ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೆಸ್ಸೆಸ್ ಕಾರ್ಯಕರ್ತನಿಂದ ಪ್ರಧಾನಿ ಹುದ್ದೆ ತನಕ ಮೋದಿ ಬೆಳೆದದ್ದು ಹೇಗೆ?

|
Google Oneindia Kannada News

Recommended Video

ನರೇಂದ್ರ ಮೋದಿ ಪ್ರಧಾನಿಯಾದ ಕಥೆ | ಜೀವನಗಾಥೆ | Narendra Modi Biography in Kannada | Oneindia Kannada

ನವದೆಹಲಿ, ಸೆಪ್ಟೆಂಬರ್ 16: ನರೇಂದ್ರ ಮೋದಿ ಅವರ ಜನ್ಮದಿನ ಸೆಪ್ಟೆಂಬರ್ 17ಕ್ಕೆ. ಈ ವರ್ಷ ಸೋಮವಾರದಂದು ಬಂದಿದೆ. ತಮ್ಮ ಜನ್ಮದಿನವನ್ನು ಉತ್ತರಪ್ರದೇಶದ ವಾರಾಣಸಿ ಜಿಲ್ಲೆ ಅಂದರೆ ತಾವು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರದಲ್ಲಿ ಆಚರಿಸಿಕೊಳ್ಳಲಿದ್ದಾರೆ. ಶಾಲೆ ಮಕ್ಕಳ ಜತೆಗೆ ಹಾಗೂ ತಮ್ಮ ಜೀವನಾಧಾರಿತ ಸಿನಿಮಾ ನೋಡುತ್ತಾ ದಿನ ಕಳೆಯಲಿದ್ದಾರೆ.

ತೀರಾ ತಳ ಮಟ್ಟದಿಂದ ಭಾರತದ ಪ್ರಧಾನಿ ಆಗುವ ತನಕ ಮೋದಿ ಬೆಳೆದು ಬಂದ ಹಾದಿ ಎಲ್ಲರಿಗೂ ಪರಿಚಿತ. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಚಾರಿತ್ರಿಕ ಜಯ ಸಾಧಿಸುವುದರಲ್ಲಿ ನರೇಂದ್ರ ಮೋದಿಯವರದು ಮುಖ್ಯ ಪಾತ್ರ. ತೀರಾ ಬಡತನ ಹಿನ್ನೆಲೆಯ- ಟೀ ಮಾರುತ್ತಿದ್ದ ಹುಡುಗ ಅಭಿವೃದ್ಧಿಯ ಕನಸು ಕಾಣುವ ನಾಯಕನಾಗಿ ಬೆಳೆದ ಪರಿ ಅದ್ಭುತ.

ಅಷ್ಟೇ ಅಲ್ಲ, ಬಹಳ ಸುದೀರ್ಘ ಕಾಲ, ಅಂದರೆ 12 ವರ್ಷಗಳ ಕಾಲ ಗುಜರಾತ್ ನ ಮುಖ್ಯಮಂತ್ರಿ ಆಗಿದ್ದ ಕೀರ್ತಿ ಕೂಡ ಅವರಿಗೆ ಸಲ್ಲುತ್ತದೆ.

