ಮುಂಗಾರು ಮುನ್ಸೂಚನೆ, ಹವಾಮಾನ ಇಲಾಖೆಯಿಂದ ಸಿಹಿ ಸುದ್ದಿ

Subscribe to Oneindia Kannada

ನವದೆಹಲಿ, ಏಪ್ರಿಲ್ 19: ಬಿಸಿಲಿನಿಂದ ಬೆಂದು ಬಸವಳಿದ ಜನತೆಗೆ ಹವಾಮಾನ ಇಲಾಖೆ ಸಿಹಿ ಸುದ್ದಿಯೊಂದನ್ನು ನೀಡಿದೆ.

ಈ ವರ್ಷ ನೈರುತ್ಯ ಮುಂಗಾರು ಸಾಮಾನ್ಯವಾಗಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದ್ದು ರೈತರಿಗಿದು ಸಂಭ್ರಮದ ವಾರ್ತೆಯಾಗಿದೆ. ಇದು ಸಾಮಾನ್ಯ ಜನತೆಗೂ ಸಂತಸದ ಸುದ್ದಿಯೇ. ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನ, ಬೆಲೆ ಇಳಿಕೆ ನಿರೀಕ್ಷಿಸಬಹುದು. ಇನ್ನು ಜಿಡಿಪಿಯ ಕನಸು ಕಾಣುವ ಸರಕಾರವೂ ಈಗ ಮತ್ತಷ್ಟು ಆತ್ಮ ವಿಶ್ವಾಸದಿಂದ ಮುನ್ನುಗ್ಗಬಹುದು.

Good news, Normal Monsoon forecast from Meteorological department

ಮುಂಗಾರು ಮಳೆ ಬೀಳುವ ಜೂನ್ ಮತ್ತು ಸೆಪ್ಟೆಂಬರ್ ನಡುವೆ ಮಳೆ ಸಾಮಾನ್ಯವಾಗಿರಲಿದೆ. ಅಷ್ಟೆ ಅಲ್ಲದೆ ಸಕಾಲಿಕವೂ ಆಗಿರಲಿದೆ. ಇನ್ನು ದೇಶಾದ್ಯಂತ ಮಳೆ ಒಂದೇ ರೀತಿಯಲ್ಲಿ ಸುರಿಯಲಿದೆ. ಒಟ್ಟು ಸರಾಸರಿ ಶೇಕಡಾ 96ರಷ್ಟು ಮುಂಗಾರು ಮಳೆಯಾಗಲಿದೆ. ಇದರಲ್ಲಿ ಶೇಕಡಾ 5 ರಷ್ಟು ವ್ಯತ್ಯಾಸಗಳಾಗಬಹುದು ಎಂದು ಹವಾಮಾನ ಇಲಾಖೆಯ ಮಹಾನಿರ್ದೇಶಕ ಕೆ.ಜೆ ರಮೇಶ್ ಮಾಹಿತಿ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Meteorological Department projected that monsoon is likely to be just normal at 96 per cent in this year. Which is good news for farmers as well as all other people of the country.
Please Wait while comments are loading...