇನೆ. ನನ್ನನ್ನು ರೂಪಿಸಿದ ದೇಶವು ಈ ರೀತಿಯಾಗಿ ಗೌರವಿಸಲ್ಪಟ್ಟಿರುವುದು ನಂಬಲಾಗದಷ್ಟು ಅರ್ಥಪೂರ್ಣವಾಗಿದೆ," ಎಂದು 50 ವರ್ಷದ ಶ್ರೀ ಪಿಚೈ ತರಂಜಿತ್ ಸಿಂಗ್ ಹೇಳಿದರು.

Google CEO Sundar Pichai reaction after get Honoured With Padma Bhushan

"ಭಾರತ ನನ್ನ ಒಂದು ಭಾಗ. ನಾನು ಎಲ್ಲಿಗೆ ಹೋದರೂ ಅದನ್ನು ನನ್ನೊಂದಿಗೆ ತೆಗೆದುಕೊಂಡು ಹೋಗುತ್ತೇನೆ. ಈ ಸುಂದರವಾದ ಪ್ರಶಸ್ತಿಗಿಂತ ಭಿನ್ನವಾಗಿ ನಾನು ಎಲ್ಲೋ ಸುರಕ್ಷಿತವಾಗಿ ಇಡುತ್ತೇನೆ," ಎಂದರು.

"ನನ್ನ ಆಸಕ್ತಿಗಳನ್ನು ಅನ್ವೇಷಿಸಲು ನನಗೆ ಅವಕಾಶಗಳಿವೆ ಎಂದು ಖಚಿತಪಡಿಸಿಕೊಳ್ಳಲು ಬಹಳಷ್ಟು ತ್ಯಾಗ ಮಾಡಿದ ಪೋಷಕರಿಗೆ ಪಿಚೈ ಧನ್ಯವಾದ ತಿಳಿಸಿದರು. ಕಲಿಕೆ ಮತ್ತು ಜ್ಞಾನವನ್ನು ಪಡೆಯಲು ಅವಕಾಶ ನೀಡಿದ ಕುಟುಂಬದಲ್ಲಿ ಬೆಳೆಯಲು ನಾನು ಬಹಳಷ್ಟು ಪುಣ್ಯಶಾಲಿಯಾಗಿದ್ದೇನೆ," ಎಂದು ಶ್ರೀ ಪಿಚೈ ಹೇಳಿದರು.

English summary
Google CEO Sundar Pichai reaction after get Honoured With Padma Bhushan. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X