Tirupati Tirumala: ತಿರುಪತಿ ತಿಮ್ಮಪ್ಪನ ಭಕ್ತಾಧಿಗಳಿಗೆ ಬಿಗ್ ಗುಡ್‌ನ್ಯೂಸ್: ಇನ್ಮುಂದೆ ದರ್ಶನ ಅವಧಿ ಎಷ್ಟು ಗೊತ್ತಾ!
ತಿರುಪತಿ ತಿಮ್ಮಪ್ಪನ ಭಕ್ತಾಧಿಗಳಿಗೆ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ ಸಿಹಿಸುದ್ದಿಯೊಂದನ್ನು ಕೊಟ್ಟಿದೆ. ಇತ್ತೀಚಿನ ದಿನಗಳಲ್ಲಿ ಆಂಧ್ರಪ್ರದೇಶದ ತಿರುಪತಿ ತಿರುಮಲ ದೇವಸ್ಥಾನ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗಿತ್ತು. ಆದರೆ, ಈ ವಿವಾದಗಳ ನಂತರ ದೇವಸ್ಥಾನ ಮಂಡಳಿಯು ಹಲವು ಸುಧಾರಣೆಯ ಕ್ರಮಗಳನ್ನು ತೆಗೆದುಕೊಂಡಿದ್ದು, ಇದೀಗ ಭಕ್ತಾಧಿಗಳಿಗೆ ಗುಡ್‌ನ್ಯೂಸ್ ಕೊಡಲಾಗಿದೆ. ಇನ್ಮುಂದೆ ನೀವು ಒಂದು ಸಿನಿಮಾ ನೀಡುವ ಅವಧಿಯ ಒಳಗಾಗಿ ಭಕ್ತರು ತಿಮ್ಮಪ್ಪನ ದರ್ಶನ ಪಡೆಯಬಹುದಾಗಿದೆ. ಮೂರು ಗಂಟೆಯ ಒಳಗೆ ಎಲ್ಲಾ ಭಕ್ತರಿಗೂ ದರ್ಶನ ವ್ಯವಸ್ಥೆ ಕಲ್ಪಿಸುವ ಕ್ರಮವನ್ನು ಟಿಟಿಡಿ ತೆಗೆದುಕೊಂಡಿದೆ.
ತಿರುಪತಿ ತಿರುಮಲ ದೇವಸ್ಥಾನಕ್ಕೆ ನಿತ್ಯವೂ ಲಕ್ಷಾಂತರ ಜನ ಭಕ್ತಾಧಿಗಳು ಆಗಮಿಸುತ್ತಾರೆ. ಈ ಭಕ್ತಾಧಿಗಳನ್ನು ನಿರ್ವಹಿಸುವುದು ಹಾಗೂ ಅವರೆಲ್ಲರಿಗೂ ದೇವರ ದರ್ಶನವನ್ನು ಶೀಘ್ರ ಆಗುವಂತೆ ಟಿಟಿಡಿ ನೋಡಿಕೊಳ್ಳುತ್ತಿದೆ ಆದರೆ, ಇದರ ನಡುವೆಯೂ ಕೆಲವು ಗೊಂದಲಗಳು ಮುಂದುವರಿದಿದೆ. ಹೀಗಾಗಿ, ಈ ಸೇವೆಯನ್ನು ಇನ್ನಷ್ಟು ಉತ್ತಮಪಡಿಸುವ ನಿಟ್ಟಿನಲ್ಲಿ ಟಿಟಿಡಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದೆ. ಇದರಿಂದಾಗಿ ಇನ್ಮುಂದೆ ಕೆಲವೇ ಗಂಟೆಗಳಲ್ಲಿ ಅಂದರೆ 2 ಗಂಟೆಯಿಂದ 3 ಗಂಟೆಯ ಅವಧಿಯಲ್ಲಿ ಭಕ್ತಾಧಿಗಳಿಗೆ ದರ್ಶನ ಸಿಗಲಿದೆ.

ಸಾಮಾನ್ಯ ಭಕ್ತರು ಸುಲಭವಾಗಿ ದೇವರ ದರ್ಶನ ಪಡೆದುಕೊಳ್ಳುವಂತೆ ಮಾಡಲು ಎಐ ತಂತ್ರಜ್ಞಾನ ಹಾಗೂ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಟಿಟಿಡಿ ನಿರ್ಧರಿಸಿದೆ. ಇದರಿಂದ ಭಕ್ತಾಧಿಗಳು ಕಂಪಾರ್ಟ್‌ಮೆಂಟ್ (ಭಕ್ತಾಧಿಗಳು ದೇವರ ದರ್ಶನ ಪಡೆಯುವುದಕ್ಕೂ ಮುಂದಲು ನಿಲ್ಲುವ ಜಾಗ) ವ್ಯವಸ್ಥೆಯಲ್ಲೂ ಕೆಲವು ಮಹತ್ವದ ಬದಲಾವಣೆ ಮಾಡಲಾಗುತ್ತಿದೆ.
ಇದರಿಂದ ಭಕ್ತರು ತಾಸುಗಟ್ಟಲೆ ಕಾಯುವುದು ಹಾಗೂ ಸಮಸ್ಯೆ ಎದುರಿಸುವುದು ಇನ್ಮುಂದೆ ತಪ್ಪಲಿದೆ. ಕಂಪಾರ್ಟ್‌ಮೆಂಟ್‌ನಲ್ಲಿ ನೂರಾರು ಜನ ಭಕ್ತಾಧಿಗಳನ್ನು ಕಾಯಿಸಲಾಗುತ್ತಿತ್ತು. ಆ ಮೇಲೆ ಒಂದೊಂದೇ ಕಂಪಾರ್ಟ್‌ಮೆಂಟ್ ಮೂಲಕ ಭಕ್ತಾಧಿಗಳನ್ನು ಒಳಗೆ ಬಿಡಲಾಗುತ್ತಿತ್ತು.
