ಪಣಜಿ, ಆಗಸ್ಟ್ 28: ಪಣಜಿ ಉಪಚುನಾವಣೆಯಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಜಯ ಸಾಧಿಸಿದ್ದಾರೆ.
ಆಗಸ್ಟ್ 23ರಂದು ಪಣಜಿ ಸೇರಿದಂತೆ ಮೂರು ರಾಜ್ಯಗಳಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು. ಇದರಲ್ಲಿ ಪಣಜಿಯ ಫಲಿತಾಂಶ ಹೊರ ಬಿದ್ದಿದ್ದು ಪರಿಕ್ಕರ್ 4,803 ಮತಗಳಿಂದ ಜಯಗಳಿಸಿದ್ದಾರೆ.
ಭಾರತೀಯ ಸೇನಾಪಡೆಗೆ ಶೀಘ್ರದಲ್ಲೇ ಎಸಿ ಜಾಕೆಟ್: ಪರಿಕ್ಕರ್
ಜಯಗಳಿಸಿದ ನಂತರ ಮಾತನಾಡಿರುವ ಪರಿಕ್ಕರ್, ಮುಂದಿನ ವಾರವೇ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.
ಕೇಂದ್ರ ಸಚಿವರಾಗಿದ್ದ ಪರಿಕ್ಕರ್ ಕಳೆದ ಮಾರ್ಚ್ ನಲ್ಲಿ ಗೋವಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಮುಖ್ಯಮಂತ್ರಿಯಾದ ನಂತರ 6 ತಿಂಗಳ ಒಳಗೆ ವಿಧಾನಸಭೆ ಪ್ರವೇಶಿಸಲೇಬೇಕಿದ್ದರಿಂದ ಪರಿಕ್ಕರ್ ಇದೀಗ ಉಪಚುನಾವಣೆಯಲ್ಲಿ ಕಣಕ್ಕಿಳಿದು ಗೆದ್ದಿದ್ದಾರೆ.
ಇನ್ನು ವಲ್ಪೊಯಿ ಕ್ಷೇತ್ರದಲ್ಲಿ ಬಿಜೆಪಿಗೆ ಇತ್ತೀಚೆಗೆ ಸೇರ್ಪಡೆಯಾಗಿದ್ದ ವಿಶ್ವಜಿತ್ ರಾಣೆ 10,066 ಮತಗಳಿಂದ ಜಯ ಸಾಧಿಸಿದ್ದಾರೆ.
Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರ.subscribe to Kannada Oneindia.
ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!