ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್: ನವೆಂಬರ್ ತಿಂಗಳ ಪ್ರತ್ಯೇಕ ದರ್ಶನ ಟಿಕೆಟ್ ಬಿಡಗಡೆ
ಎಣಿಕೆಗೂ ಮೀರಿದ ಭಕ್ತರು ಭೇಟಿ ನೀಡುವ ಏಕೈಕ ದೇವಾಲಯ ತಿರುಪತಿ ಎನ್ನುವ ಹೆಸರು ಕೇಳುತ್ತಿದ್ದಂತೆ 7 ಬೆಟ್ಟಗಳ ಒಡೆಯ ತಿಮ್ಮಪ್ಪನೇ ಕಣ್ಣ ಮುಂದೆ ಬರುತ್ತಾನೆ. ವಿಶ್ವದ ಅತಿ ಸಿರಿವಂತ ಹಿಂದೂ ದೇವಾಲಯ ಎಂಬ ಖ್ಯಾತಿಯ ತಿರುಪತಿ ತಿಮ್ಮಪ್ಪ ಅದ್ಭುತ ದೈವಿಕ ಶಕ್ತಿಯನ್ನು ಹೊಂದಿದ್ದಾನೆ. ಈ ತಿಮ್ಮಪ್ಪನ ದರ್ಶನ ಪಡೆಯಲು ನವೆಂಬರ್ ತಿಂಗಳ ಪ್ರತ್ಯೇಕ ದರ್ಶನ ಟಿಕೆಟ್ ಬಿಡುಗಡೆ ಮಾಡಲಾಗಿದೆ.
ಬೇಡಿದ್ದನ್ನು ನೀಡುವ ತಿಮ್ಮಪ್ಪನ ದರ್ಶನಕ್ಕೆ ನವೆಂಬರ್ ತಿಂಗಳ 300 ರೂಪಾಯಿ ಪ್ರತ್ಯೇಕ ಪ್ರವೇಶ ದರ್ಶನ ಟಿಕೆಟ್‌ಗಳನ್ನು ಗುರುವಾರ ಬೆಳಿಗ್ಗೆ 10ಗಂಟೆಗೆ ಟಿಟಿಡಿ ಬಿಡುಗಡೆ ಮಾಡಿದೆ. ನವೆಂಬರ್ ತಿಂಗಳಲ್ಲಿ ತಿಮ್ಮನ್ನ ದರ್ಶನಕ್ಕೆ ತೆರಳಲು ಬಯಸುವವರಿಗೆ ವಸತಿ ರೂಮ್ ಕೋಟಾ ಬಿಡುಗಡೆ ಮಾಡಲಾಗಿದೆ. ದರ್ಶನಕ್ಕೆ ಹೋಗಲು ಬಯಸುವವರು ಅಧಿಕೃತ ವೆಬ್‌ಸೈಟ್fಗೆ ತೆರಳಿ ಟಿಕೆಟ್ ಬುಕ್ ಮಾಡಿಕೊಳ್ಳಬಹುದು.

