Jeet Adani Wedding: ಪ್ರತಿ ವರ್ಷ 500 ದಿವ್ಯಾಂಗ ಮಹಿಳೆಯರಿಗೆ ತಲಾ ₹10 ಲಕ್ಷ ಸಹಾಯ ಮಾಡಲಿರುವ ಅದಾನಿ ಕುಟುಂಬ

ಬಿಲಿಯನೇರ್ ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರ ಕಿರಿಯ ಪುತ್ರ ಜೀತ್ ಅದಾನಿಯವರ ಮದುವೆ ಫೆಬ್ರವರಿ 7 ರಂದು ನಡೆಯಲಿದ್ದು ಈಗಾಗಲೇ ವಿವಾಹ ಕಾರ್ಯಕ್ರಮಗಳು ಆರಂಭವಾಗಿವೆ. ಮಗನ ಮದುವೆ ಅದ್ದೂರಿಯಾಗಿ ಮಾಡಲ್ಲ, ಸರಳವಾಗಿ ಸಂಪ್ರದಾಯದಂತೆ ಮಾಡುತ್ತೇವೆ ಎಂದಿರುವ ಗೌತಮ್ ಅದಾನಿ ಕುಟುಂಬ, ಮದುವೆಗೆ ಮುನ್ನ ಮಹತ್ಕಾರ್ಯವೊಂದಕ್ಕೆ ಮುಂದಾಗಿದೆ.

ಜೀತ್ ಅದಾನಿ ತಮ್ಮ ಮದುವೆಗೆ ಮುಂಚಿತವಾಗಿ 'ಮಂಗಳ ಸೇವಾ' ಎನ್ನುವ ಮಹತ್ಕಾರ್ಯ ಮಾಡುವುದಾಗಿ ಘೋಷಿಸಿದ್ದಾರೆ. ಪ್ರತಿ ವರ್ಷ 500 ವಿಕಲಚೇತನ ನವವಿವಾಹಿತ ಮಹಿಳೆಯರಿಗೆ ತಲಾ 10 ಲಕ್ಷ ರೂಪಾಯಿಗಳ ಆರ್ಥಿಕ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.

gautam adani family supports newly married women with disabilities

ತಮ್ಮ ವಿವಾಹಕ್ಕೆ ಎರಡು ದಿನಗಳಿರುವಾಗ ಜೀತ್ ಅದಾನಿ ತಮ್ಮ ಮನೆಯಲ್ಲಿ 21 ನವವಿವಾಹಿತ ದಿವ್ಯಾಂಗ ಮಹಿಳೆಯರು ಮತ್ತು ಅವರ ಸಂಗಾತಿಯನ್ನು ಭೇಟಿಯಾಗಿ ಸಹಾಯಧನ ನೀಡುವ ಮೂಲಕ 'ಮಂಗಳ ಸೇವಾ' ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಾರೆ. ಫೆಬ್ರವರಿ 7ರಂದು ಶುಕ್ರವಾರ ಗುಜರಾತ್‌ನ ಅಹಮದಾಬಾದ್‌ನಲ್ಲಿ ಜೀತ್ ಅದಾನಿ ದಿವಾ ಶಾ ಅವರನ್ನು ಮದುವೆಯಾಗಲಿದ್ದಾರೆ.

ಮಗನ ಕಾರ್ಯಕ್ಕೆ ಗೌತಮ್ ಅದಾನಿ ಸಂತಸ

ತಮ್ಮ ಮಗನ ಮಹತ್ಕಾರ್ಯದ ಬಗ್ಗೆ ಗೌತಮ್ ಅದಾನಿ ಸಂತಸ ವ್ಯಕ್ತಪಡಿಸಿದ್ದಾರೆ. ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, "'ಸೇವೆಯೇ ಸಾಧನೆ, ಸೇವೆಯೆ ಪ್ರಾರ್ಥನೆ, ಸೇವೆಯೆ ಪರಮಾತ್ಮ' ಎನ್ನುವ ಸಾಮಾಜಿಕ ತತ್ವಕ್ಕೆ ಅನುಗುಣವಾಗಿ, ತಮ್ಮ ಮಗ ಜೀತ್ ಮತ್ತು ಸೊಸೆ ದಿವಾ ಪ್ರಯಾಣದ ಮೊದಲ ಅಧ್ಯಾಯವನ್ನು ಮಹತ್ತರ ಸಂಕಲ್ಪದೊಂದಿಗೆ ಪ್ರಾರಂಭಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.

