ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ಯಾಂಬಿಯಾ ಕೆಮ್ಮು ಸಿರಪ್ ಸಾವು ಕೇಸ್: ಮೇಡನ್ ಫಾರ್ಮಾದಲ್ಲಿ ಲೋಪಗಳು ಪತ್ತೆ

|
Google Oneindia Kannada News

ಆಫ್ರಿಕಾದ ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವಿನ ನಂತರ ಹರಿಯಾಣದ ಔಷಧೀಯ ಸಂಸ್ಥೆಯಾದ ಮೇಡನ್ ಫಾರ್ಮಾ ವಿವಾದದ ಕೇಂದ್ರಬಿಂದುವಾಗಿದೆ. ಮಕ್ಕಳ ಸಾವಿಗೆ ಭಾರತೀಯ ಸಂಸ್ಥೆಯಿಂದ ರಫ್ತು ಮಾಡಿದ ಕೆಮ್ಮು ಸಿರಪ್‌ಗೂ ಸಂಬಂಧವಿದೆ ಎಂದು ಆರೋಪಿಸಲಾಗಿದೆ. ಭಾರತದ ನಾಲ್ಕು ಕೆಮ್ಮಿನ ಸಿರಪ್‌ಗಳನ್ನು ಡಬ್ಲ್ಯುಎಚ್‌ಒ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ ಬಳಿಕ ಇದು ಬೆಳಕಿಗೆ ಬಂದಿದೆ. ಆರೋಪದ ಬೆನ್ನಲ್ಲೆ ಹರಿಯಾಣ ಡ್ರಗ್ ರೆಗ್ಯುಲೇಟರ್ ಔಷಧೀಯ ಕಂಪನಿಯ ಉತ್ಪಾದನಾದ ತಪಾಸಣೆ ನಡೆಸಿದೆ. ಈ ವೇಳೆ ಮೇಡನ್ ಫಾರ್ಮಾದ ಘಟಕದಲ್ಲಿ ಪ್ರಮುಖ ಲೋಪವಿರುವುದು ಪತ್ತೆಯಾಗಿದೆ.

ಹರಿಯಾಣ ರಾಜ್ಯದ ಔಷಧ ಅಧಿಕಾರಿಗಳು ಸೋನೆಪತ್‌ನಲ್ಲಿನ ಮೇಡನ್ ಫಾರ್ಮಾದ ಉತ್ಪಾದನಾ ಘಟಕದ ತಪಾಸಣೆಯ ಸಮಯದಲ್ಲಿ ಪತ್ತೆಯಾದ ಗಂಭೀರ ಸಮಸ್ಯೆಗಳನ್ನು ಪಟ್ಟಿ ಮಾಡಿದ್ದಾರೆ. ಅಧಿಕಾರಿಗಳು ತಪಾಸಣೆಯ ವೇಳೆ ಔಷಧಗಳ ಶೆಲ್ಫ್ ಲೈಫ್ ಸೇರಿದಂತೆ ಹಲವು ವ್ಯತ್ಯಾಸಗಳನ್ನು ಪತ್ತೆ ಮಾಡಿದ್ದಾರೆ.

ಪತ್ತೆಯಾದ ಹಲವು ಲೋಪಗಳು ಇಲ್ಲಿವೆ:

ಜೊತೆಗೆ ರಾಜ್ಯ ಔಷಧ ನಿಯಂತ್ರಕರು ಕಚ್ಚಾ ವಸ್ತುಗಳ ಗುಣಮಟ್ಟ ಪರೀಕ್ಷೆಯನ್ನು ಹೇಗೆ ಮಾಡಿಲ್ಲ ಎಂದು ಫ್ಲ್ಯಾಗ್ ಮಾಡಿದ್ದಾರೆ. WHO ನಿಂದ ಎಚ್ಚರಿಕೆ ನೀಡಲಾದ ನಾಲ್ಕು ಕೆಮ್ಮು ಸಿರಪ್‌ಗಳಿಗೆ ಮೇಡನ್ ಫಾರ್ಮಾಸ್ಯುಟಿಕಲ್ಸ್ ಪ್ರಕ್ರಿಯೆ ಮೌಲ್ಯೀಕರಣ ಮತ್ತು ವಿಶ್ಲೇಷಣಾತ್ಮಕ ವಿಧಾನದ ಮೌಲ್ಯೀಕರಣವನ್ನು ಮಾಡಿಲ್ಲ ಎಂದು ಅಧಿಕಾರಿಗಳು ನೋಟಿಸ್‌ನಲ್ಲಿ ತಿಳಿಸಿದ್ದಾರೆ.

