• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಾಲರ್ ಎದುರು ರೂಪಾಯಿ ಪಾತಾಳಕ್ಕೆ; ಪೆಟ್ರೋಲ್, ಡೀಸೆಲ್ ದರ ಗಗನಕ್ಕೆ

|

ನವದೆಹಲಿ, ಆಗಸ್ಟ್ 28: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರಿದ್ದು, ದಾಖಲೆಯ ಮಟ್ಟಕ್ಕೆ ತಲುಪಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದಿಂದಾಗಿ ಆಮದು ವೆಚ್ಚ ಹೆಚ್ಚಳವಾಗಿದ್ದು, ಅದರ ನೇರ ಪರಿಣಾಮ ತೈಲ ದರದ ಮೇಲಾಗಿದೆ. ಇದರಿಂದ ಗ್ರಾಹಕರ ಜೇಬಿಗೆ ಮತ್ತಷ್ಟು ಕತ್ತರಿ ಬಿದ್ದಂತಾಗಿದೆ.

ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್ : ರಾಜ್ಯಗಳಿಂದ ವಿರೋಧ

ಡೀಸೆಲ್ ದರ ಲೀಟರ್‌ಗೆ 69 ಮತ್ತು ಪೆಟ್ರೋಲ್ ಲೀಟರ್‌ಗೆ 78 ರೂ.ಗೆ ದಾಟಿದೆ. ಡೀಸೆಲ್ ದರ ಸೋಮವಾರ ಲೀಟರ್‌ಗೆ ಏಕಾಏಕಿ 14 ಪೈಸೆ ಮತ್ತು ಪೆಟ್ರೋಲ್‌ಗೆ 13 ಪೈಸೆ ಹೆಚ್ಚಳವಾಗಿದೆ. ಸತತ ಮೂರನೇ ದಿನವೂ ಬೆಲೆ ಏರಿಕೆಯಾಗಿದ್ದು, ಮಂಗಳವಾರ ಬೆಳಿಗ್ಗೆ ಮತ್ತೆ ಹೆಚ್ಚಳ ಕಂಡಿದೆ.

ದೆಹಲಿಯಲ್ಲಿ ಕಡಿಮೆ ಮೊತ್ತ

ದೆಹಲಿಯಲ್ಲಿ ಕಡಿಮೆ ಮೊತ್ತ

ಇದರಿಂದ ದೆಹಲಿಯಲ್ಲಿ ಡೀಸೆಲ್ ದರ ದಾಖಲೆಯ 69.61, ಮುಂಬೈನಲ್ಲಿ 73.90, ಜೈಪುರದಲ್ಲಿ 74.02 ರೂ.ಗೆ ತಲುಪಿದೆ.

ಕಡಿಮೆ ಮಾರಾಟ ತೆರಿಗೆಯ ಕಾರಣ ದೆಹಲಿಯಲ್ಲಿ ಉಳಿದ ಎಲ್ಲ ಮೆಟ್ರೊ ನಗರಗಳು ಹಾಗೂ ರಾಜ್ಯದ ರಾಜಧಾನಿಗಳಿಗಿಂತ ಕಡಿಮೆ ದರವಿದೆ.

ಪೆಟ್ರೋಲ್ ದರವು ದೆಹಲಿಯಲ್ಲಿ ಲೀಟರ್‌ಗೆ 78.05, ಮುಂಬೈನಲ್ಲಿ ಲೀಟರ್‌ಗೆ 85.47 ರೂ.ಗೆ ಏರಿದೆ. ಆದರೆ, ಮೇ 29ಕ್ಕೆ ಹೋಲಿಸಿದರೆ ಪೆಟ್ರೋಲ್ ದರ ತುಸು ಕಡಿಮೆ ಇದೆ. ಆಗ ದೆಹಲಿಯಲ್ಲಿ 78.43 ರೂ ಮತ್ತು ಮುಂಬೈನಲ್ಲಿ 86.24 ರೂ.ಗೆ ತಲುಪಿತ್ತು.

