• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜನರನ್ನು ಜೊತೆಗೆ ಕರೆದುಕೊಂಡು ಹೋಗದಿದ್ದರೆ ಬದಲಾವಣೆ ಅಸಾಧ್ಯ: ರಾಹುಲ್

By Sachhidananda Acharya
|

ಸಿಂಗಾಪುರ, ಮಾರ್ಚ್ 10: ವಿದೇಶಿ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಸಿಂಗಾಪುರದಲ್ಲಿ ಐಐಎಂ ಹಳೆ ವಿದ್ಯಾರ್ಥಿಗಳ ಜತೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ತಮ್ಮ ಅಜ್ಜಿ ಇಂದಿರಾ ಗಾಂಧಿ ಹತ್ಯೆಯಿಂದ ಹಿಡಿದು ನರೇಂದ್ರ ಮೋದಿ ಸರಕಾರದವರೆಗೆ ಹಲವು ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ; ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದಾರೆ. ಅವುಗಳ ಸಂಗ್ರಹ ರೂಪ ಇಲ್ಲಿದೆ.

Get things done, only if people carry together: Rahul Gandhi
 • ನರೇಗಾ (NREGA) ದಿಂದ ದೊಡ್ಡ ಮಟ್ಟಕ್ಕೆ ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾದವು. ದೊಡ್ಡ ಮಟ್ಟದ ಬದಲಾವಣೆಯನ್ನು ನಾವು 2008-09ರಲ್ಲಿ ಕಂಡೆವು. ಇದಕ್ಕೆ ಕಾರಣ ನರೇಗಾ. ಕಾರಣ ಇದರಿಂದ ಹಣ ನೇರವಾಗಿ ಹಳ್ಳಿಗಳಿಗೆ ತಲುಪಿತು.
 • ನಾನು ನನ್ನ ಸಹೋದ್ಯೋಗಿಗಳಿಗೆ ಹೇಳಿದ್ದೇನೆ. ನಮ್ಮ ಪಕ್ಷದೊಳಗೆ ಕನಿಷ್ಠ ಶೇಕಡಾ 50 ಮಹಿಳಾ ಪ್ರತಿನಿಧಿಗಳು ಇರಬೇಕು ಎಂದು. ಈಗಿನ ರಾಜಕೀಯ ವಾತಾವರಣದಲ್ಲಿ ಇದು ದೊಡ್ಡದು ಎಂದು ಗೊತ್ತಿದೆ. ಆದರೆ ಇದನ್ನು ಮಾಡಲೇಬೇಕಾಗಿದೆ.
 • ನನ್ನ ಪ್ರಕಾರ ಆರೋಗ್ಯ ಸೇವೆ, ಆರೋಗ್ಯ ಮಾಹಿತಿ, ಜೆನೆಟಿಕ್ಸ್, ಡಯಾಗ್ನಾಸ್ಟಿಕ್ಸ್ ಮತ್ತು ನಮ್ಮ ಆರೋಗ್ಯ ವ್ಯವಸ್ಥೆ ಒಂದಕ್ಕೊಂದು ಸಂಪರ್ಕ ಹೊಂದಿರಬೇಕು. ಇದಕ್ಕಾಗಿ ದೊಡ್ಡ ಮಟ್ಟದ ಸ್ಟ್ರಾಟೆಜಿ ರೂಪಿಸಬೇಕಾಗಿದೆ. ಇದರಿಂದ ಜಾಗತಿಕ ಆರೋಗ್ಯ ಕ್ಷೇತ್ರದಲ್ಲಿ ನಾವು ಹಿಡಿತ ಸಾಧಿಸಬಹುದು.
 • ಕೃಷಿ ಕ್ಷೇತ್ರ ಲಾಭದಾಯಕವಾಗಿಲ್ಲ. ಉತ್ಪಾದನಾ ಕ್ಷೇತ್ರ ಎದ್ದೇಳುತ್ತಿಲ್ಲ. 'ಮೇಕ್ ಇನ್ ಇಂಡಿಯಾ' ಪರಿಕಲ್ಪನೆ ಕೆಟ್ಟದಾಗಿದೆ. ಇದು ಭಾರತದಲ್ಲಿ ಈಗಿರುವ ಕೌಶಲ್ಯದ ಜತೆ ಸಂಪರ್ಕ ಸೇತುವಾಗಿಲ್ಲ. ಭಾರತದಲ್ಲಿ ರೈತರಾಗಿದ್ದು ಹಣ ಗಳಿಸುವುದು ಬಹಳ ಕಷ್ಟ. ಹಾಗಾಗಿ ಮುಖ್ಯ ವಿಷಯ ಏನೆಂದರೆ, ಸರಕಾರದ ಬೆಂಬಲ ಮತ್ತು ರಕ್ಷಣೆ ಇಲ್ಲದೆ ರೈತರು ಬದುಕಲಾರರು.
 • ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ದೊಡ್ಡ ಮಟ್ಟದ ಉದ್ಯೋಗ ಸೃಷ್ಟಿಯ ಕ್ಷೇತ್ರಗಳಾಗಿವೆ. ಆದರೆ ಅವೀಗ ಅನಾಥವಾಗಿವೆ. ಸರಕಾರದ ರಕ್ಷಣೆ ಬೆಂಬಲ ಇಲ್ಲದೆ ಅವೆಲ್ಲಾ ಸೊರಗಿವೆ.
