18ರ ಯುವತಿಯನ್ನು ತಾಯಿ ಮಾಡಿದ 12ರ ಬಾಲಕ!

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಎರ್ನಾಕುಲಂ, ನವೆಂಬರ್ 7: ಹದಿನೆಂಟು ತುಂಬುವ ಎರಡು ತಿಂಗಳ ಮುಂಚೆಯೇ ಇಲ್ಲಿನ ಯುವತಿಯೊಬ್ಬಳು ಹೆಣ್ಣುಮಗುವಿಗೆ ಜನ್ಮ ನೀಡಿದ್ದಾಳೆ. ಇದರಲ್ಲಿ ಏನು ವಿಶೇಷ ಬಿಡ್ರಿ ಅಂತೀರಾ? ವಿಷಯ ಮುಂದೆ ಇದೆ. ಈ ಮಗುವಿನ ಜನನಕ್ಕೆ ಕಾರಣವಾಗಿರುವವನು ಹನ್ನೆರಡು ವರ್ಷದ ಬಾಲಕ ಎಂಬುದು ಆರೋಪ.

ಆದ್ದರಿಂದ ಆತನ ವಿರುದ್ಧ ಬಾಲ ನ್ಯಾಯ ಕಾಯ್ದೆ ಅಡಿ ದೂರು ದಾಖಲಿಸಲಾಗಿದೆ. ಆ ಯುವತಿ ಇತ್ತೀಚೆಗೆ ಕೊಚ್ಚಿ ಆಸ್ಪತ್ರೆಯಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದಳು. ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿಲ್ಲ ಎಂಬ ಕಾರಣಕ್ಕೆ ಖಾಸಗಿ ಆಸ್ಪತ್ರೆ ವಿರುದ್ಧವೂ ಪೊಲೀಸರು ದೂರು ದಾಖಲಿಸಿದ್ದಾರೆ.[ಕೇರಳ ಅತ್ಯಾಚಾರ ಸಂತ್ರಸ್ತೆ ಆರೋಪದ ತನಿಖೆಗೆ ಆದೇಶ]

girl delivers child, 12 yr old booked for allegedly impregnating

'ಈ ಬಗ್ಗೆ ಮಕ್ಕಳ ವಿಚಾರಗಳನ್ನು ನೋಡಿಕೊಳ್ಳುವಂಥ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಯುವತಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಹುಡುಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನವೆಂಬರ್ 4ರಂದೇ ಅವರಿಗೆ ನೀಡಿದ್ದೇವೆ ಎಂದಿದ್ದಾರೆ ಆಸ್ಪತ್ರೆಯವರು.[ಕೇರಳ ಆಘಾತ : 90 ವರ್ಷದ ವೃದ್ಧೆ ಮೇಲೆ ಅತ್ಯಾಚಾರ]

ಆ ಯುವತಿ ಹೆಣ್ಣುಮಗುವಿಗೆ ಜನ್ಮ ನೀಡಿದ ಒಂದು ದಿನದ ನಂತರ ಕಲಮೆಸರಿ ಸರ್ಕಲ್ ಇನ್ ಸ್ಪೆಕ್ಟರ್ ಗೆ ಮಾಹಿತಿ ದೊರೆತಿದೆ. 'ಸೆಕ್ಷನ್ 18 ಪೋಸ್ಕೊ ಕಾಯ್ದೆ ಪ್ರಕಾರ ಆಸ್ಪತ್ರೆ ಅಧಿಕಾರಿಗಳು ತಕ್ಷಣ ತಿಳಿಸಬೇಕಿತ್ತು' ಎಂದು ಅವರು ಹೇಳಿದ್ದಾರೆ. ಅದರೆ ಮಕ್ಕಳ ಕಲ್ಯಾಣ ಆಯೋಗದ ಪ್ರಕಾರ ಪೊಲೀಸರಿಗೆ ತಿಳಿಸೋದು ಕಡ್ಡಾಯವಲ್ಲವಂತೆ. ಆ ಯುವತಿಯ ತಾತ-ಅಜ್ಜಿ, ತಮ್ಮಿಂದ ಮಗುವನ್ನು ಸಾಕಲು ಆಗುವುದಿಲ್ಲ ಎಂದು ತಿಳಿಸಿರುವುದರಿಂದ ಆ ಮಗು ರಾಜ್ಯ ಸರಕಾರ ನಡೆಸುವ ಬಾಲಗೃಹದಲ್ಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Kalamassery police in Ernakulam registered a case against a 12 year old boy for allegedly impregnating an girl, who recently gave birth to a girl child in a Kochi hospital.
Please Wait while comments are loading...