Narendra Modi

ಬಾಲ್ಯದ ಬದುಕು ಹಾಗೂ ಕುಟುಂಬ:
ನರೇಂದ್ರ ದಾಮೋದರ್ ದಾಸ್ ಮೋದಿ ಜನಿಸಿದ್ದು ಸೆಪ್ಟೆಂಬರ್ 17, 1950ರಲ್ಲಿ. ಗುಜರಾತ್ ರಾಜ್ಯ ಮೆಹ್ಸಾನದ ಸಣ್ಣ ಪಟ್ಟಣವಾದ ವಡ್ನಗರ್ ನಲ್ಲಿ. ದಾಮೋದರ್ ಮುಲ್ ಚಂದ್ ಹಾಗೂ ಹೀರಾ ಬೆನ್ ದಂಪತಿಯ ಆರು ಮಕ್ಕಳ ಪೈಕಿ ಮೂರನೆಯವರೇ ನರೇಂದ್ರ ಮೋದಿ. ಬಾಲ್ಯದಿಂದಲೂ ಹಲವು ಕಷ್ಟ, ಅಡೆತಡೆಗಳನ್ನು ಎದುರಿಸಿದವರು ಮೋದಿ. ಆದರೆ ತಮ್ಮ ಧೈರ್ಯ ಹಾಗೂ ನಡವಳಿಕೆಗಳಿಂದ ಸವಾಲುಗಳನ್ನೇ ಅವಕಾಶಗಳಾಗಿ ಬದಲಿಸಿಕೊಂಡರು.

'ಸ್ವಚ್ಛತೆಯೇ ಸೇವೆ' ಮೋದಿಯಿಂದ ಹೊಸ ಅಭಿಯಾನ ಜಾರಿ'ಸ್ವಚ್ಛತೆಯೇ ಸೇವೆ' ಮೋದಿಯಿಂದ ಹೊಸ ಅಭಿಯಾನ ಜಾರಿ

1967ರಲ್ಲಿ ವಡ್ನಗರ್ ನಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿದ ನರೇಂದ್ರ ಮೋದಿ, ಮನೆಯನ್ನು ತೊರೆದರು. ಭಾರತದ ಉದ್ದಗಲಕ್ಕೂ ಸುತ್ತಾಡಿ ಇಲ್ಲಿನ ವಿವಿಧ ಸಂಸ್ಕೃತಿ, ಭೂ ಭಾಗಗಳ ಪರಿಚಯ ಮಾಡಿಕೊಂಡರು. ಹೃಷಿಕೇಶ, ಹಿಮಾಲಯ, ರಾಮಕೃಷ್ಣ ಮಿಷನ್ ಹಾಗೂ ಈಶಾನ್ಯ ಭಾರತದಾದ್ಯಂತ ಸುತ್ತಾಡಿದರು.

ಮನೆಗೆ ಹಿಂತಿರುಗಿದ ಎರಡು ವರ್ಷಗಳ ನಂತರ, 1971ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪೂರ್ಣಾವಧಿ ಪ್ರಚಾರಕರಾಗಿ ಸೇರುವ ಉದ್ದೇಶದಿಂದ ನರೇಂದ್ರ ಮೋದಿ ಅಹ್ಮದಾಬಾದ್ ಗೆ ತೆರಳಿದರು.

ರಾಜಕೀಯ ಬದುಕು:
1975-77ರ ರಾಜಕೀಯ ಬಿಕ್ಕಟ್ಟಿನ ವೇಳೆ ಪ್ರಧಾನಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದರು. ಆರೆಸ್ಸೆಸ್ ನಂಥ ಸಂಘಟನೆಗಳನ್ನು ನಿಷೇಧ ಮಾಡಿದರು. ಆಗ ಮೋದಿ ಭೂಗತರಾದರು. ಸಂಘರ್ಷ್ ಮಾ ಗುಜರಾತ್ (ಗುಜರಾತ್ ನಲ್ಲಿ ಎಮರ್ಜೆನ್ಸಿ) ಎಂಬ ಪುಸ್ತಕ ಬರೆದರು. ತುರ್ತು ಪರಿಸ್ಥಿತಿ ವೇಳೆಯಲ್ಲಿ 'ರಾಜಕೀಯ ಅಪರಾಧಿ'ಯಾಗಿ ಅವರ ಅನುಭವವನ್ನು ತೆರೆದಿಡುವ ಪುಸ್ತಕ ಅದಾಗಿತ್ತು.

