ನರೇಂದ್ರ ಮೋದಿ ಫ್ರಾನ್ಸ್ ಭೇಟಿ: ಭಾರತೀಯ ಸೇನೆ, ರಫೇಲ್ ಕ್ಷೇತ್ರದಲ್ಲಿ ಮಹತ್ವಂದ ಒಪ್ಪಂದಕ್ಕೆ ಸಹಿ ಸಾಧ್ಯತೆ
ನರೇಂದ್ರ ಮೋದಿ ಫ್ರಾನ್ಸ್ ಭೇಟಿ ಸಂದರ್ಭದಲ್ಲಿ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ಫ್ರೆಂಚ್ ರಾಯಭಾರಿ ಎಮ್ಯಾನುಯೆಲ್ ಲೆನೈನ್ ಈ ಬಗ್ಗೆ ಮಾಹಿತಿ ನೀಡಿದ್ದು, ಭಾರತೀಯ ಸೇನೆ, ರಫೇಲ್ ಒಪ್ಪಂದಗಳು ಆಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಮುಂಬರುವ ಫ್ರಾನ್ಸ್ ಭೇಟಿಯ ಸಂದರ್ಭದಲ್ಲಿ ಸಹಿ ಮಾಡಬಹುದಾದ ಹಲವಾರು ವಾಣಿಜ್ಯ, ಸರ್ಕಾರದ ಹಂತಗಳಲ್ಲಿ ಹಲವು ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತದೆ. ಭಾರತ ಮತ್ತು ಫ್ರಾನ್ಸ್ ಉನ್ನತ ತಂತ್ರಜ್ಞಾನದಲ್ಲಿ ಜಂಟಿ ಉತ್ಪಾದನೆಗೆ ಸಹಕರಿಸುವ ಒಪ್ಪಂದ ಮಾಡಿಕೊಳ್ಳುವ ಗುರಿಯನ್ನು ಹೊಂದಿವೆ.

ಫ್ರೆಂಚ್ ರಾಯಭಾರಿ ಎಮ್ಯಾನುಯೆಲ್ ಲೆನೈನ್ ಎಎನ್‌ಐಗೆ ಪ್ರತಿಕ್ರಿಯೆ ನೀಡಿ, ಮೋದಿ ಸಹಿ ಹಾಕಬಹುದಾದ ಒಪ್ಪಂದಗಳ ಬಗ್ಗೆ ಮಾತನಾಡಿದರು. "ಬಹಳಷ್ಟು ಒಪ್ಪಂದಗಳಿಗೆ ಸಹಿ ಹಾಕಲಾಗುತ್ತದೆ. ಪ್ರತಿ ಬಾರಿ ಸಭೆ ನಡೆದಾಗಲೂ ಹೊಸ ಸಹಕಾರ, ಒಪ್ಪಂದ ಏರ್ಪಡುತ್ತದೆ. ಭಾರತದ ಮೇಕ್ ಇನ್ ಇಂಡಿಯಾ ಯೋಜನೆಗೆ ಫ್ರೆಂಚ್ ಕಂಪನಿಗಳು ಸಹಕಾರಿಯಾಗಿವೆ. ನಾವು ಆತ್ಮನಿರ್ಭರ್ ಭಾರತ್‌ನ ತತ್ವವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇವೆ. ಉಭಯ ದೇಶಗಳ ನಡುವೆ ತಂತ್ರಜ್ಞಾನ ಹಂಚಿಕೊಳ್ಳಲು, ಜಂಟಿಯಾಗಿ ಅಭಿವೃದ್ಧಿಯಾಗಲು ಬಯಸುತ್ತೇವೆ" ಎಂದು ಹೇಳಿದರು.
ಬಾಸ್ಟಿಲ್ ಡೇಗೆ ಗೌರವಾನ್ವಿತ ಅತಿಥಿಯಾಗಲಿರುವ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫ್ರಾನ್ಸ್ ಬಾಸ್ಟಿಲ್ ಡೇಗೆ ಗೌರವಾನ್ವಿತ ಅತಿಥಿಯಾಗಲಿದ್ದಾರೆ, ರಾಷ್ಟ್ರೀಯ ದಿನದಂದು ಭಾರತೀಯ ಸೈನಿಕರು ಪರೇಡ್‌ನಲ್ಲಿ ಭಾಗವಹಿಸುತ್ತಾರೆ ಮತ್ತು ಭಾರತದ ರಫೇಲ್‌ಗಳು ಹಾರಾಟ ನಡೆಸಲಿವೆ.
"ನಾವು ಪ್ರತಿವರ್ಷ ಗೌರವಾನ್ವಿತ ಅತಿಥಿಗಳನ್ನು ಹೊಂದಿರುವುದಿಲ್ಲ. ಆದರೆ ಈ ವರ್ಷ ಫ್ರಾನ್ಸ್ ಮತ್ತು ಭಾರತದ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯ 25 ನೇ ವಾರ್ಷಿಕೋತ್ಸವವಾಗಿದೆ. ಪರೇಡ್‌ನಲ್ಲಿ ಭಾರತದ ರಕ್ಷಣಾ ಪಡೆಗಳು ಕೂಡ ಭಾಗವಹಿಸಲಿವೆ. ಭಾರತೀಯ ರಫೇಲ್ ವಿಮಾನಗಳು ಕೂಡ ಹಾರಾಟ ನಡೆಸಲಿವೆ." ಎಂದು ಹೇಳಿದರು.
"ಇಬ್ಬರು ನಾಯಕರ ನಡುವಿನ ಹೊಂದಾಣಿಕೆ ಅತ್ಯುತ್ತಮವಾಗಿದೆ. ಅವರು ಉತ್ತಮವಾದ ವೈಯಕ್ತಿಕ ಬಾಂಧವ್ಯವನ್ನು ಹೊಂದಿದ್ದಾರೆ, ಇಬ್ಬರೂ ನಾಯಕರು ಆಗಾಗ್ಗೆ ಪರಸ್ಪರ ಕರೆ ