ಕುಟುಂಬದವರನ್ನು ಗುರುತಿಸದ ಗೀತಾ, ಡಿಎನ್‌ಎ ಬಳಿಕ ಮುಂದಿನ ನಿರ್ಧಾರ
ನವದೆಹಲಿ, ಅಕ್ಟೋಬರ್. 26: 13 ವರ್ಷಗಳ ಹಿಂದೆ ಸಂಜೋತಾ ಎಕ್ಸ್ ಪ್ರೆಸ್ ರೈಲಿನಲ್ಲಿ ಆಕಸ್ಮಿಕವಾಗಿ ಪಾಕಿಸ್ತಾನಕ್ಕೆ ತೆರಳಿದ್ದ ಗೀತಾ ಅಕ್ಟೋಬರ್ 26 ರಂದು ತಾಯಿ ನಾಡಿಗೆ ಆಗಮಿಸಿದ್ದಾರೆ. ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿದ್ದಾರೆ. ಡಿಎನ್ ಎ ಪರೀಕ್ಷೆ ನಂತರ ಗೀತಾ ಅವರನ್ನು ತಂದೆ ತಾಯಿ ಅವರಿಗೆ ರಕ್ಷಣೆಗೆ ಒದಗಿಸಲಾಗುವುದು ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
11 ವರ್ಷದ ಗೀತಾ ಸಂಜೋತಾ ಎಕ್ಸ್‌ಪ್ರೆಸ್‌ನಲ್ಲಿ ಆಕಸ್ಮಿಕವಾಗಿ ಪಾಕಿಸ್ತಾನಕ್ಕೆ ತೆರಳಿದ್ದಳು. ಆಕೆಯನ್ನು ಸೇನಾಧಿಕಾರಿಯೊಬ್ಬರು ಪಾಕಿಸ್ತಾನದ ಎನ್‌ಜಿಒ ಒಂದಕ್ಕೆ ಸೇರಿಸಿದ್ದರು. ಇದೀಗ ದಶಕದ ನಂತರ ತವರಿಗೆ ಮರಳಿದ್ದಾರೆ.[ಬಾಹ್ಯಾಕಾಶದಿಂದ ಕಂಡ ಭಾರತ-ಪಾಕಿಸ್ತಾನ ಗಡಿಭಾಗ]
ಗೀತಾ ಅವರಿಗೆ ಪಾಕಿಸ್ತಾನದಲ್ಲಿ ರಕ್ಷಣೆ ನೀಡಿರುವ ಎಧಿ ಫೌಂಡೇಶನ್‌ನ ನಾಲ್ವರು ಆಗಮಿಸಿದ್ದರು. ಅಲ್ಲದೆ ಪಾಕಿಸ್ತಾನದ ರಾಜತಾಂತ್ರಿಕ ಅಧಿಕಾರಿಗಳು ಇದ್ದರು. ನವದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿ ಗೀತಾಳನ್ನು ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು. ['ಭಜರಂಗಿ ಭಾಯ್ ಜಾನ್' ಕತೆ ಕೇಳ್ಕೊಂಡು ಬನ್ನಿ]

ಕುಟುಂಬದವರನ್ನು ಗುರುತಿಸದ ಗೀತಾ:
ಈ ಮಧ್ಯೆ, ಗೀತಾಳ ತಂದೆ ಎನ್ನಲಾಗಿರುವ ಬಿಹಾರ ಮೂಲದ ಜನಾರ್ದನ ಮೆಹ್ತೋ ನವದೆಹಲಿಗೆ ಆಗಮಿಸಿಸದ್ದರು. ಆದರೆ ಗೀತಾ ಇವರನ್ನು ಗುರುತಿಸಿಲ್ಲ. ಈ ಹಿನ್ನೆಲೆಯಲ್ಲಿ ಡಿಎನ್‌ಎ ಪರೀಕ್ಷೆ ಮಾಡಲಾಗುವುದು ಎಂದು ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ. ನಡೆಸಲಾಗುವುದು. ಒಂದು ವೇಳೆ ಡಿಎನ್ ಎ ಪರೀಕ್ಷೆ ಯಲ್ಲಿ ಸಂಬಂಧ ದೃಢಪಡದಿದ್ದರೆ ಎನ್ ಜಿಒ ಸಂಸ್ಥೆಯೊಂದು ಗೀತಾ ಅವರ ಹೊಣೆ ಹೊರಲಿದೆ.[ಸೇನಾ ಬಲಾಢ್ಯತೆಯಲ್ಲಿ ಭಾರತಕ್ಕೆ 5 ನೇ ಸ್ಥಾನ]
ಭಾರತ ಮತ್ತು ಪಾಕಿಸ್ತಾನದ ನಡುವಣ ದ್ವಿಪಕ್ಷೀಯ ಸಂಬಂಧಗಳ ವೃದ್ಧಿಗೆ ಇಂಥ ಬೆಳವಣಿಗೆಗಳು ನಾಂದಿಯಾಗಬಹುದು. ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ವೇದಿಕೆಯಾಗಬಹುದು ಎಂದು ಹೇಳಲಾಗಿದೆ.
Geeta lands in New Delhi from Karachi.( Pic source: MEA) pic.twitter.com/80mHRJAXHP
— ANI (@ANI_news) October 26, 2015
गीता - भारत की बेटी का भारत में स्वागत. Geeta - Welcome home our daughter.
— Sushma Swaraj (@SushmaSwaraj) October 26, 2015