Gambia Cough Syrup Death Case: Deficiencies found at Maiden Pharmas Haryana unit

ಔಷಧಗಳ ಶೆಲ್ಫ್ ಜೀವಿತಾವಧಿಯು ಕಚ್ಚಾ ವಸ್ತುಗಳ ಮುಕ್ತಾಯ ದಿನಾಂಕಕ್ಕಿಂತ ಹೆಚ್ಚು ಸಮಯವನ್ನು ನಿಗದಿಪಡಿಸಲಾಗಿದೆ. ಸೆಪ್ಟೆಂಬರ್ 2021 ರ ಉತ್ಪಾದನಾ ದಿನಾಂಕ ಮತ್ತು ಸೆಪ್ಟೆಂಬರ್ 2023 ರ ಮುಕ್ತಾಯ ದಿನಾಂಕವನ್ನು ಹೊಂದಿರುವ ಪ್ರೊಪಿಲೀನ್ ಗ್ಲೈಕಾಲ್ (ಬ್ಯಾಚ್ ಸಂಖ್ಯೆ E009844) ಅನ್ನು ಪ್ರೊಮೆಥಾಜಿನ್ ಓರಲ್ ಸೊಲ್ಯೂಷನ್, ಕೋಫೆಕ್ಸ್‌ಮಾಲಿನ್ ಬೇಬಿ ಕೆಮ್ಮಿನ ಸಿರಪ್ ಮತ್ತು ಮ್ಯಾಗ್ರಿಪ್ ಹೊಂದಿರುವ ಸಿರಪ್ ತಯಾರಿಕೆಯಲ್ಲಿ ಬಳಸಲಾಗಿದೆ ಎಂದು ಹರಿಯಾಣ ಎಫ್‌ಡಿಎ ನೋಟಿಸ್‌ನಲ್ಲಿ ತಿಳಿಸಿದೆ. ಉತ್ಪನ್ನದ ಅವಧಿಯು ನವೆಂಬರ್ 2024 ರಲ್ಲಿ ಮುಕ್ತಾಯಗೊಳ್ಳುತ್ತದೆ. ಇದು ಉತ್ಪನ್ನದ ಜೀವಿತಾವಧಿಯು ಕಚ್ಚಾ ವಸ್ತುಗಳಿಗಿಂತ ಹೆಚ್ಚು ಎಂದು ತೋರಿಸುತ್ತದೆ.

ವಿವಾದಾತ್ಮಕ ಕೆಮ್ಮಿನ ಸಿರಪ್‌ಗಳ ತಯಾರಿಕೆಯಲ್ಲಿ ಬಳಸಲಾದ ಪ್ರೊಪಿಲೀನ್ ಗ್ಲೈಕೋಲ್ ಮತ್ತು ಸೋರ್ಬಿಟೋಲ್ ದ್ರಾವಣದ ಬ್ಯಾಚ್ ಸಂಖ್ಯೆಗಳು ವಿಶ್ಲೇಷಣೆಯ ಪ್ರಮಾಣಪತ್ರ (CoA) ವರದಿಯಲ್ಲಿ ಕಂಡುಬಂದಿಲ್ಲ ಎಂದು ರಾಜ್ಯ ಎಫ್‌ಡಿಎ ಸೂಚನೆ ತೋರಿಸುತ್ತದೆ.

Gambia Cough Syrup Death Case: Deficiencies found at Maiden Pharmas Haryana unit

ಉತ್ಪಾದನಾ ಘಟಕದಲ್ಲಿ ನಡೆಸಲಾದ ತಪಾಸಣೆಯ ಸಂದರ್ಭದಲ್ಲಿ ಕೆಮ್ಮು ಸಿರಪ್‌ಗಳು ಸ್ಟೆಬಿಲಿಟಿ ಚೇಂಬರ್‌ನಲ್ಲಿ ಕಂಡುಬಂದಿಲ್ಲ ಎಂದು ಅಧಿಕಾರಿಗಳು ಫ್ಲ್ಯಾಗ್ ಮಾಡಿದ್ದಾರೆ. ಸೋನೆಪತ್‌ನಲ್ಲಿನ ಔಷಧೀಯ ಸಂಸ್ಥೆಯ ಉತ್ಪಾದನಾ ಘಟಕದಲ್ಲಿ ಕಾಣೆಯಾದ ಲಾಗ್‌ಬುಕ್ ಅನ್ನು ಅಧಿಕಾರಿಗಳು ಫ್ಲ್ಯಾಗ್ ಮಾಡಿದ್ದಾರೆ. ರಾಜ್ಯ ನಿಯಂತ್ರಕರು ತಮ್ಮ ಪರವಾನಗಿಯನ್ನು ಏಕೆ ರದ್ದುಗೊಳಿಸಬಾರದು ಎಂಬುದಕ್ಕೆ ಪ್ರತಿಕ್ರಿಯಿಸಲು ಔಷಧೀಯ ಸಂಸ್ಥೆಗೆ ಏಳು ದಿನಗಳ ಕಾಲಾವಕಾಶ ನೀಡಿದ್ದಾರೆ.

English summary
Haryana drug regulator has inspected the company's production following allegations against Maiden Pharma, a Haryana-based pharmaceutical company, after the death of 66 children in Gambia, Africa. This time a major lapse was discovered in Maiden Pharma's unit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X