Tirumala: ದೆಹಲಿ-ತಿರುಪತಿ ನಡುವೆ ಇಂಡಿಗೋ ವಿಮಾನ: ತಿರುಮಲ ಡಿಸೆಂಬರ್ ದರ್ಶನ ಟಿಕೆಟ್ ಬಿಡುಗಡೆ
ಪ್ರಸಿದ್ಧ ಆಧ್ಯಾತ್ಮಿಕ ಸ್ಥಳವಾದ ತಿರುಪತಿಗೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಡಿಸೆಂಬರ್ ತಿಂಗಳಲ್ಲಿ ಆಂಧ್ರಪ್ರದೇಶದ ತಿರುಮಲಕ್ಕೆ ಭೇಟಿ ನೀಡಲು ಯೋಜಿಸುವವರಿಗೆ ಸಿಹಿಸುದ್ದಿಯೊಂದನ್ನು ಟಿಟಿಡಿ ನೀಡಿದೆ. ವೆಂಕಟೇಶ್ವರನ ದರ್ಶನ ಪಡೆಯಲು, ಡಿಸೆಂಬರ್‌ನ ಟಿಕೆಟ್‌ಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ತಿರುಮಲಕ್ಕೆ ಭೇಟಿ ನೀಡಲು ಡಿಸೆಂಬರ್‌ನಲ್ಲಿ ಉತ್ತಮ ಸಮಯವಾಗಿದ್ದು ನೀವೇನಾದ್ರು ಈ ತಿಂಗಳಲ್ಲಿ ತಿರುಮಲಕ್ಕೆ ಭೇಟಿ ನೀಡಲು ಯೋಜಿಸಿದ್ದರೆ ಟಿಕೆಟ್‌ಗಳು ಲಭ್ಯವಾದ ತಕ್ಷಣ ಬುಕ್ ಮಾಡಿಬಿಡಿ. ತಿರುಮಲದಲ್ಲಿ ಡಿಸೆಂಬರ್ ತಿಂಗಳು ವೆಂಕಟೇಶ್ವರನ ದರ್ಶನಕ್ಕಾಗಿ ಟಿಕೆಟ್‌ಗಳು ಸೆಪ್ಟೆಂಬರ್ 19 ರಂದು ಬಿಡುಗಡೆಯಾಗಲಿವೆ. ಈ ಟಿಕೆಟ್‌ಗಳು ಬಿಡುಗಡೆಯಾಗುತ್ತಿದ್ದಂತೆ ಭಕ್ತರು ಕಾಯ್ದಿರಿಸಬಹುದು.

ದೆಹಲಿ ಮತ್ತು ತಿರುಪತಿ ನಡುವೆ ಇಂಡಿಗೋ ವಿಮಾನ
ಇಂಡಿಗೋ ವಿಮಾನ ದೆಹಲಿ ಮತ್ತು ತಿರುಪತಿಯನ್ನು ಸಂಪರ್ಕಿಸುವ ಹೊಸ ಮಾರ್ಗದಲ್ಲಿ ಪ್ರಯಾಣ ಪ್ರಾರಂಭಿಸಲಿದೆ. ಅಕ್ಟೋಬರ್ 5 ರಿಂದ ಈ ವಿಮಾನ ಸಂಚಾರ ಮಾಡಲಿದೆ. ದೆಹಲಿಯಿಂದ ತಿರುಪತಿಗೆ ತೆರಳುವ ಯಾತ್ರಾರ್ಥಿಗಳಿಗೆ ಇದು ಸಹಾಯವಾಗಲಿದೆ ಎಂದು ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು, ಹೈದರಾಬಾದ್, ಕೊಲ್ಲಾಪುರ, ಮಧುರೈ ಮತ್ತು ಇತರ ಐದು ನಗರಗಳ ನಂತರ ಇಂಡಿಗೋ ನೇರವಾಗಿ ಹತ್ತನೇ ಹಾಗೂ ಕೊನೆಯ ನಿಲ್ದಾಣ ತಿರುಪತಿಗೆ ಪ್ರಯಾಣಿಸಲಿದೆ. ಪ್ರಮುಖ ಯಾತ್ರಾ ಸ್ಥಳಗಳ ನಡುವೆ ಸಂಪರ್ಕವನ್ನು ಹೆಚ್ಚಿಸಲು ಈ ಹೊಸ ಮಾರ್ಗದಲ್ಲಿ ವಿಮಾನ ಸಂಚರಿಸಲಿದೆ.
