• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಬಕಾರಿ ಸುಂಕ ಇಳಿಸಿದ ಬಳಿಕ ಪ್ರಮುಖ ನಗರಗಳಲ್ಲಿ ಇಂಧನದ ಬೆಲೆ ಎಷ್ಟಿದೆ?

|

ಬೆಂಗಳೂರು, ಅಕ್ಟೋಬರ್ 05: ನಿನ್ನೆ (ಅಕ್ಟೋಬರ್ 04) ತಾನೆ ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಮೇಲೆ ಅಬಕಾರಿ ಸುಂಕ ಇಳಿಸಿದ ಕಾರಣ 2.50 ರೂಪಾಯಿ ಪ್ರತಿ ಲೀಟರ್‌ಗೆ ಕಡಿಮೆ ಆಗಿದೆ.

ಕೇಂದ್ರ ಸರ್ಕಾರ ಅಬಕಾರಿ ಸುಂಕ ಇಳಿಸಿದ ಬೆನ್ನಲ್ಲೆ ಕೆಲವು ರಾಜ್ಯಗಳು ಸಹ ತಾವು ಇಂಧನ ಮೇಲೆ ಹೇರಿದ್ದ ವ್ಯಾಟ್‌ನಲ್ಲಿ 2.50 ರೂಪಾಯಿ ಇಳಿಕೆ ಮಾಡಿವೆ. ಹಾಗಾಗಿ ಹಲವು ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ 5 ರೂಪಾಯಿ ಕಡಿಮೆಯಾಗಿದೆ.

ತೈಲ ಬೆಲೆ ಇಳಿಕೆ , ದೇಶದ ಜನತೆಗೆ ಸಿಹಿ ಸುದ್ದಿ ಕೊಟ್ಟ ಮೋದಿ ಸರ್ಕಾರ

ಕರ್ನಾಟಕದಲ್ಲಿ ಕೆಲವು ದಿನಗಳ ಮುಂಚೆಯೇ 2 ಸೆಸ್ ಕಡಿಮೆ ಮಾಡಲಾಗಿತ್ತು. ಹಾಗಾಗಿ ಈಗ ಇಲ್ಲಿ 2.50 ರೂಪಾಯಿ ಬೆಲೆ ಪ್ರತಿ ಲೀಟರ್‌ಗೆ ಕಡಿಮೆ ಆಗಲಿದೆ. ಡೀಸೆಲ್ ಬೆಲೆ ಸಹ 2.50 ಕಡಿಮೆ ಆಗಿದೆ.

ಇರಾನ್‌ನಿಂದ ತೈಲ ಖರೀದಿ ನಿಲ್ಲಿಸಲು ಭಾರತಕ್ಕೆ ಹೆಚ್ಚುವರಿ ಕಾಲಾವಕಾಶ: ಅಮೆರಿಕ

ಅಬಕಾರಿ ಸುಂಕ ಇಳಿದ ಬಳಿ ವಿವಿಧ ರಾಜ್ಯಗಳ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಎಷ್ಟಿದೆ ಎಂದು ನೋಡುವುದಾದರೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 82.19 ಇದೆ. ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 73.37 ರೂಪಾಯಿ ಇದೆ.

ಅತಿ ಕಡಿಮೆ ಬೆಲೆಗೆ ಪೆಟ್ರೋಲ್, ಡೀಸೆಲ್ ಅನ್ನು ವಿದೇಶಕ್ಕೆ ಮಾರುತ್ತಿದೆ ಕೇಂದ್ರ ಸರ್ಕಾರ!

ನವದೆಹಲಿಲ್ಲಿ ಪೆಟ್ರೋಲ್‌ 81.56 ರೂಪಾಯಿ ಇದ್ದರೆ, ಡೀಸೆಲ್ 73 ರೂಪಾಯಿ ಇದೆ. ಮಹಾರಾಷ್ಟ್ರ ಸರ್ಕಾರದ ಮುಂಬೈನಲ್ಲಿ 77.5 ರೂಪಾಯಿ ಡೀಸೆಲ್ ಬೆಲೆ ಇದ್ದರೆ. ಪೆಟ್ರೋಲ್ ಬೆಲೆ 87.02 ರೂಪಾಯಿ ಇದೆ. ಉತ್ತರ ಪ್ರದೇಶದ ಲಖನೌನಲ್ಲಿ ಪೆಟ್ರೋಲ್ ಬೆಲೆ 79 ರೂಪಾಯಿ ಇದೆ. ಅಲ್ಲಿನ ಸಿಎಂ ನಿನ್ನೆ ಅಲ್ಲ 4.35 ರೂಪಾಯಿ ಬೆಲೆ ಇಳಿಸಿದ್ದಾರೆ. ಡೀಸೆಲ್ ಬೆಲೆ ಲೀಟರ್‌ಗೆ 71.04 ಇದೆ.

English summary
Excise duty cut down yesterday by Central government. Some state governments also cut down their GST on fuel. Here is the list of petrol, diesel price of some cities of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X