ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಯ್ನೆಲಕ್ಕೆ ಮರಳಿದ ಅಭಿನಂದನ್ ಮೊದಲ ಮಾತು

|
Google Oneindia Kannada News

Recommended Video

Surgical Strike 2: ತಾಯ್ನೆಲಕ್ಕೆ ಮರಳಿದ ಅಭಿನಂದನ್ ಮೊದಲ ಮಾತು

ವಾಘಾ, ಮಾರ್ಚ್ 02: 'ತಾಯ್ನೆಲಕ್ಕೆ ವಾಪಸ್ಸಾಗಿದ್ದು ಸಂತಸ ತಂದಿದೆ' ಇದು ಪಾಕಿಸ್ತಾನದಿಂದ ಹಸ್ತಾಂತರಗೊಂಡ ಭಾರತೀಯ ಪೈಲಟ್ ಅಭಿನಂದನ್ ವರ್ದಮಾನ್ ಅವರ ಮೊದಲ ಮಾತು.

ಭಾರತದ ಮಣ್ಣಿನಲ್ಲಿ ಕಾಲಿಡುತ್ತಿದ್ದಂತೆಯೇ ಅವರ ಮನದಲ್ಲಿ ಮೂಡಿದ ಸಾರ್ಥಕ ಭಾವವನ್ನು ಮುಖದಲ್ಲಿ ತೋರ್ಪಡಿಸದೆ, ಸೈನಿಕನೊಬ್ಬನಲ್ಲಿರುವ ಸಹಜ ಗಂಭೀರ ಭಾವದಲ್ಲೇ ಅವರಿದ್ದರು.

ತಾಯ್ನಾಡಿಗೆ ಅಭಿನಂದನ್: ಬೆಳಿಗ್ಗೆಯಿಂದ ನಡೆದದ್ದೇನು? ಪೂರ್ಣ ವಿವರ ಇಲ್ಲಿದೆತಾಯ್ನಾಡಿಗೆ ಅಭಿನಂದನ್: ಬೆಳಿಗ್ಗೆಯಿಂದ ನಡೆದದ್ದೇನು? ಪೂರ್ಣ ವಿವರ ಇಲ್ಲಿದೆ

ಶಿಷ್ಟಾಚಾರದ ಪ್ರಕಾರ ಅವರು ಮಾಧ್ಯಮಗಳಿಗಾಗಲೀ, ಸಾರ್ವಜನಿಕರಿಗಾಗಲೀ ಪಾಕಿಸ್ತಾನದಲ್ಲಿ ಕಳೆದ 48 ಗಂಟೆಗಳ ಅನುಭವವನ್ನು ಹೇಳುವ ಹಾಗಿಲ್ಲದ ಕಾರಣ ಅವರು ಬೇರೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

Good to be back in my country: Abhinandans first word after return

ಮಾರ್ಚ್ 1, ಶುಕ್ರವಾರ ಬೆಳಿಗ್ಗೆಯೇ ಅಭಿನಂದನ್ ಅವರನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದ ಪಾಕಿಸ್ತಾನ, ಅವರನ್ನು ಹಸ್ತಾಂತರ ಮಾಡಿದ್ದು, ರಾತ್ರಿ 9:25ಕ್ಕೆ. ವಾಘಾ ಗಡಿಗೆ ಅವರನ್ನು ಬೇಗನೇ ಕರೆತಂದಿದ್ದರೂ, ಬೇಕೆಂದೇ ಪಾಕಿಸ್ತಾನ ವಿಳಂಬ ಮಾಡಿತ್ತು ಎನ್ನಲಾಗಿದೆ.

ಅಭಿನಂದನ್ ಹಸ್ತಾಂತರ ವಿಳಂಬ ಆಗುತ್ತಿರುವುದೇಕೆ?ಅಭಿನಂದನ್ ಹಸ್ತಾಂತರ ವಿಳಂಬ ಆಗುತ್ತಿರುವುದೇಕೆ?

ಮಿಗ್ 21 ಬೈಸನ್ ಯುದ್ಧ ವಿಮಾನದ ಪೈಲಟ್ ಅಭಿನಂದನ್ ವರ್ಧಮಾನ್ ಅವರು ಫೆಬ್ರವರಿ 27ರಂದು ಪಾಕ್ ಸೇನೆಯ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಲ್ಲದೆ, ಇತರ ವಿಮಾನಗಳನ್ನು ಹಿಮ್ಮೆಟ್ಟಿಸುವ ಸಮಯದಲ್ಲಿ ಪಾಕ್ ಸೇನೆಯ ವಶಕ್ಕೆ ಸಿಕ್ಕಿದ್ದರು.

English summary
'Good to be back in my country,' Captured Indian Air Force (IAF) pilot Abhinandan Varthaman said after returned to India late on Friday after nearly 60 hours in Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X