• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗರಿಬೀ ಹಠಾವೋ ಘೋಷಣೆಯಾಗೇ ಉಳಿದಿದೆ: ಮೋದಿ

|

ವಾರಣಾಸಿ, ಸೆಪ್ಟೆಂಬರ್. 18: ಗರೀಬಿ ಹಠಾವೋ ಘೋಷಣೆ ಇಂದಿಗೂ ಘೋಷಣೆಯಾಗಿಯೇ ಉಳಿದಿರುವುದು ದೇಶದ ದುರ್ದೈವ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಿಷಾದ ವ್ಯಕ್ತಪಡಿಸಿದರು.

ವಾರಣಾಸಿಗೆ ಭೇಟಿನೀಡಿ ಮಾತನಾಡಿದ ಮೋದಿ, ದಶಕಗಳ ಕಾಲದಿಂದ ಘೋಷಣೆ ಹಾಗೆ ಇದೆ. ಆದರೆ ಬಡವರು ಇನ್ನು ಖಾಲಿ ಹೊಟ್ಟೆಯಲ್ಲೇ ಇದ್ದಾರೆ ಎಂದು ಹೇಳಿದರು. ಗರೀಬಿ ಹಠಾವೋ ಎಂಬ ಘೋಷ ವಾಕ್ಯವನ್ನು ರಾಜಕೀಯ ಕಾರಣಕ್ಕೆ ಬಳಸಿಕೊಳ್ಳಲಾಯಿತೇ ವಿನಃ ಬಡವರ ಜೀವನ ಸುಧಾರಣೆಗೆ ಯಾವ ಕ್ರಮವನ್ನು ತೆಗೆದೊಕೊಳ್ಳಲಿಲ್ಲ ಎಂದು ಮೋದಿ ದೂರಿದರು.

ವಾರಣಾಸಿಯ ರಿಕ್ಷಾ ಚಾಲಕರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿಮ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. 50 ವರ್ಷಗಳಲ್ಲಿ ಸಾಧನೆ ಮಾಡಲಾಗದ್ದನ್ನು 50 ತಿಂಗಳಲ್ಲಿ ಮಾಡಿ ತೋರಿಸುತ್ತೇವೆ ಎಂದು ಹೇಳಿದರು. ದೇಶದ ಸ್ಥಿತಿಯನ್ನು ಸುಧಾರಿಸಲು ಕೇಂದ್ರ ಸರ್ಕಾರ ಸದಾ ಬದ್ಧವಾಗಿದೆ. ಜನರ ಅಗತ್ಯವನ್ನು ಮನಗಂಡು ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು. ಮೋದಿ ಭಾಷಣದ ಸಂಪೂರ್ಣ ಪಾಠವನ್ನು ಮುಂದಿನ ಸ್ಲೈಡ್ ಗಳಲ್ಲಿ ನೋಡಿ....

ರಿಕ್ಷಾ ವಿತರಣೆ

ರಿಕ್ಷಾ ವಿತರಣೆ

ಫಲಾನುಭವಿಗಳಿಗೆ ರಿಕ್ಷಾ ವಿತರಣೆ ಮಾಡಿದ ಮೋದಿ ಜನರ ಜೀವನದಲ್ಲಿ ಮೂಲಭೂತ ಬದಲಾವಣೆ ತರಲು ಕೇಂದ್ರ ಸರ್ಕಾರ ಸದಾ ಸಿದ್ಧವಿದ್ದು ಅದಕ್ಕಾಗಿ ಶ್ರಮಿಸುತ್ತಿದೆ ಎಂದು ತಿಳಿಸಿದರು.

ಎಲ್ಲರಿಗೂ ಬ್ಯಾಂಕ್ ಖಾತೆ

ಎಲ್ಲರಿಗೂ ಬ್ಯಾಂಕ್ ಖಾತೆ

ಜನಧನ ಯೋಜನೆಯಿಂದ 18 ಕೋಟಿಗೂ ಅಧಿಕ ಜನ ಬ್ಯಾಂಕ್ ಖಾತೆ ಪಡೆದುಕೊಂಡಿದ್ದಾರೆ. ಇದು ಬೆದಲಾವಣೆಯ ಪ್ರತೀಕ ಎಂದು ಹೇಳಿದರು.

ಬರಮಾಡಿಕೊಂಡ ಅಖಿಲೇಶ್ ಯಾದವ್

ಬರಮಾಡಿಕೊಂಡ ಅಖಿಲೇಶ್ ಯಾದವ್

ಪ್ರಧಾನಿ ನರೇಂದ್ರ ಮೋದಿ ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಬರಮಾಡಿಕೊಂಡರು.

ನಿಮ್ಮೊಂದಿಗಿದ್ದೇವೆ

ನಿಮ್ಮೊಂದಿಗಿದ್ದೇವೆ

ಫಲಾನುಭವಿಗಳಿಗೆ ಇ ರಿಕ್ಷಾ ಮತ್ತು ಪೆಡಲ್ ರಿಕ್ಷಾ ಗಳನ್ನು ವಿತರಿಸಿದ ನರೇಂದ್ರ ಮೋದಿ ಅವರೊಂದಿಗೆ ಬೆರೆತು ಮಾತನಾಡಿದರು.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime Minister Narendra Modi on Friday said that 'Garibi Hatao' (remove poverty) had sadly remained a mere slogan for the past many decades and that efforts for a turnaround in the lives of the poor had failed to bear fruit. "Chunav ke dauran gareebi ki maala japte rehna ek aam baat hai (it is normal to speak of poverty during poll campaigning)," he said while addressing a gathering of rickshaw pullers in his Varanasi parliamentary constituency.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more