ಮುಖ್ಯ ಕಾರ್ಯದರ್ಶಿ ಸಂಬಂಧಿಕರ ಮನೇಲಿ ಸಿಕ್ತು ಕೆಜಿಗಟ್ಟಲೆ ಚಿನ್ನ

By: ಅನುಷಾ ರವಿ
Subscribe to Oneindia Kannada

ಚೆನ್ನೈ, ಡಿಸೆಂಬರ್ 21: ತಮಿಳುನಾಡಿನ ಸಚಿವಾಲಯದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ. ಮುಖ್ಯ ಕಾರ್ಯದರ್ಶಿ ರಾಮ್ ಮೋಹನ್ ರಾವ್ ಕಚೇರಿ ಮೇಲೆ ಕೂಡ ದಾಳಿ ನಡೆಯಿತು. ಅದಕ್ಕೂ ಮುನ್ನ ಅಧಿಕಾರಿಗಳು ಚೆನ್ನೈನ ಅಣ್ಣಾ ನಗರ್ ನಲ್ಲಿರುವ ರಾವ್ ಮನೆಯಲ್ಲೂ ಪರಿಶೀಲನೆ ನಡೆಸಿದರು.

ದಾಳಿ ವೇಳೆ ಸಿಆರ್ ಪಿಎಫ್ ಸಿಬ್ಬಂದಿ ಕೂಡ ನಿಯೋಜಿಸಲಾಗಿತ್ತು. ಎರಡು ತಂಡದಲ್ಲಿದ್ದ ಅಧಿಕಾರಿಗಳು ದಾಳಿ ವೇಳೆ ಹಾಜರಿದ್ದರು. ಕೊಡಂಬಾಕ್ಕಂ, ವಲಸರವಕ್ಕಂ, ತಿರುವನ್ಮಿಯೂರು ಸೇರಿದಂತೆ ಐದು ಕದೆ ದಾಳಿ ನಡೆಯಿತು. ಚಿತ್ತೂರು ಹಾಗೂ ವಿಜಯವಾಡದಲ್ಲಿರುವ ರಾಮ್ ಮೋಹನ್ ರಾವ್ ಸಂಬಂಧಿಕರ ಮನೆಗಳ ಮೇಲೆ ಕೂಡ ದಾಳಿ ನಡೆಯಿತು.[ತಮಿಳುನಾಡಿನ ಮುಖ್ಯ ಕಾರ್ಯದರ್ಶಿ ಮನೆ ಮೇಲೆ ಐಟಿ ದಾಳಿ]

Gold, cash found in TN Chief secretary relative residence

ಇಪ್ಪತ್ನಾಲ್ಕು ಲಕ್ಷ ರುಪಾಯಿ ನಗದು, ನಲವತ್ತು ಕೆ.ಜಿ. ಚಿನ್ನವನ್ನು ವಿಜಯವಾಡದಲ್ಲೂ ನಾಲ್ಕು ಕೆ.ಜಿ. ಚಿನ್ನವನ್ನು ಚಿತ್ತೂರಿನಲ್ಲೂ ವಶಕ್ಕೆ ಪಡೆಯಲಾಯಿತು. ಕಳೆದ ಜೂನ್ ನಲ್ಲಿ ರಾಮ್ ಮೋಹನ್ ರಾವ್ ಅವರನ್ನು ಜಯಲಲಿತಾ ಆಯ್ಕೆ ಮಾಡಿದ್ದರು. 1985ನೇ ಬ್ಯಾಚ್ ಅಧಿಕಾರಿಯಾದ ರಾವ್, ಜಾಗೃತ ದಳದ ಅಯುಕ್ತ ಮತ್ತು ಆಡಳಿತ ಸುಧಾರಣೆ ವಿಭಾಗದ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Relatives of the Tamil nadu chief secretary in Chittoor and Vijayawada were also raided. Officials seized Rs 24 lakh in cash and 40 kgs gold from Vijayawada and 4 kgs gold from Chittoor.
Please Wait while comments are loading...