ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಶೃಂಗಸಭೆ ಮುಕ್ತಾಯ, ಮುಂದೆ ಎಲ್ಲಿ?
ಭಾರತದ ಶಕ್ತಿಯನ್ನ ಇಡೀ ಜಗತ್ತಿಗೆ ತೋರಿಸಿದ ಮತ್ತು ವಿಶ್ವ ನಾಯಕರ ಗಮನ ಸೆಳೆದಿದ್ದ ಜಿ20 ಶೃಂಗಸಭೆ ಮುಕ್ತಾಯವಾಗಿದೆ. ಶೃಂಗಸಭೆ ಜೊತೆ ವಿವಿಧ ದೇಶಗಳೊಟ್ಟಿಗೆ ದ್ವಿಪಕ್ಷೀಯ ಮಾತುಕತೆ ಕೂಡ ನಡೆದಿತ್ತು. ಅದ್ರಲ್ಲೂ ಅಮೆರಿಕ ಮತ್ತು ಸೌದಿ ಜತೆಗಿನ ಚರ್ಚೆ ದೊಡ್ಡ ಯಶಸ್ಸು ತಂದುಕೊಟ್ಟಿದೆ. ಇಷ್ಟೆಲ್ಲಾ ಗಮನ ಸೆಳೆದ ಹಾಗೂ ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆ ಮುಕ್ತಾಯವಾಗಿದೆ. ಹಾಗಾದರೆ ಮುಂದೆ ಜಿ20 ಶೃಂಗಸಭೆ ಎಲ್ಲಿ ನಡೆಯುತ್ತೆ?
ಅಷ್ಟಕ್ಕೂ ಭಾರತದ ನೇತೃತ್ವದಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆ ಮುಕ್ತಾಯವಾಗಿದ್ರೂ, ಭಾರತದ ಬಳಿಯೇ ಜಿ20 ಶೃಂಗಸಭೆ ಅಧ್ಯಕ್ಷತೆ ಇರಲಿದೆ. ಹೀಗಾಗಿ ನವೆಂಬರ್‌ನಲ್ಲಿ ಜಿ20ಯ ಒಕ್ಕೂಟದ ದೇಶಗಳ ಜತೆ ವರ್ಚ್ಯುವಲ್ ಸಭೆ ನಡೆಯಲಿದೆ ಎಂದು ಪ್ರಧಾನಿ ಮೋದಿ ಅವರು ತಿಳಿಸಿದ್ದಾರೆ. ಹಾಗೇ ಮುಂದಿನ ವರ್ಷ ಬ್ರೆಜಿಲ್‌ನಲ್ಲಿ ಜಿ20 ಸಮ್ಮೇಳನ ನಡೆಯಲಿದ್ದು, ಜಿ20 ಅಧ್ಯಕ್ಷ ಸ್ಥಾನವನ್ನ ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಇನಾಸಿಯೊ ಲುಲಾ ಡ ಸಿಲ್ವ ಅವರಿಗೆ ಪ್ರಧಾನಿ ಮೋದಿ ಅವರು ಹಸ್ತಾಂತರ ಮಾಡಿದ್ದಾರೆ.

ಭಾರತಕ್ಕೆ ಸಿಕ್ಕಿದೆ ಭರ್ಜರಿ ಯಶಸ್ಸು!
ಜಿ20 ಶೃಂಗಸಭೆ ನೇತೃತ್ವ ವಹಿಸಿದ್ದ ಭಾರತಕ್ಕೆ ದೊಡ್ಡ ಗೆಲುವು ಸಿಕ್ಕಂತಾಗಿದೆ. ಅದರಲ್ಲೂ ಅಮೆರಿಕ ಜತೆಗಿನ ದ್ವಿಪಕ್ಷೀಯ ಮಾತುಕತೆ ಭಾರಿ ಸಕ್ಸಸ್ ಕೊಟ್ಟಿದೆ. ಸೆಪ್ಟೆಂಬರ್ 8ರಂದು ಪ್ರಧಾನಿ ಮೋದಿ ಮತ್ತು ಬೈಡನ್ ಅವರು ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಅಮೆರಿಕ ಅಧ್ಯಕ್ಷ ಬೈಡನ್ ನವದೆಹಲಿಗೆ ಬಂದಿಳಿದ ತಕ್ಷಣ ನೇರವಾಗಿ ಪಿಎಂ ಮೋದಿ ಅವರ ನಿವಾಸಕ್ಕೆ ತೆರಳಿದ್ದರು. ಆ ನಂತರ ಉಭಯ ನಾಯಕರು ಸುಮಾರು 50 ನಿಮಿಷ ಚರ್ಚೆ ನಡೆಸಿದ್ದರು.
ಈ ವೇಳೆ ರಕ್ಷಣಾ ಪಾಲುದಾರಿಕೆ ಮತ್ತಷ್ಟು ಸದೃಢಗೊಳಿಸಲು ಪ್ರಧಾನಿ ಮೋದಿ ಮತ್ತು ಜೋ ಒಪ್ಪಿಗೆ ನೀಡಿದ್ದರು. ಇದರ ಜೊತೆಗೆ ಡ್ರೋನ್ ಸೇರಿ ಜೆಟ್ ಎಂಜಿನ್‌ಗಳ ನಿರ್ಮಾಣ ಯೋಜನೆ ಜಂಟಿಯಾಗಿ ಅಭಿವೃದ್ಧಿಪಡಿಸುವ ಕ್ರಮಕ್ಕೆ ಕೂಡ ಪ್ರಧಾನಿ ಮೋದಿ & ಬೈಡನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಹಾಗೇ ಭಾರತ ಮತ್ತೊಂದು ಮೈಲಿಗಲ್ಲನ್ನ ಸಾಧಿಸುವಲ್ಲೂ ಯಶಸ್ವಿಯಾಗಿತ್ತು. ಜಿ20 ಶೃಂಗಸಭೆಯಲ್ಲಿ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಚರ್ಚೆ ಸಕ್ಸಸ್ ಆಗಿತ್ತು. ಹೀಗೆ ಭಾರತ ಜಾಗತಿಕವಾಗಿ ಬಲಾಢ್ಯವಾಗಿ ಬೆಳೆಯುತ್ತಿರುವ ಮುನ್ಸೂಚನೆ ಕೂಡ ಸಿಕ್ಕಂತಾಗಿತ್ತು.