1985ರಲ್ಲಿ ನರೇಂದ್ರ ಮೋದಿ ಬಿಜೆಪಿ ಸೇರಿದರು. ಅವರನ್ನು 1987ರಲ್ಲಿ ಗುಜರಾತ್ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಅಹ್ಮದಾಬಾದ್ ನ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿದ ಅವರು ಬಿಜೆಪಿಗೆ ಮೊಟ್ಟ ಮೊದಲ ಗೆಲುವು ತಂದುಕೊಡುವಲ್ಲಿ ಸಫಲರಾದರು.

ಮೋದಿ ಆರೋಗ್ಯ ಯೋಜನೆಯನ್ನು ಹಾಡಿಹೊಗಳಿದ ಬ್ರಿಟಿಷ್ ಪತ್ರಿಕೆಮೋದಿ ಆರೋಗ್ಯ ಯೋಜನೆಯನ್ನು ಹಾಡಿಹೊಗಳಿದ ಬ್ರಿಟಿಷ್ ಪತ್ರಿಕೆ

ಹಿಂದೂ ರಾಷ್ಟ್ರೀಯತೆ ಪರವಾದ ಬಿಜೆಪಿಯಲ್ಲಿ 1987ರ ನಂತರ ನರೇಂದ್ರ ಮೋದಿ ಒಂದೊಂದೇ ಮೆಟ್ಟಿಲು ಏರುತ್ತಾ ಹೋದರು. ಸಣ್ಣ ಪ್ರಮಾಣದ ಸರಕಾರಿ ಉದ್ದಿಮೆ, ಉದ್ಯಮದ ಖಾಸಗೀಕರಣ ಹಾಗೂ ಹಿಂದೂ ಮೌಲ್ಯವನ್ನು ಮೋದಿ ಪ್ರಚಾರ ಮಾಡಿದರು. 1995ರಲ್ಲಿ ಮೋದಿಯವರು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಆ ವೇಳೆ ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟು ಶಮನಗೊಳಿಸುವಲ್ಲಿ ಯಶಸ್ವಿಯಾದರು. 1998ರಲ್ಲಿ ಬಿಜೆಪಿಯ ಗೆಲುವಿಗೆ ದಾರಿಯಾಗುವಂತಾಯಿತು.

ನರೇಂದ್ರ ಮೋದಿ 2007 ಹಾಗೂ 2012ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಪುನರಾಯ್ಕೆಯಾದರು. ಆ ಚುನಾವಣೆ ಪ್ರಚಾರದ ವೇಳೆ ಕಟ್ಟರ್ ಹಿಂದೂವಾದಿಯಾಗಿದ್ದ ನರೇಂದ್ರ ಮೋದಿ ಮೃದುವಾದರು. ಆರ್ಥಿಕ ಅಭಿವೃದ್ಧಿ, ಖಾಸಗೀಕರಣದ ಮೇಲೆ ಗಮನ, ನೀತಿ ನಿರೂಪಣೆ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತದ ಉತ್ಪಾದನೆ ವಲಯ ಗುರುತಿಸಿಕೊಳ್ಳಬೇಕು ಎಂಬ ತಪನೆ ಅವರಲ್ಲಿ ಕಾಣಿಸಿಕೊಂಡಿತು.

2002ರಲ್ಲಿ ನಡೆದ ಗುಜರಾತ್ ಗಲಭೆ ನಿಯಂತ್ರಣಕ್ಕೆ ನರೇಂದ್ರ ಮೋದಿ ನೇತೃತ್ವದ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿಲ್ಲ ಎಂಬ ಆರೋಪ ಕೇಳಿಬಂತು. ಗೋಧ್ರಾದಲ್ಲಿ ಹಿಂದೂ ಭಕ್ತರ ಜೀವಂತವಾಗಿ ಸುಟ್ಟ ಪ್ರಕರಣಕ್ಕೆ ಪ್ರತೀಕಾರವಾಗಿ ಆ ದಾಳಿ ನಡೆದಿತ್ತು. ಆ ವೇಳೆ ಗುಜರಾತ್ ನಲ್ಲಿ ಹಾಗೂ ಅಲ್ಲಿಂದ ಹೊರಗಿನ ವಿರೋಧ ಪಕ್ಷಗಳು ಕೂಡ ನರೇಂದ್ರ ಮೋದಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಬೇಕು ಎಂದು ಒತ್ತಾಯಿಸಿದವು.