ಧಾರ್ಮಿಕ ಪ್ರಯಾಣಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ದೆಹಲಿ-ತಿರುಪತಿ ಮಾರ್ಗದಲ್ಲಿ ಇಂಡಿಗೋ ವಿಮಾನ ಸೇವೆಯನ್ನು ಒದಗಿಸಲು ವಿಮಾನಯಾನ ಸಂಸ್ಥೆ ನಿರ್ಧರಿಸಿದೆ. ಅಲ್ಲದೆ ವಿಮಾನಯಾನ ಸಂಸ್ಥೆ ದೆಹಲಿ-ಐಜ್ವಾಲ್ ಮಾರ್ಗದಲ್ಲಿ ತನ್ನ ಸೇವೆಯನ್ನು ದ್ವಿಗುಣಗೊಳಿಸುತ್ತಿದೆ. 5 ರಿಂದ 10 ಸಾಪ್ತಾಹಿಕ ವಿಮಾನಗಳನ್ನು ದೆಹಲಿ-ಐಜ್ವಾಲ್ ಮಾರ್ಗದಲ್ಲಿ ಮತ್ತು ದೆಹಲಿ-ದಿಮಾಪುರ್ ಮಾರ್ಗದಲ್ಲಿ 5 ರಿಂದ 7 ಸಾಪ್ತಾಹಿಕ ವಿಮಾನಗಳು ಈಶಾನ್ಯಕ್ಕೆ ಪ್ರಯಾಣಿಸುವ ಗ್ರಾಹಕರಿಗೆ ಹೆಚ್ಚಿನ ಅನುಕೂಲತೆಯನ್ನು ಒದಗಿಸಲಿವೆ.

ಈ ಹೊಸ ಮಾರ್ಗವು ತಡೆರಹಿತ ಸಂಪರ್ಕವನ್ನು ಸುಗಮಗೊಳಿಸುತ್ತದೆ. ಇದು ಗ್ರಾಹಕರು ನಗರದ ಐತಿಹಾಸಿಕ ದೇವಾಲಯಗಳಿಗೆ ಹೆಚ್ಚಿನ ಭೇಟಿ ನೀಡಲು ಅನುವು ಮಾಡಿಕೊಡುತ್ತದೆ. ಹೆಚ್ಚುತ್ತಿರುವ ಪ್ರಯಾಣದ ಆಯ್ಕೆಗಳಿಗಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ನಾವು ದೆಹಲಿ-ಐಜ್ವಾಲ್ ಮತ್ತು ದೆಹಲಿ-ದಿಮಾಪುರ್ ಮಾರ್ಗಗಳಲ್ಲಿ ವಿಮಾನಗಳ ಸೇವೆಯನ್ನು ಹೆಚ್ಚಿಸುತ್ತಿದ್ದೇವೆ ಎಂದು ಇಂಡಿಗೋದ ಜಾಗತಿಕ ಮಾರಾಟದ ಮುಖ್ಯಸ್ಥ ವಿನಯ್ ಮಲ್ಹೋತ್ರಾ ಹೇಳಿದರು.
ಮೂರು ದಿನಗಳ ಕಾಲ ಪವಿತ್ರೋತ್ಸವ
ತ್ರಿಚಾನೂರು ಶ್ರೀ ಪದ್ಮಾವತಿ ಅಮ್ಮನವರ ದೇವಸ್ಥಾನದಲ್ಲಿ ಮೂರು ದಿನಗಳ ಕಾಲ ಅಂದರೆ ಸೆ.16ರಿಂದ ಆರಂಭವಾದ ಪವಿತ್ರೋತ್ಸವ ಸೆಪ್ಟೆಂಬರ್ 18ರವರೆಗೆ ನಡೆಯಲಿದೆ.
