ರಾವತ್‌ 'ಅತೀ ಸುರಕ್ಷಿತ' Mi-17V5 ಹೆಲಿಕಾಪ್ಟರ್‌ನಲ್ಲಿದ್ದರು: ಪತನದ ಬಗ್ಗೆ ತಜ್ಞರ ಗೊಂದಲ

ನವದೆಹಲಿ, ಡಿಸೆಂಬರ್‌ 08: ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸಹಿತ 14 ಜನರಿದ್ದ ಸೇನಾ ಹೆಲಿಕಾಪ್ಟರ್ ಪತನವಾಗಿರುವ ಘಟನೆ ತಮಿಳುನಾಡಿನ ನೀಲ್‌ಗಿರಿ ಜಿಲ್ಲೆಯ ಕುನೂರ್ ಬಳಿ ನಡೆದಿದೆ. ಆದರೆ Mi-17V5 ಹೆಲಿಕಾಪ್ಟರ್‌ ಪತನ ಆಗಿರುವುದಕ್ಕೆ ಗೊಂದಲವನ್ನು ವ್ಯಕ್ತಪಡಿಸಿರುವ ತಜ್ಞರು, "Mi-17V-5 ಹೆಲಿಕಾಪ್ಟರ್‌ಗಳು ಅತ್ಯಂತ ವಿಶ್ವಾಸಾರ್ಹ ಹಾಗೂ ಸುರಕ್ಷಿತವಾದ ಹೆಲಿಕಾಪ್ಟರ್‌," ಎಂದು ಹೇಳಿದ್ದಾರೆ.

Recommended Video

      ವಾಯುಪಡೆಯ Mi-17V5 ಹೆಲಿಕಾಪ್ಟರ್ ಸ್ಪೆಷಾಲಿಟಿ ಏನು? | Oneindia Kannada

      ತಮಿಳುನಾಡಿನ ನೀಲ್‌ಗಿರಿ ಜಿಲ್ಲೆಯ ಕುನೂರ್ ಬಳಿ ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸಹಿತ 14 ಜನರಿದ್ದ ಸೇನಾ ಹೆಲಿಕಾಪ್ಟರ್ ಪತನವಾಗಿದ್ದು ಈವರೆಗೆ 11 ಮಂದಿ ಸಾವನ್ನಪ್ಪಿದ್ದಾರೆ. ಹೆಲಿಕಾಪ್ಟರ್‌ನಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಇರುವುದನ್ನು ಭಾರತೀಯ ಸೇನೆ ಈಗಾಗಲೇ ಖಚಿತಪಡಿಸಿದ್ದು, ತನಿಖೆಗೆ ಆದೇಶ ನೀಡಿದೆ. ಬಿಪಿನ್ ರಾವತ್ ಸೇರಿ ಮೂವರ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

      ಈ ನಡುವೆ ಎನ್‌ಡಿ ಟಿವಿಯ ಜೊತೆ ಮಾತನಾಡಿದ ತಜ್ಞರು, "ಈ ಹೆಲಿಕಾಪ್ಟರ್‌ ಅತ್ಯಂತ ಸುರಕ್ಷಿತ, ವಿಶ್ವಾಸಾರ್ಹ, ಸ್ಥಿರ ಹಾಗೂ ದೊಡ್ಡದು ಆಗಿದೆ," ಎಂದು ಹೇಳಿದ್ದಾರೆ. ಈ ಹೆಲಿಕಾಪ್ಟರ್‌ ಅನ್ನೇ ವಿಐಪಿಗಳಿಗೆ ಹಾಗೂ ರಾಷ್ಟ್ರಪತಿ, ಪ್ರಧಾನ ಮಂತ್ರಿಯ ಸಂಚಾರಕ್ಕೆ ಉಪಯೋಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