ಬೆಂಗಳೂರಲ್ಲಿ 80ರ ಗಡಿ ದಾಟಿದ ಪೆಟ್ರೋಲ್‌ ದರ

ರೂಪಾಯಿ ದರ ಕುಸಿತದ ಪರಿಣಾಮ

ರೂಪಾಯಿ ದರ ಕುಸಿತದ ಪರಿಣಾಮ

ಅಮೆರಿಕದ ಡಾಲರ್ ಎದುರು ರೂಪಾಯಿ ದರವು ಆಗಸ್ಟ್ 16ರಿಂದ ತೀವ್ರ ಕುಸಿತ ಕಂಡಿರುವುದರಿಂದ ತೈಲ ಬೆಲೆಯಲ್ಲಿ ಏರಿಕೆಯಾಗಿದೆ.

ಕಳೆದ 12 ದಿನಗಳಲ್ಲಿ ಪೆಟ್ರೋಲ್ ದರ ದೆಹಲಿಯಲ್ಲಿ ಲೀಟರ್‌ಗೆ 77 ಪೈಸೆಯಷ್ಟು ದುಬಾರಿಯಾಗಿದೆ. ಡೀಸೆಲ್ ಬೆಲೆ 74 ಪೈಸೆಗಳಷ್ಟು ಹೆಚ್ಚಳವಾಗಿದೆ.

ಕೋಲ್ಕತ್ತಾದಲ್ಲಿ ಪೆಟ್ರೋಲ್ 80.98, ಡೀಸೆಲ್ 72.46, ಚೆನ್ನೈನಲ್ಲಿ ಪೆಟ್ರೋಲ್ 81.09, ಡೀಸೆಲ್ 74.45ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆಯು ಲೀಟರ್‌ಗೆ 80.49 ರೂ. ಆಗಿದ್ದರೆ, ಡೀಸೆಲ್ ಪ್ರತಿ ಲೀಟರ್‌ಗೆ 71.73ರಷ್ಟಿದೆ.

ಮೆಟ್ರೋ ಸಿಟಿಗಳಲ್ಲಿ ಪೆಟ್ರೋಲ್, ಡೀಸೆಲ್ ಮತ್ತೆ ಏರಿಕೆ

ಆಮದು ಸುಂಕ ಇಳಿಕೆಗೆ ನಕಾರ

ಆಮದು ಸುಂಕ ಇಳಿಕೆಗೆ ನಕಾರ

ಪ್ರತಿ ತಿಂಗಳು 1 ಮತ್ತು 16ನೇ ತಾರೀಕಿನಂದು ತೈಲ ಬೆಲೆಯನ್ನು ಪರಿಷ್ಕರಿಸುವ 15 ವರ್ಷಗಳ ಸಂಪ್ರದಾಯವನ್ನು ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಕಳೆದ ವರ್ಷದ ಜೂನ್‌ನಿಂದ ಕೈಬಿಟ್ಟಿದ್ದವು. ಆಗಿನಿಂದ ಪ್ರತಿ ಮಧ್ಯರಾತ್ರಿ ತೈಲ ಬೆಲೆ ಪರಿಷ್ಕರಣೆಯಾಗುತ್ತಿದೆ.

ಬೆಲೆ ಏರಿಕೆಯಿಂದ ಜನರು ಸಂಕಷ್ಟಕ್ಕೆ ಒಳಗಾಗಿದ್ದು, ಇಂಧನ ಬೆಲೆ ಮೇಲಿನ ಆಮದು ಸುಂಕವನ್ನು ಕಡಿತಗೊಳಿಸಲು ಒತ್ತಾಯಿಸಲಾಗಿದೆ. ಆದರೆ, ತಕ್ಷಣವೇ ತೆರಿಗೆ ಕಡಿತಗೊಳಿಸಲು ಸರ್ಕಾರ ನಿರಾಕರಿಸಿದೆ.

ಸುಂಕ ಸಂಗ್ರಹ

ಸುಂಕ ಸಂಗ್ರಹ

ಪ್ರಸ್ತುತ ಕೇಂದ್ರ ಸರ್ಕಾರವು ಲೀಟರ್ ಪೆಟ್ರೋಲ್ ಮೇಲೆ ಲೀಟರ್‌ಗೆ 19.48 ರೂ. ಮತ್ತು ಡೀಸೆಲ್ ಮೇಲೆ ಲೀಟರ್‌ಗೆ 15.33 ರೂ. ಸುಂಕ ಸಂಗ್ರಹಿಸುತ್ತಿದೆ. ಇದರ ಮೇಲೆ ರಾಜ್ಯಗಳು ಮೌಲ್ಯವರ್ದಿತ ತೆರಿಗೆಗಳನ್ನು ವಿಧಿಸುತ್ತಿದ್ದು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಅತ್ಯಂತ ಕಡಿಮೆ ಲೆವಿ ಅಂದರೆ, ಶೇ 6ರಷ್ಟು ಮಾರಾಟ ತೆರಿಗೆ ವಿಧಿಸಲಾಗುತ್ತಿದೆ.

