ಒಡಿಶಾ: ಪ್ರಾರ್ಥನೆಗೆ ತೆರಳುತ್ತಿದ್ದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ
ಒಡಿಶಾ, ಅಕ್ಟೋಬರ್ 17: ಯುವತಿಯೊಬ್ಬರ ಮೇಲೆ ಆರು ಜನ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಒಡೀಶಾದ ಗಂಜಮ್ ಜಿಲ್ಲೆಯ ಭಂಜಾನಗರ್ ಎಂಬಲ್ಲಿ ಅ.16 ರಂದು ನಡೆದಿದೆ.
ಇಲ್ಲಿನ ಬುಧಕೆಂದು ದೇವಾಲಯಕ್ಕೆ ಪ್ರಾರ್ಥನೆಗೆಂದು ತೆರಳುತ್ತಿದ್ದ ಯುವತಿಯನ್ನು ಕಿಡಿಗೇಡಿಗಳು ಅಪಹರಿಸಿ ಗೇರುಮರಗಳಿರುವ ಫಾರ್ಮಿನಲ್ಲಿ ಅತ್ಯಾಚಾರ ಎಸಗಿದ್ದಾರೆ.

ಯುವತಿಗೆ ಆಗಷ್ಟೇ ನಿಶ್ಚಿತಾರ್ಥವಾಗಿದ್ದರಿಂದ ತನ್ನ ಭಾವಿ ಪತಿಯೊಂದಿಗೆ ಪ್ರಾರ್ಥನೆಗೆಂದು ದೇವಾಲಯಕ್ಕೆ ತೆರಳುತ್ತಿದ್ದರು. ಭಂಜಾನಗರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೂ ಆರೋಪಿಗಳನ್ನೂ ಪತ್ತೆಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.












Click it and Unblock the Notifications