ಆಫ್ರಿಕಾ ಒಕ್ಕೂಟಕ್ಕೆ ದೊಡ್ಡ ಗೆಲುವು
ಭಾರತದ ಒತ್ತಾಸೆ & ಭಾರತ ಸರ್ಕಾರದ ಅದ್ಭುತ ನಡೆಯಿಂದಾಗಿ ಆಫ್ರಿಕಾ ಒಕ್ಕೂಟ ರಾಷ್ಟ್ರಗಳಿಗೆ ಜಿ20 ಶೃಂಗಸಭೆ ಖಾಯಂ ಸದಸ್ಯತ್ವ ಸಿಕ್ಕಿದೆ. ಹೀಗೆ ಸದಸ್ಯ ಸ್ಥಾನ ಕೊಡಿಸಲು ಭಾರತ ಸಾಕಷ್ಟು ಕಷ್ಟಪಟ್ಟಿತ್ತು ಎಂಬುದು ಇಲ್ಲಿ ಗಮನಾರ್ಹ. ಆಫ್ರಿಕಾ ಒಕ್ಕೂಟವನ್ನ ಜಿ20ಗೆ ಸೇರಿಸುವ ಕುರಿತು ಇತರ ಸದಸ್ಯ ರಾಷ್ಟ್ರಗಳ ಮನವೊಲಿಸಲು ಭಾರತ ಸಾಕಷ್ಟು ಪ್ರಯತ್ನಪಟ್ಟಿದೆ. ಅಲ್ಲದೆ ಖುದ್ದು ಭಾರತ ಜಿ20 ಸದಸ್ಯ ರಾಷ್ಟ್ರಗಳ ನಾಯಕರ ಜತೆಗೆ ಮಾತನಾಡಿತ್ತು ಎನ್ನಲಾಗಿತ್ತು. ಇಷ್ಟೆಲ್ಲಾ ಬೆಳವಣಿಗೆ ನಡುವೆ ಆಫ್ರಿಕಾ ಒಕ್ಕೂಟಕ್ಕೂ ಜಿ20 ಶೃಂಗಸಭೆಯಲ್ಲಿ ಸ್ಥಾನ ಸಿಕ್ಕಂತಾಗಿದೆ.
ಚೀನಾ & ರಷ್ಯಾ ಅಧ್ಯಕ್ಷರು ಬರಲಿಲ್ಲ
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಗೈರು ಹಾಜರಿ ನಡುವೆ ನಡೆದ ಜಿ20 ಶೃಂಗಸಭೆ ಮುಕ್ತಾಯವಾಗಿದೆ. ಹಾಗೇ ಮುಂದಿನ ಸಭೆಯನ್ನ ಬ್ರೆಜಿಲ್‌ನಲ್ಲಿ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಪ್ರಧಾನಿ ಮೋದಿ ಅವರು ಬ್ರೆಜಿಲ್‌ನ ಅಧ್ಯಕ್ಷರಿಗೆ ಜಿ20 ಶೃಂಗಸಭೆ ಅಧ್ಯಕ್ಷತೆ ಹಸ್ತಾಂತರ ಮಾಡಿದ್ದಾರೆ. ಚೀನಾ ಅಧ್ಯಕ್ಷರು ಜಿ20 ಶೃಂಗಸಭೆಗೆ ಬಾರದೆ ಇರುವ ಬಗ್ಗೆ ಸಾಕಷ್ಟು ಚರ್ಚೆ ಕೂಡ ನಡೆದಿತ್ತು.
ಒಟ್ನಲ್ಲಿ ಹಲವು ವಿಶೇಷತೆಗೆ ಕಾರಣವಾಗಿದ್ದ 2023ರ ಜಿ20 ಶೃಂಗಸಭೆ ಮುಕ್ತಾಯವಾಗಿದೆ. ಈ ಮೂಲಕ ಭಾರತ ಅತ್ಯಂತ ಯಶಸ್ವಿಯಾಗಿ ಜಿ20 ಶೃಂಗಸಭೆ ಗೆಲ್ಲಿಸಿದೆ. ಹಾಗೇ ವಿಶ್ವದ ವಿವಿಧ ದೇಶಗಳ ಗಣ್ಯರು ಕೂಡ ಭಾರತದ ಜೊತೆ ಆರ್ಥಿಕ ಸಂಬಂಧ ವೃದ್ಧಿಗೆ ಸಾಕಷ್ಟು ಕಾಳಜಿ ತೋರಿದ್ದಾರೆ. ಅಮೆರಿಕ, ಬ್ರಿಟನ್ ಸೇರಿದಂತೆ ಯುರೋಪ್ ಒಕ್ಕೂಟದ ರಾಷ್ಟ್ರಗಳು ಕೂಡ ಭಾರತದ ಜತೆ ಸಂಬಂಧ ವೃದ್ಧಿಗೆ ಮುಂದಾಗಲು ಈ ಶೃಂಗಸಭೆ ವೇದಿಕೆಯಾಗಿತ್ತು.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications