ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹದಾಯಿ ತೀರ್ಪು: ಗೋವಾದಿಂದಲೂ ಮೇಲ್ಮನವಿ ಸಾಧ್ಯತೆ

By Manjunatha
|
Google Oneindia Kannada News

ಪಣಜಿ, ಆಗಸ್ಟ್ 17: ಮೊನ್ನೆಯಷ್ಟೆ ಪ್ರಕಟವಾಗಿದ್ದ ಮಹದಾಯಿ ಕುರಿತ ನ್ಯಾಯಾಧಿಕರಣದ ಐತೀರ್ಪಿನ ಬಗ್ಗೆ ಆರಂಭದಲ್ಲಿ ತೃಪ್ತಿ ವ್ಯಕ್ತಪಡಿಸಿದ್ದ ಗೋವಾ ಸರ್ಕಾರ ಈಗ ಅತೃಪ್ತಿ ವ್ಯಕ್ತಪಡಿಸುತ್ತಿದೆ.

ಮಹದಾಯಿ ನ್ಯಾಯಾಧಿಕರಣ ತೀರ್ಪಿನ ಪ್ರಕಾರ ಗೋವಾಕ್ಕೆ 24 ಟಿಎಂಸಿ ಅಡಿ ನೀರು ದೊರೆಯಲಿದೆ. ಕರ್ನಾಟಕದ ಪಾಲಿಗೆ 13.42 ಟಿಎಂಸಿ ಅಡಿ ನೀರು ದೊರಕಿದ್ದರೆ ಮಹರಾಷ್ಟ್ರ ಪಾಲಿಗೆ 1.30 ಟಿಎಂಸಿ ಅಡಿ ನೀರು ದೊರೆತಿದೆ.

ಮಹದಾಯಿ: ಕರ್ನಾಟಕ ಕೇಳಿದ್ದೆಷ್ಟು? ನ್ಯಾಯಾಧಿಕರಣ ಕೊಟ್ಟಿದ್ದೆಷ್ಟು?ಮಹದಾಯಿ: ಕರ್ನಾಟಕ ಕೇಳಿದ್ದೆಷ್ಟು? ನ್ಯಾಯಾಧಿಕರಣ ಕೊಟ್ಟಿದ್ದೆಷ್ಟು?

ತೀರ್ಪು ಬಂದ ದಿನ ಟ್ವೀಟ್ ಮಾಡಿದ್ದ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರು, ನ್ಯಾಯಾಧಿಕರಣ ತೀರ್ಪು ತೃಪ್ತಿ ತಂದಿದೆ, ಗೋವಾ ಜನತೆಗೆ ನ್ಯಾಯ ದೊರೆತಿದೆ ಎಂದಿದ್ದರು ಆದರೆ ಈಗ ವರಸೆ ಬದಲಾಯಿಸಿದ್ದಾರೆ.

ಗೋವಾ ಕಾಂಗ್ರೆಸ್‌ನಿಂದ ಸರ್ಕಾರದ ಮೇಲೆ ಒತ್ತಡ

ಗೋವಾ ಕಾಂಗ್ರೆಸ್‌ನಿಂದ ಸರ್ಕಾರದ ಮೇಲೆ ಒತ್ತಡ

ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ನ್ಯಾಯಾಧಿಕರಣ ತೀರ್ಪಿನ ಬಗ್ಗೆ ವಿರೋಧ ವ್ಯಕ್ತಪಡಿಸಿ ಸರ್ಕಾರದ ಮೇಲೆ ಒತ್ತಡ ಹಾಕಿರುವ ಕಾರಣ ಗೋವಾ ಸರ್ಕಾರವು ನ್ಯಾಯಾಧಿಕರಣ ತೀರ್ಪು ಪ್ರಶ್ನಿಸಿ ಸುಪ್ರಿಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಿದೆ.

ಡಿ.ಕೆ.ಶಿವಕುಮಾರ್ ಅಸಮಾಧಾನ

ಡಿ.ಕೆ.ಶಿವಕುಮಾರ್ ಅಸಮಾಧಾನ

ರಾಜ್ಯ ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಸಹ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು ಹಾಗಾಗಿ ಕರ್ನಾಟಕ ಸರ್ಕಾರ ಸಹ ಸುಪ್ರಿಂಕೋರ್ಟ್‌ಗೆ ಮೇಲ್ಮವಿ ಸಲ್ಲಿಸುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತು ಕೆಲವೇ ದಿನದಲ್ಲಿ ಸರ್ವ ಪಕ್ಷ ಸಭೆ ಕರೆದು ಚರ್ಚಿಸಿ ನಿರ್ಧಾರ ಪ್ರಕಟಿಸಲಿದೆ.

ಮಹದಾಯಿ ತೀರ್ಪು : ಕರ್ನಾಟಕಕ್ಕೆ ನಿಜಕ್ಕೂ ಸಿಗಬೇಕಾದದ್ದು ಸಿಕ್ಕಿದೆಯಾ?ಮಹದಾಯಿ ತೀರ್ಪು : ಕರ್ನಾಟಕಕ್ಕೆ ನಿಜಕ್ಕೂ ಸಿಗಬೇಕಾದದ್ದು ಸಿಕ್ಕಿದೆಯಾ?

ಮಹದಾಯಿ ಹೋರಾಟಗಾರರದ್ದೂ ಇದೇ ಅಭಿಪ್ರಾಯ

ಮಹದಾಯಿ ಹೋರಾಟಗಾರರದ್ದೂ ಇದೇ ಅಭಿಪ್ರಾಯ

ಮಹದಾಯಿ ಹೋರಾಟಗಾರರದ್ದೂ ಸಹ ಇದೇ ಅಭಿಪ್ರಾಯವಾಗಿದ್ದು, ರಾಜ್ಯ ಸರ್ಕಾರವು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಅವರು ತಿಳಿಸಿದ್ದರು.

ಮಹದಾಯಿ ಮುಂಚೂಣಿ ಹೋರಾಟಗಾರ ವೀರೇಶ ಸೊಬರದ ಮಠ ಸಂದರ್ಶನಮಹದಾಯಿ ಮುಂಚೂಣಿ ಹೋರಾಟಗಾರ ವೀರೇಶ ಸೊಬರದ ಮಠ ಸಂದರ್ಶನ

ಎಚ್‌ಡಿಕೆ-ಡಿಕೆಶಿ ಸಭೆ

ಎಚ್‌ಡಿಕೆ-ಡಿಕೆಶಿ ಸಭೆ

ನಿನ್ನೆ (ಆಗಸ್ಟ್ 17) ರಂದು ಮುಖ್ಯಮಂತ್ರಿ ಕುಮಾರಸ್ವಾಮಿ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಕಾನೂನು ತಜ್ಞರು, ನೀರಾವರಿ ತಜ್ಞರುಗಳ ಜೊತೆ ಸಭೆ ನಡೆಸಿದ್ದು, ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಆದರೆ ಅದಕ್ಕೆ ಮುನ್ನಾ ಸರ್ವ ಪಕ್ಷ ಸಭೆಯೊಂದನ್ನು ನಡೆಸಲಿದ್ದಾರೆ.

English summary
Goa government planning to appeal to supreme court questioning Mahadayi verdict of tribunal court. Goa Congress pressures Goa government to go for appeal on verdict.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X