ಜೀತ್ ಅದಾನಿ ಮತ್ತು ದಿವಾ ಶಾ 500 ನವವಿವಾಹಿತ ದಿವ್ಯಾಂಗ ಮಹಿಳೆಯರಿಗೆ ತಲಾ ಲಕ್ಷ ರೂಪಾಯಿಗಳ ನೆರವು ನೀಡುವ ಮೂಲಕ 'ಮಂಗಳ ಸೇವೆ'ಗೆ ಪ್ರತಿಜ್ಞೆ ಮಾಡಿದ್ದಾರೆ ಎಂದು ಗೌತಮ್ ಅದಾನಿ ಹೇಳಿದ್ದಾರೆ.

ಈ ಸೇವೆಯಿಂದಾಗಿ ಅನೇಕ ದಿವ್ಯಾಂಗ ಹೆಣ್ಣುಮಕ್ಕಳು ಮತ್ತು ಅವರ ಕುಟುಂಬಗಳು ಸಂತೋಷದಿಂದ ಮತ್ತು ಘನತೆಯ ಜೀವನ ನಡೆಸಲು ಸಹಾಯವಾಗುತ್ತದೆ. ಇದೇ ರೀತಿಯ ಸೇವಾ ಕಾರ್ಯಗಳನ್ನು ಮುಂದುವರೆಸಲಿ ಎಂದು ಜೀತ್ ಮತ್ತು ದಿವಾ ಅವರಿಗೆ ಅದಾನಿ ಆಶೀರ್ವದಿಸಿದ್ದಾರೆ.

ಜೀತ್ ಅದಾನಿ ಪ್ರಸ್ತುತ ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್‌ನ ನಿರ್ದೇಶಕರಾಗಿದ್ದಾರೆ. ಇದು ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ಮೂಲಸೌಕರ್ಯ ಕಂಪನಿಯಾಗಿದ್ದು, ಪ್ರಸ್ತುತ ಎಂಟು ವಿಮಾನ ನಿಲ್ದಾಣಗಳನ್ನು ನಿರ್ವಹಣೆ ಮತ್ತು ಅಭಿವೃದ್ಧಿಯನ್ನು ನಿರ್ವಹಣೆ ಮಾಡುತ್ತಿದೆ. ವಿಮಾನ ನಿಲ್ದಾಣಗಳ ವ್ಯವಹಾರದ ಹೊರತಾಗಿಯೂ ಜೀತ್ ಅದಾನಿ, ಅದಾನಿ ಗ್ರೂಪ್‌ನ ರಕ್ಷಣಾ, ಪೆಟ್ರೋಕೆಮಿಕಲ್ಸ್ ಮತ್ತು ತಾಮ್ರ ವ್ಯವಹಾರಗಳನ್ನು ಕೂಡ ನೋಡಿಕೊಳ್ಳುತ್ತಾರೆ. ಅದಾನಿ ಗ್ರೂಪ್‌ನ ಡಿಜಿಟಲ್ ರೂಪಾಂತರದ ಉಸ್ತುವಾರಿ ಕೂಡ ಅವರೇ ಆಗಿದ್ದಾರೆ.

ಗುಜರಾತ್‌ನ ಮುಂದ್ರಾದಲ್ಲಿನ ಒಂದು ಸಣ್ಣ ಗ್ರಾಮೀಣ ಯೋಜನೆಯಿಂದ ಅದಾನಿ ಫೌಂಡೇಶನ್ ಅನ್ನು ಬದಲಾವಣೆಯ ಜಾಗತಿಕ ಶಕ್ತಿಯಾಗಿ ಬೆಳೆಸಿದ ಅವರ ತಾಯಿ ಡಾ. ಪ್ರೀತಿ ಅಂಬಾನಿ ಅವರಿಂದ ಪ್ರೇರಿತರಾಗಿರುವ ಜೀತ್ ಅದಾನಿ ಅಂಗವಿಕಲರ ಬದುಕಿನ ಆಶಾಕಿರಣವಾಗಲು ಮುಂದಾಗಿದ್ದಾರೆ. ಅಮ್ಮನ ದಾರಿಯಲ್ಲಿ ನಡೆಯಲು ನಿರ್ಧರಿಸಿರುವ ಅವರು ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಾಜಸೇವಾ ಕಾರ್ಯಗಳನ್ನು ಮಾಡಲು ಆಸಕ್ತಿ ಹೊಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+