ಈ ರೀತಿ ಭಕ್ತಾಧಿಗಳು ತಾಸುಗಟ್ಟಲೆ ಕಾಯುವಾಗ ಸಮಸ್ಯೆ ಆಗುತ್ತಿತ್ತು. ಹಿರಿಯರು ಹಾಗೂ ಸಣ್ಣ ಮಕ್ಕಳು ಕಂಪಾರ್ಟ್‌ಮೆಂಟ್‌ಗಳಲ್ಲಿ ತಾಸು ಗಟ್ಟಲೆ ಇರಲಾಗದೆ ಸಂಕಷ್ಟ ಪಡುತ್ತಿದ್ದರು. ಅಲ್ಲಿ ಶೌಚಾಲಯದ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲಾ ಮಾದರಿಯ ಸೌಲಭ್ಯವೂ ಇದೆ. ಆದರೆ, ಜನರಿಗೆ ಸ್ವಲ್ಪ ಮಟ್ಟಿನ ಕಿರಿಕಿರಿಯಾಗುತ್ತಿತ್ತು.
ರಾಜಕೀಯ ಮಾಡುವಂತಿಲ್ಲ: ಇನ್ನು ತಿರುಪತಿ ತಿರುಮಲ ದೇವಸ್ಥಾನದಲ್ಲಿ ಈಚೆಗೆ ನಡೆದ ಲಡ್ಡು ವಿವಾದದ ನಂತರ ಲಡ್ಡು ತಯಾರಿಕೆ ಹಾಗೂ ಗುಣಮಟ್ಟದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ತಿರುಪತಿ ಲಡ್ಡುವಿನಲ್ಲಿ ಕಲಬೆರಕೆ ತುಪ್ಪವನ್ನು ಬಳಸಲಾಗಿದೆ ಎನ್ನುವ ವಿಚಾರವು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ದೇಶದಲ್ಲಿನ ಕೋಟ್ಯಾಂತರ ತಿರುಪತಿ ತಿಮ್ಮಪ್ಪನ ಭಕ್ತಾಧಿಗಳಲ್ಲಿ ಇದು ಅಘಾತವನ್ನೇ ಉಂಟು ಮಾಡಿತ್ತು. ಈ ಬೆಳವಣಿಗೆಯ ನಂತರ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಕಡ್ಡಾಯವಾಗಿ ನಂದಿನಿ ತುಪ್ಪವನ್ನು ಮಾತ್ರ ಬಳಸುವ ನಿಟ್ಟಿನಲ್ಲಿ ಆದೇಶ ಮಾಡಲಾಗಿದೆ.
ಅನ್ಯ ಧರ್ಮೀಯರ ವರ್ಗಾವಣೆ: ಇನ್ನು ತಿರುಪತಿ ತಿರುಮಲ ದೇವಸ್ಥಾನದಲ್ಲಿರುವ ಅನ್ಯಧರ್ಮೀಯ ಅಧಿಕಾರಿಗಳನ್ನು ಆಂಧ್ರಪ್ರದೇಶದ ವಿವಿಧ ಸರ್ಕಾರಿ ಇಲಾಖೆಗಳಿಗೆ ವರ್ಗಾವಣೆ ಮಾಡುವ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಟಿಟಿಡಿಯಲ್ಲಿ ಕೆಲಸ ಮಾಡುತ್ತಿರುವ ಅನ್ಯಧರ್ಮೀಯರನ್ನು ವಿಆರ್‌ಎಸ್ ಇಲ್ಲವೇ ಸರ್ಕಾರಿ ಇಲಾಖೆಗಳಿಗೆ ವರ್ಗಾವಣೆ ಮಾಡಲು ನಿರ್ಧರಿಸಿರುವುದಾಗಿ ಟಿಟಿಡಿ ಅಧ್ಯಕ್ಷ ಬಿಆರ್ ನಾಯ್ಡು ಹೇಳಿದ್ದಾರೆ.
ಅಲ್ಲದೇ ತಿರುಮಲ ದೇವಸ್ಥಾನದಲ್ಲಿ ರಾಜಕೀಯ ಮಾಡಬಾರದು ಹಾಗೂ ಅನ್ಯ ವಿಷಯಗಳ ಬಗ್ಗೆ ಚರ್ಚೆ ಮಾಡಬಾರದು ಎಂದೂ ಹೇಳಲಾಗಿದೆ.
ಇನ್ನೊಂದು ವಿಶೇಷವೆಂದರೆ ಇಲ್ಲಿನ ಸ್ಥಳೀಯರಿಗೆ ಪ್ರತಿ ತಿಂಗಳು ಮೊದಲ ಮಂಗಳವಾರದಂದು ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೇ ಸಂಗ್ರಹವಾಗುವ ಹಣವನ್ನು ಎಲ್ಲಾವನ್ನು ಸರ್ಕಾರಿ ಸೌಮ್ಯದ ಬ್ಯಾಂಕ್‌ಗಳಲ್ಲಿ ಜಮೆ ಮಾಡುವುದು ಸೇರಿದಂತೆ ಹಲವು ಬದಲಾವಣೆಗಳನ್ನು ಟಿಟಿಡಿ ಮಾಡುತ್ತಿದೆ.












Click it and Unblock the Notifications