ಮುಂಬೈನಲ್ಲಿ ಅಧಿಕ ವ್ಯಾಟ್

ಮುಂಬೈನಲ್ಲಿ ಅಧಿಕ ವ್ಯಾಟ್

ಮುಂಬೈನಲ್ಲಿ ಪೆಟ್ರೋಲ್ ಮೇಲೆ ಅತ್ಯಧಿಕ ಅಂದರೆ, ಶೇ 39.12 ವ್ಯಾಟ್ ಹೇರಲಾಗುತ್ತಿದೆ. ತೆಲಂಗಾಣದಲ್ಲಿ ಡೀಸೆಲ್ ಮೇಲಿನ ವ್ಯಾಟ್ ಶೇ 26ರಷ್ಟಿದ್ದು, ದೇಶದಲ್ಲಿಯೇ ಅತ್ಯಧಿಕವಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಮೇಲೆ ಶೇ 27 ಮತ್ತು ಡೀಸೆಲ್ ಮೇಲೆ ಶೇ 17.24 ವ್ಯಾಟ್ ಸಂಗ್ರಹಿಸಲಾಗುತ್ತಿದೆ.

ಏರುತ್ತಲೇ ಇದೆ ತೆರಿಗೆ

ಏರುತ್ತಲೇ ಇದೆ ತೆರಿಗೆ

ನವೆಂಬರ್ 2014ರಿಂದ ಜನವರಿ 2016ದ ಅವಧಿಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿದಾಗ ಕೇಂದ್ರ ಸರ್ಕಾರವು ಒಂಬತ್ತು ಹಂತಗಳಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 11.77 ರೂ.ನಷ್ಟು ಮತ್ತು ಡೀಸೆಲ್ ಮೇಲೆ 13.47 ರೂ. ಹೆಚ್ಚಿಸಿದೆ. ಆದರೆ, ಕಳೆದ ಅಕ್ಟೋಬರ್‌ನಲ್ಲಿ ಕೇವಲ 2 ರೂ.ನಷ್ಟು ಸುಂಕ ಕಡಿತಗೊಳಿಸಿದೆ.

ಸುಂಕ ಸಂಗ್ರಹ ಮೊತ್ತ ಏರಿಕೆ

ಸುಂಕ ಸಂಗ್ರಹ ಮೊತ್ತ ಏರಿಕೆ

ಕಳೆದ ನಾಲ್ಕು ವರ್ಷಗಳಲ್ಲಿ ತೈಲ ಸರಕುಗಳ ಮೇಲಿನ ಅಬಕಾರಿ ಸುಂಕ ಸಂಗ್ರಹದ ಪ್ರಮಾಣ ದ್ವಿಗುಣಗೊಂಡಿದೆ. 2014-15ರಲ್ಲಿ 99,184 ಕೋಟಿ ಅಬಕಾರಿ ಸುಂಕ ಸಂಗ್ರಹವಾಗಿದ್ದರೆ, 2017-18ರಲ್ಲಿ 1,29,019 ಕೋಟಿ ರೂ. ಸಂಗ್ರಹವಾಗಿದೆ.

ರಾಜ್ಯಗಳ ವ್ಯಾಟ್ ಆದಾಯವು 2014-15ರಲ್ಲಿ 1,37,157 ಕೋಟಿ ರೂ.ನಿಂದ 2017-18ರಲ್ಲಿ 1,84,091 ಕೋಟಿ ರೂ.ಗೆ ಏರಿಕೆ ಕಂಡಿದೆ.

English summary
Fuel prices have been increased for the third straight day today (August 28) with the cost diesel touching record levels. The price of petrol in several cities has crossed Rs 80 per litre mark.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X