ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಿ: ಪರಿಕ್ಕರ್

By Prithviraj
|
Google Oneindia Kannada News

ಶ್ರೀನಗರ, ನವೆಂಬರ್, 3: ಗಡಿಯಲ್ಲಿ ಶತ್ರು ಸ್ಯೈನ್ಯಗಳಿಂದ ಸಂಭವಿಸುವ ಯಾವುದೇ ರೀತಿಯ ದಾಳಿಗಳಿಗೆ ತಕ್ಕ ಪ್ತತ್ಯುತ್ತರ ನೀಡಿ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಯೋಧರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಇತ್ತೀಚೆಗೆ ದಾಳಿ ಮಾಡಲಾದ ಇಲ್ಲಿಯ ಬರಮುಲ್ಲಾ ಜಿಲ್ಲೆಯ ಉರಿ ಸೇನಾ ಶಿಬಿರಕ್ಕೆ ಪರಿಕ್ಕರ್ ಅವರು ಎರಡು ದಿನ ಭೇಟಿ ನೀಡಲು ಉದ್ದೇಶಿಸಿದ್ದ ನಿಮಿತ್ತ ಬುಧವಾರ ಯೋಧರೊಂದಿಗೆ ಚರ್ಚೆ ನಡೆಸಿದರು.

Give befitting reply to any misadventure from across border Parrikar

ರಕ್ಷಣಾ ಸಚಿವರ ಜತೆ ಭೂಸೇನಾ ಮೂಖ್ಯಸ್ಥ ದಲ್ಬೀರ್ ಸಿಂಗ್ ಅವರೂ ಸಹ ಯೋಧರೊಂದಿಗೆ ಚರ್ಚೆ ನಡೆಸಿದರು. ಅಷ್ಟೇ ಅಲ್ಲದೆ ಗಡಿಯ ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಾಣ ಪಣಕ್ಕಿಟ್ಟು ಕಾರ್ಯನಿರ್ವಹಿಸುತ್ತಿರುವ ಯೋಧರೊಂದಿಗೂ ರಕ್ಷಣಾ ಸಚಿವರು ಚರ್ಚೆ ನಡೆಸಿದರು.

ಯೋಧರನ್ನು ಉದ್ದೇಶಿಸಿ ಮಾತನಾಡಿದ ಅವರು "ನೀವು ನಿರ್ವಹಿಸುತ್ತಿರುವ ಕರ್ತವ್ಯದ ಬಗ್ಗೆ ಇಡೀ ದೇಶ ಹೆಮ್ಮೆಪಡುತ್ತಿದೆ. "ಗಡಿಯಲ್ಲಿ ಸಂಭವಿಸುವ ಯಾವುದೇ ಅನರ್ಥ ದಾಳಿಗಳಿಗೆ ತಕ್ಕ ಪ್ರತ್ಯುತ್ತರ ನೀಡಿ" ಎಂದು ಹೇಳಿದ್ದಾರೆ.

ಉರಿ ಸೇನಾ ಶಿಬಿರದಲ್ಲಿ ಮಾತನಾಡಿದ ನಂತರ ಬದಾಮಿಬಾಗ್ ಕಂಟೋನ್ ಮೆಂಟ್ ಪ್ರದೇಶಕ್ಕೂ ಭೇಟಿ ನೀಡಿದ ಸಚಿವರು "ಸೇನೆ ಕೈಗೊಳ್ಳುತ್ತಿರುವ ಸುರಕ್ಷಾ ಕ್ರಮಗಳು ಮತ್ತು ಗಡಿಯಲ್ಲಿರುವ ಪರಿಸ್ಥಿತಿಗಳ ಬಗ್ಗೆ ಮಾಹಿತಿ ಪಡೆದರು"

ಸೇನಾ ಶಿಬಿರಗಳ ಭೇಟಿಯ ಅಂಗವಾಗಿ ಪರಿಕ್ಕರ್ ಅವರು ಗುರುವಾರ ಹುತಾತ್ಮ ಯೋಧ ಪರಮವೀರ ಚಕ್ರ ಮೇಜರ್ ಸೋಮನಾಥ ಶರ್ಮಾ ಅವರ 69ನೇ ವರ್ಧಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂತಾಪ ಸೂಚಿಸಲಿದ್ದಾರೆ.

ರಕ್ಷಣಾ ಸಚಿವರ ಜತೆ ಹಿರಿಯ ಸೇನಾ ಅಧಿಕಾರಿಗಳೂ ಸಹ ಭಾಗವಹಿಸಲಿದ್ದಾರೆ. ಕಾರ್ಯಕ್ರಮವು ಇರುವ ಬುಡಗಂ ಜಿಲ್ಲೆಯ ಶ್ರೀನಗರದ ವಿಮಾನ ನಿಲ್ದಾಣಕ್ಕೆ ಸನಿಹ ಪ್ರದೇಶದಲ್ಲಿ ಸಂತಾಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

1947ರಲ್ಲಿ ಕಾಶ್ಮೀರದಲ್ಲಿ ನಡೆದ ಯುದ್ಧದಲ್ಲಿ ಮೇಜರ್ ಶರ್ಮಾ ಅವರು ವಿರೋಚಿತವಾಗಿ ಹೋರಾಡಿ ವೀರಮರಣ ಹೊಂದಿದ್ದರು.

English summary
Defence Minister Manohar Parrikar on Wednesday asked the army personnel posted along the Line of Control to remain alert and give a befitting response to any "misadventure" from the across the border.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X