ಪ್ರತಿ ವರ್ಷ ಪವಿತ್ರೋತ್ಸವವನ್ನು ಮೂರು ದಿನಗಳ ಕಾಲ ಆಚರಿಸಲಾಗುತ್ತದೆ. ಹೀಗೆ ಮಾಡುವುದರಿಂದ ದೇವಾಲಯದ ಪಾವಿತ್ರ್ಯತೆ ಕಾಪಾಡಬಹುದು ಎಂಬ ನಂಬಿಕೆ ಇದೆ. ಯಾತ್ರಿಕರು ಅಥವಾ ಸಿಬ್ಬಂದಿಯಿಂದ ತಿಳಿಯದೆ ಮಾಡಿದ ತಪ್ಪುಗಳನ್ನು ಸರಿಪಡಿಸಲು ಈ ಉತ್ಸವವನ್ನು ನಡೆಸಲಾಗುತ್ತದೆ. ಈ ಸಮಯದಲ್ಲಿ ಶುದ್ಧೀಕರಣ ಆಚರಣೆಗಳನ್ನು ಮಾಡಲಾಗುತ್ತದೆ.
ಸೆ.16ರಂದು ಪವಿತ್ರ ಪ್ರತಿಷ್ಠಾ ಸಮಾರಂಭ ಪೂರ್ಣಗೊಂಡಿದೆ. ಸೆ.17ರಂದು ಪವಿತ್ರ ಸಮರ್ಪಣ, ಸೆ.18ರಂದು ಪ್ರುಣಾಹುತಿ ನಡೆಯಲಿದ್ದು, ಭಕ್ತರು ಪವಿತ್ರೋತ್ಸವ ಆರ್ಜಿತ ಸೇವೆಯಲ್ಲಿ ಪಾಲ್ಗೊಳ್ಳಲು ದಿನಕ್ಕೆ 750 ರೂಪಾಯಿ ಟಿಕೆಟ್ ಪಡೆಯಬೇಕಾಗುತ್ತದೆ. ಇವರಿಗೆ ಎರಡು ಲಡ್ಡುಗಳು ಮತ್ತು ಎರಡು ವಡೆಗಳನ್ನು ಪ್ರಸಾದವಾಗಿ ನೀಡಲಾಗುತ್ತದೆ.
ಸೆಪ್ಟೆಂಬರ್ 17 ರಂದು ಟಿಟಿಡಿ ತಿರುಮಲದಲ್ಲಿ ಅನಂತ ಪದ್ಮನಾಭ ವ್ರತವನ್ನು ಆಚರಿಸಲಾಗುತ್ತದೆ. ಬೆಳಗ್ಗೆ 6 ಗಂಟೆಗೆ ವೆಂಕಟೇಶ್ವರ ಸುದರ್ಶನ ಚಕ್ರತಾಳ್ವಾರ್ ಅವರನ್ನು ದೇವಸ್ಥಾನದ ಆವರಣದಿಂದ ಶ್ರೀ ಭೂವರಾಹ ಸ್ವಾಮಿ ದೇವಸ್ಥಾನದ ಬಳಿ ಇರುವ ಸ್ವಾಮಿ ಪುಷ್ಕರಿಣಿಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ. ಸ್ನಾನದ ನಂತರ ಸುದರ್ಶನ ಚಕ್ರತಾಳ್ವಾರ್ ಅನ್ನು ದೇವಾಲಯಕ್ಕೆ ಹಿಂತಿರುಗಿಸಲಾಗುತ್ತದೆ. ಅನಂತ ಪದ್ಮನಾಭ ವ್ರತವನ್ನು 108 ಶ್ರೀ ವೈಷ್ಣವ ದಿವ್ಯ ದೇಶಗಳಲ್ಲಿ ವಾರ್ಷಿಕವಾಗಿ ಆಚರಿಸಲಾಗುತ್ತದೆ.












Click it and Unblock the Notifications