ಆದರೂ 2002ರ ಡಿಸೆಂಬರ್ ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದು, ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿ ಪುನರಾಯ್ಕೆಯಾದರು. ವಿಶೇಷ ತನಿಖಾ ತಂಡವು (ಎಸ್ ಐಟಿ) ಹಲವು ತನಿಖೆಗಳನ್ನು ಮಾಡಿದ ಮೇಲೆ, ಹಿಂಸಾಚಾರದಲ್ಲಿ ನರೇಂದ್ರ ಮೋದಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ಕ್ಲೀನ್ ಚಿಟ್ ನೀಡಿತು.

2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿಯಾದರು. ಇದಕ್ಕೆ ಪಕ್ಷದ ಹಿರಿಯರಾದ ಎಲ್.ಕೆ.ಅಡ್ವಾಣಿಯಂಥವರು ವಿರೋಧ ವ್ಯಕ್ತಪಡಿಸಿದರು. ಆದರೆ ಮೋದಿ ಸ್ಪರ್ಧಿಸಿದ್ದ ಎರಡೂ ಲೋಕಸಭಾ ಕ್ಷೇತ್ರದಲ್ಲಿ (ವಾರಾಣಸಿ ಮತ್ತು ವಡೋದರಾ) ಗೆದ್ದರು. ಆ ಪೈಕಿ ವಡೋದರಾ ಸ್ಥಾನಕ್ಕೆ ರಾಜೀನಾಮೆ ನೀಡಿದರು.

2014ರ ಲೋಕಸಭೆ ಚುನಾವಣೆಯಲ್ಲಿ ಒಟ್ಟು 534 ಸ್ಥಾನಗಳಲ್ಲಿ 282 ಕಡೆ ಗೆಲ್ಲುವ ಮೂಲಕ ಚಾರಿತ್ರಿಕ ಜಯ ದಾಖಲಿಸಿತು. ಆ ಮೂಲಕ ಕಾಂಗ್ರೆಸ್ ನೇತೃತ್ವದ ಸರಕಾರ ಪತನಗೊಂಡಿತು.

2014ರಲ್ಲಿ ನರೇಂದ್ರ ಮೋದಿ "ಸ್ವಚ್ಛ ಭಾರತ" ಅಭಿಯಾನ ಆರಂಭಿಸಿದರು ಮೋದಿ. ಆ ಅಭಿಯಾನದ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಒಳಚರಂಡಿ ನಿರ್ಮಾಣದ ಬಗ್ಗೆ ಗಮನ ಕೇಂದ್ರೀಕರಿಸಲಾಯಿತು. ಹದಿನೈದನೇ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ನರೇಂದ್ರ ಮೋದಿ ಸ್ವಚ್ಛ ಭಾರತ, ಮೇಕ್ ಇನ್ ಇಂಡಿಯಾ ಹಾಗೂ ನಮಾಮಿ ಗಂಗಾ ಇತ್ಯಾದಿ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

ವೈಯಕ್ತಿಕ ಬದುಕು:
ನರೇಂದ್ರ ಮೋದಿ ಅವರು ತಮ್ಮ ಹದಿನೆಂಟನೇ ವಯಸ್ಸಿನಲ್ಲಿ ಜಶೋದಾಬೆನ್ ಚಿಮ್ನಾಲಾಲ್ ಅವರನ್ನು ಮದುವೆಯಾದರು. ಅದು ಘಂಚಿ ಸಮುದಾಯದ ಸಂಪ್ರದಾಯದ ಪ್ರಕಾರ ನಡೆದ ಮದುವೆ. ವರದಿಗಳ ಪ್ರಕಾರ, ಆದರೆ ಆ ಸಂಸಾರ ಶುರುವಾಗಲೇ ಇಲ್ಲ. ಅಂತಿಮವಾಗಿ ಇಬ್ಬರೂ ಬೇರ್ಪಟ್ಟರು.