ವಿಶೇಷ ದರ್ಶನ ಟಿಕೆಟ್ ಪಡೆದುಕೊಂಡರೆ ನಾಲ್ಕು ಗಂಟೆ ಸಮಯ ದರ್ಶನಕ್ಕೆ ತೆಗೆದುಕೊಳ್ಳುತ್ತದೆ. ಬುಧವಾರ 71,122 ಮಂದಿ ಶ್ರೀಗಳ ದರ್ಶನ ಪಡೆದಿದ್ದಾರೆ. 29,121 ಭಕ್ತರು ಮುಡಿ ಅರ್ಪಣೆ ಮಾಡಿದ್ದಾರೆ. ಅಲ್ಲದೇ, ಶ್ರೀವಾರಿ ಹುಂಡಿಯಲ್ಲಿ 3,76ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ.
ತಿರುಪತಿ ದೇವಸ್ಥಾನದಲ್ಲಿ ಹಗಲಿನಲ್ಲಿ ಭಗವಾನ್ ವೆಂಕಟೇಶ್ವರನನ್ನು ಮೂರು ವಿಭಿನ್ನ ರೂಪದಲ್ಲಿ ದರ್ಶನ ಮಾಡಬಹುದು. ಮೊದಲನೆಯದನ್ನು ವಿಶ್ವರೂಪ ಎಂದು ಕರೆಯಲಾಗುತ್ತದೆ, ಅದರಲ್ಲಿ ಬೆಳಿಗ್ಗೆ ದರ್ಶನವನ್ನು ಮಾಡಲಾಗುತ್ತದೆ. ಮಧ್ಯಾಹ್ನ ಎರಡನೇ ರೂಪದ ದರ್ಶನ ಹಾಗೂ ರಾತ್ರಿ ಮೂರನೇ ರೂಪದ ದರ್ಶನ. ಇಲ್ಲಿ ದೇವರ ಇತರ ಹಲವು ರೂಪಗಳಲ್ಲಿ ದರ್ಶನವನ್ನು ಮಾಡಲಾಗುತ್ತದೆ, ಇದಕ್ಕಾಗಿ ನೀವು ವಿವಿಧ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ಶುಕ್ರವಾರ ಬೆಳಿಗ್ಗೆ ಅಭಿಷೇಕ ಸಮಯದಲ್ಲಿ ದೇವರ ಪೂರ್ಣ ರೂಪದ ದರ್ಶನವನ್ನು ಮಾಡಲಾಗುತ್ತದೆ. ಹೆಚ್ಚಾಗಿ ಜನರು ತಿರುಮಲನ ಪೂರ್ಣ ರೂಪದ ದರ್ಶನವನ್ನು ಪಡೆಯಲು ಬಯಸುತ್ತಾರೆ.
ತಿರುಪತಿ ತಿರುಮಲದಲ್ಲಿ ನಾವು ತಿಮ್ಮಪ್ಪನಿಗೆ ಅನೇಕ ಸೇವೆಗಳನ್ನು ಮಾಡಿಸಬಹುದು. ತಿರುಮಲ ದೇವಸ್ಥಾನದ ಸೇವೆಗಳಲ್ಲಿ ಭಾಗವಹಿಸಲು ಬಯಸುವ ಭಕ್ತರು ಟಿ.ಟಿ.ಡಿಯ ಅರ್ಜಿತಂ ಅಧಿಕಾರಿಯನ್ನು ಸಂಪರ್ಕಿಸುವ ಮೂಲಕ ಮೀಸಲಾತಿಯನ್ನು ಪಡೆದುಕೊಳ್ಳಬಹುದಾಗಿದೆ. ದೇವಾಲಯದಲ್ಲಿ ಯಾವುದೆ ವಿಶೇಷ ಕಾರ್ಯಗಳು ಇಲ್ಲದಿದ್ದಾಗ ಸೇವೆಗಳನ್ನು ಅದೇ ದಿನ ನಿಗದಿಪಡಿಸಬಹುದು. ಇನ್ನು ಶುಭ ದಿನಗಳಲ್ಲಿ ಮತ್ತು ಶುಕ್ರವಾರದಂದು ಸೇವೆಯನ್ನು ಮಾಡಲು ಬಯಸುವ ಭಕ್ತರು 3 ರಿಂದ 4 ತಿಂಗಳ ಮುಂಚೆಯೇ ಸೇವೆಯನ್ನು ಕಾಯ್ದಿರಿಸುವುದು ಉತ್ತಮವೆಂದು ಹೇಳಲಾಗುತ್ತದೆ.

ತಿರುಪತಿ ತಿರುಮಲದಲ್ಲಿ ಯೋಜಿಸಿರುವ ಈ ಹೊಸ ನಿಯಮವು ಭಕ್ತರಿಗೆ ತಿಮ್ಮಪ್ಪನ ದರ್ಶನವನ್ನು ಸುಲಭವಾಗಿ ಮಾಡಲು ಸಹಕಾರಿಯಾಗಿದೆ. ಇದು ಭಕ್ತರ ಸಮಯವನ್ನು ಉಳಿಸುವುದು ಮಾತ್ರವಲ್ಲ, ದೇವರಿಗೆ ಸೇವೆಯನ್ನು ಮಾಡುವುದಕ್ಕೂ ಸಹಕಾರಿಯಾಗಿದೆ.
ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ (ಟಿಟಿಡಿ) ದೇಶಾದ್ಯಂತ ಹೊಂದಿರುವ 960 ಸ್ವತ್ತುಗಳ ಮೌಲ್ಯ 85,705 ಕೋಟಿ ರೂ. ಆಗಿದೆ. ಆದರೆ ಈ ಸ್ವತ್ತುಗಳ ಇಂದಿನ ಮಾರುಕಟ್ಟೆ ಮೌಲ್ಯವು ಒಂದೂವರೆ ಪಟ್ಟು ಹೆಚ್ಚಿದ್ದು, ಸುಮಾರು 2 ಲಕ್ಷ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇಷ್ಟೊಂದು ಸಂಪತ್ತು ಹೊಂದಿದ ದೇಗುಲ ಜಗತ್ತಿನಲ್ಲೇ ಬೇರೆಲ್ಲೂ ಇಲ್ಲ.
ನಿತ್ಯವೂ ತಿಮ್ಮಪ್ಪನಿಗೆ ಕಾಣಿಕೆ ರೂಪದಲ್ಲಿ ಭಕ್ತರು ನಗದು, ಒಡವೆಗಳನ್ನು ನೀಡುವುದು ಸಾಮಾನ್ಯ. ಹಬ್ಬ ಹರಿದಿನಗಳಲ್ಲಿ ಹಾಗೂ ಬ್ರಹ್ಮೋತ್ಸವದಲ್ಲಿ ದೇಣಿಗೆ ಪ್ರಮಾಣ ಹೆಚ್ಚುತ್ತದೆ.












Click it and Unblock the Notifications