 • ನನ್ನ ಅಂದಾಜಿನ ಪ್ರಕಾರ ಭಾರತದಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿಸದ ಹಿನ್ನಲೆಯಲ್ಲಿ ಜನರಲ್ಲಿ ಆಕ್ರೋಶ ಹುಟ್ಟಿಕೊಂಡಿದೆ. ನನ್ನ ಆಲೋಚನೆಯ ಪ್ರಕಾರ ಸಣ್ಣ ಮತ್ತು ಮದ್ಯಮ ಉದ್ಯಮಗಳಿಂದ, ಕೃಷಿ ಚಟುವಟಿಕೆಗಳಿಂದ, ಕೋಲ್ಡ್ ಸ್ಟೋರೇಜ್ ಗಳಿಂದ, ಸಣ್ಣ ಮತ್ತು ಮದ್ಯಮ ಉದ್ಯಮಗಳಿಗೆ ಆರ್ಥಿಕ ನೆರವು ನೀಡುವುದರಿಂದ ಉದ್ಯೋಗ ಸೃಷ್ಟಿಯಾಗಲಿದೆ.
 • ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಿಗೆ ಇನ್ನೂ ಅವಕಾಶವಿದೆ. ಅವುಗಳ ಸಂಖ್ಯೆ ಹೆಚ್ಚಿಸುವುದು ಮತ್ತು ಹೆಚ್ಚಿನ ಸ್ವಾಯತ್ತತೆಯನ್ನು ನೀಡುವುದು ಮುಂದಿನ ಹೆಜ್ಜೆಯಾಗಿದೆ. ನಾನು ಇದಕ್ಕೆ ಹೆಚ್ಚಿನ ಹಣವನ್ನು ವ್ಯಯಿಸಲಿದ್ದೇನೆ. ಬಿಜೆಪಿ ಶಿಕ್ಷಣಕ್ಕೆ ಮೀಸಲಾಗಿಟ್ಟ ಹಣದಲ್ಲಿ ಭಾರೀ ಕಡಿತಗೊಳಿಸಿದೆ.
 • ನನ್ನ ಅನುಭವದಲ್ಲಿ, ನೀವು ಜನರನ್ನು ಒಟ್ಟಿಗೆ ಕೊಂಡೊಯ್ಯದಿದ್ದರೆ, ನೀವು ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಒಮ್ಮತವನ್ನು ಜನರಲ್ಲಿ ಮೂಡಿಸಲೇಬೇಕಾಗಿದೆ.
 • ಜಮೀನು ಸ್ವಾಧೀನ, ಜಿಎಸ್ಟಿ ಮುಂತಾದ ಪ್ರಮುಖ ವಿಷಯಗಳ ಬಗ್ಗೆ ನಾವು ಬಿಜೆಪಿಯನ್ನು ಸಂಪರ್ಕಿಸಿದಾಗ ಅವರು ನಮ್ಮನ್ನು ಕೇಳಲು ಸಿದ್ದರಿರಲಿಲ್ಲ. ಬಿಜೆಪಿ ನಾಯಕರಿಗೂ ಮೋದಿ ಅವರೊಂದಿಗೆ ಈ ವಿಷಯದಲ್ಲಿ ಇದೇ ಅಭಿಪ್ರಾಯವಿದೆ.
 • ಪಕ್ಷ ಮೂಲತಃ ಒಂದು ಸಿದ್ಧಾಂತವಾಗಿದೆ. ನೀವು ಸಿದ್ಧಾಂತದಿಂದ ದೂರ ಹೋದಾಗ ಪಕ್ಷ ದುರ್ಬಲವಾಗುತ್ತದೆ. ಕಾಂಗ್ರೆಸ್ ಪಕ್ಷ ಕೆಲವು ಸಿದ್ಧಾಂತಗಳ ಪರ ನಿಲ್ಲಲೇಬೇಕು.
 • ನನ್ನ ತಂದೆ ಸಾಯುತ್ತಾರೆಂದು ನಮಗೆ ತಿಳಿದಿತ್ತು. ನನ್ನ ಅಜ್ಜಿ ಸಾಯುವರೆಂದೂ ಗೊತ್ತಿತ್ತು. ರಾಜಕೀಯದಲ್ಲಿ ನೀವು ಎದುರಾಳಿ ಶಕ್ತಿಗಳನ್ನು ಎದುರಿಸಿದಾಗ, ನೀವು ಯಾವುದಾದರೊಂದರ ಪರವಾಗಿ ನಿಂತುಕೊಂಡಾಗ ನೀವು ಸಾಯುತ್ತೀರಿ.
 • ಅಜ್ಜಿ ಹತ್ಯೆಯಾದಾಗ ನನಗೆ 14 ವರ್ಷ. ನನ್ನ ತಂದೆ ಕೊಲ್ಲಲ್ಪಟ್ಟರು. ಆದ್ದರಿಂದ ನಿಮ್ಮ ಸುತ್ತ ಬೆಳಿಗ್ಗೆ, ಮಧ್ಯಾಹ್ನ ಮತ್ತು ರಾತ್ರಿ 15 ಜನ ಸುತ್ತುವರಿದಿರುವ ಪರಿಸರದಲ್ಲಿ ನೀವು ವಾಸಿಸುತ್ತಿದ್ದೀರಿ; ಇದು ಒಂದು ಸವಲತ್ತು ಎಂದು ನಾನು ಭಾವಿಸುವುದಿಲ್ಲ.
 • ಬೇಕಾದಷ್ಟು ಸೌಲಭ್ಯಗಳಿವೆ. ಅದನ್ನು ನಾನು ಹೇಳಬಹುದು. ಆದರೆ ನಾನು ಕಲ್ಲು ಮುಳ್ಳಿನ ಹಾದಿಯಲ್ಲಿಲ್ಲ ಎಂದು ಹೇಳಲು ಸಿದ್ಧವಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
"In my experience, if you don't carry people together, you will not be able to get things done. You need to build consensus,” said Congress President Rahul Gandhi in a interaction with IIM alumni’s in Singapore.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more