ಜಾಗತಿಕ ಮನ್ನಣೆ:
2016ರಲ್ಲಿ ಟೈಮ್ಸ್ ವರ್ಷದ ವ್ಯಕ್ತಿಯಾಗಿ ಓದುಗರಿಂದ ಆಯ್ಕೆಯಾಗಿದ್ದರು ನರೇಂದ್ರ ಮೋದಿ. ಅದಕ್ಕೂ ಹಿಂದಿನ ವರ್ಷಗಳಲ್ಲಿ ಅತ್ಯಂತ ಪ್ರಭಾವಿ ರಾಜಕೀಯ ನಾಯಕರಾಗಿ ಮೋದಿ ಅವರನ್ನು ಫೋರ್ಬ್ಸ್ ಹಾಗೂ ಟೈಮ್ಸ್ ನಿಯತಕಾಲಿಕೆಗಳಿಂದ ಮನ್ನಣೆಗೆ ಪಾತ್ರರಾದರು.

ಇಂಧೋರ್ ಮಸೀದಿಯಲ್ಲಿ ಮೋದಿ ಭಾಷಣ: ಬೊಹರಾ ಸಮುದಾಯದ ಗುಣಗಾನಇಂಧೋರ್ ಮಸೀದಿಯಲ್ಲಿ ಮೋದಿ ಭಾಷಣ: ಬೊಹರಾ ಸಮುದಾಯದ ಗುಣಗಾನ

ಬರಾಕ್ ಒಬಾಮ ನಂತರ ಸಾಮಾಜಿಕ ಮಾಧ್ಯಮದಲ್ಲಿ ಅತಿ ಹೆಚ್ಚು ಅನುಯಾಯಿಗಳಿರುವ ರಾಜಕೀಯ ವ್ಯಕ್ತಿ ನರೇಂದ್ರ ಮೋದಿ. ಜತೆಗೆ ಭಾರತೀಯ ಮತದಾರರ ನೆಚ್ಚಿನ ನಾಯಕ ಎಂಬ ಶ್ರೇಯವೂ ಜತೆಯಾಯಿತು. ಸಾಮಾಜಿಕ ಮಾಧ್ಯಮಗಳ ಮೂಲಕ ದೇಶದ ಜನರ ಜತೆಗೆ ಸಂಪರ್ಕದಲ್ಲಿರುವ ಮೋದಿ, ತಮ್ಮ ಆಡಳಿತದಲ್ಲೂ ಹಾಗಿರುವಂತೆ ಪ್ರೋತ್ಸಾಹಿಸುತ್ತಾರೆ.

ಸಿಎನ್ ಎನ್-ಐಬಿಎನ್ ನಿಂದ 2014ರಲ್ಲಿ ಮೋದಿ ಅವರನ್ನು ವರ್ಷದ ಭಾರತೀಯ ಎಂದು ಗುರುತಿಸಲಾಯಿತು. ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಎರಡನೇ ಅತಿ ಹೆಚ್ಚು ಫಾಲೋವರ್ಸ್ ಇರುವ ನರೇಂದ್ರ ಮೋದಿ, 2015ರಲ್ಲಿ ಟೈಮ್ ನಿಯತಕಾಲಿಕೆ "ಇಂಟರ್ ನೆಟ್ ನಲ್ಲಿ 30 ಅತಿ ಹೆಚ್ಚು ಪ್ರಭಾವಿ ವ್ಯಕ್ತಿ"ಗಳ ಪಟ್ಟಿಯಲ್ಲಿದ್ದರು.

English summary
Prime Minister Narendra Modi is set to celebrate his 68th birthday in his parliamentary constituency of Uttar Pradesh's Varanasi district, where he will spend the day with schoolchildren and watch a film based on his life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X