      Gen Rawat Was On Very Safe Mi-17V-5: Crash Confounds Experts

      ಇನ್ನು ಊಟಿಯಲ್ಲಿ ನಿಗದಿಯಾಗಿದ್ದ ಸಮಾರಂಭಕ್ಕೆ ತೆರಳುತ್ತಿದ್ದರು. ಬಿಪಿನ್ ರಾವತ್ ಪತ್ನಿ ಹಾಗೂ ಬ್ರಿಗೆಡಿಯರ್ ರಾಂಕ್‌ನ ಅಧಿಕಾರಿಗಳಿದ್ದರು. ಈ ಹೆಲಿಕಾಪ್ಟರ್‌ ಪತನಕ್ಕೆ ಹವಾಮಾನ ವೈಪರೀತ್ಯವೇ ಕಾರಣ ಎಂದು ಮಾಹಿತಿ ಲಭಿಸಿದೆ. ಇನ್ನು ರಕ್ಷಣಾ ಸಿಬ್ಬಂದಿ ಮುಖ್ಯಸ್ಥರೊಂದಿಗೆ ಸೇನಾ ಹೆಲಿಕಾಪ್ಟರ್ ಪತನದ ಕುರಿತು ಕೇಂದ್ರ ಸರ್ಕಾರವು ಗುರುವಾರ ಸಂಸತ್ತಿನಲ್ಲಿ ಹೇಳಿಕೆ ನೀಡುವ ಸಾಧ್ಯತೆಯಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾಹಿತಿ ನೀಡಿದ್ದಾರೆ. ಆ ಬಳಿಕ ಕೇಂದ್ರ ಸಚಿವ ಸಂಪುಟದ ತುರ್ತು ಸಭೆ ಕರೆಯಲಾಗಿದೆ.

      ಈ ಘಟನೆಯ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, "ಸಿಡಿಎಸ್ ಬಿಪಿನ್ ರಾವತ್ ಜಿ ಅವರಿದ್ದ ಹೆಲಿಕಾಪ್ಟರ್ ದುರಂತ ಅಪಘಾತದ ಬಗ್ಗೆ ಕೇಳಿ ಆಘಾತವಾಯಿತು. ಎಲ್ಲರ ಸುರಕ್ಷತೆ, ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ," ಎಂದಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, "ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರನ್ನು ಹೊತ್ತೊಯ್ಯುತ್ತಿದ್ದ ಐಎಎಫ್ ಹೆಲಿಕಾಪ್ಟರ್ ಅಪಘಾತಕ್ಕೀಡಾದ ಸುದ್ದಿ ಕೇಳಿ ಬೇಸರವಾಯಿತು. ಈ ಘಟನೆಯ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸುತ್ತಿದ್ದೇನೆ. ಪ್ರಾಥಮಿಕ ಮಾಹಿತಿಯಂತೆ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ," ಎಂದಿದ್ದಾರೆ.

      ಈವರೆಗಿನ ಲಭ್ಯವಿರುವ ಮಾಹಿತಿಯ ಪ್ರಕಾರ, ಅಪಘಾತವಾದ ಹೆಲಿಕಾಪ್ಟರ್‌ನಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್, ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್. ಎಸ್. ನಾಯಕ, ಲೆಫ್ಟಿನೆಂಟ್ ಹರ್ಜಿಂದರ್ ಸಿಂಗ್, ಎನ್. ಕೆ. ಗುರ್ ಸೇವಕ್ ಸಿಂಗ್, ಎನ್. ಕೆ. ಜಿತೇಂದ್ರ ಸಿಂಗ್, ಎಲ್.ಎನ್. ಕೆ. ವಿವೇಕ್ ಕುಮಾರ್, ಎಲ್.ಎನ್. ಕೆ. ಬಿ. ಸಾಯಿ ತೇಜ, ಎಚ್. ಎ.ವಿ. ಸಾತ್ಪಾಲ್ ಅವರನ್ನು ಹೊತ್ತೊಯ್ಯುತ್ತಿತ್ತು ಎನ್ನಲಾಗಿದೆ.

      (ಓನ್‌ಇಂಡಿಯಾ ಸುದ್ದಿ)

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+