ಹುಲಿ ಉಳಿಸಿ ಅಭಿಯಾನದಲ್ಲಿ ನಟಿ ಫ್ರೀಡಾ ಪಿಂಟೋ
ನವದೆಹಲಿ, ಜುಲೈ 28: 'ಹುಲಿ ಉಳಿಸಿ' ಜಾಗತಿಕ ಜಾಗೃತಿ ಕಾರ್ಯಕ್ರಮದ ಸಹಯೋಗವನ್ನು ಸ್ಲಮ್ ಡಾಗ್ ಮಿಲಿಯನೇರ್ ಸಿನಿಮಾ ಖ್ಯಾತಿಯ ಫ್ರೀಡಾ ಪಿಂಟೋ ವಹಿಸಲಿದ್ದಾರೆ. ಫ್ರೀಡಾ 'ಹುಲಿ ಉಳಿಸಿ' ಅಭಿಯಾನದ ಪ್ರಚಾರ ನಡೆಸಲಿದ್ದಾರೆ.
ಆ ಮೂಲಕ ಕಾಡಿನಲ್ಲಿನ ಹುಲಿಗಳ ರಕ್ಷಣೆ ಮಾಡುವುದು, ಅವುಗಳ ಆವಾಸ ಸ್ಥಾನವನ್ನು ಉಳಿಸಿಕೊಳ್ಳುವ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಡಿಸ್ಕವರಿ ಚಾನೆಲ್ ಜತೆ ಫ್ರೀಡಾ ಕೈ ಜೋಡಿಸಿದ್ದು, ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ (WWF) ಜತೆಗೆ ಡಿಸ್ಕವರಿ ಚಾನೆಲ್ ಸಹಯೋಗ ಹೊಂದಿದೆ.

"ಭವಿಷ್ಯದ ಪೀಳಿಗೆ ಸ್ವಾಭಾವಿಕ ಆವಾಸ ಸ್ಥಾನದಲ್ಲಿ ಹುಲಿಗಳನ್ನು ನೋಡಲು ಸಾಧ್ಯವಿಲ್ಲ ಅನ್ನೋದನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ. ಇಂಥದ್ದೊಂದು ಪ್ರಾಣಿ ಇತ್ತು ಅನ್ನೋದನ್ನು ಚಿತ್ರಗಳಲ್ಲಿ ನೋಡುವ ಸ್ಥಿತಿ ಬಾರದಿರಲಿ ಎಂದು ಫ್ರಿಡಾ ಪಿಂಟೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಶ್ವದ ಹುಲಿ ಸಂತತಿಯನ್ನು ದ್ವಿಗುಣಗೊಳಿಸಬೇಕು ಅನ್ನೋದು ಡಿಸ್ಕವರಿ ಚಾನೆಲ್ ನವರ ಅಭಿಯಾನದ ಉದ್ದೇಶ. ಅವರ ಶ್ರಮದ ಜತೆಗೆ ನಾನಿದ್ದೇನೆ ಎಂದು ಅವರು ಹೇಳಿದ್ದಾರೆ.
ಮುಂದಿನ ಐದು ವರ್ಷದೊಳಗೆಹುಲಿ ಸಂಖ್ಯೆಯನ್ನು ದ್ವಿಗುಣಗೊಳಿಸಲು ಉದ್ದೇಶಿಸಲಾಗಿದ್ದು, ಅದಕ್ಕಾಗಿ ಭಾರತ ಮತ್ತು ಭೂತಾನ್ ಗಡಿಯಲ್ಲಿರುವ ಹತ್ತಾರು ಲಕ್ಷ ಎಕರೆ ರಕ್ಷಿತ ಪ್ರದೇಶಗಳನ್ನು ರಕ್ಷಿಸಿಕೊಳ್ಳುವ ಉದ್ದೇಶ ಇದೆ. ಆ ಮೂಲಕ ಆರೋಗ್ಯಯುತ ಹುಲಿ ಆವಾಸ ಸ್ಥಾನದ ರಕ್ಷಣೆಯ ಗುರಿ ಇದೆ.
ಐಎಎನ್ಎಸ್












Click it and Unblock the Notifications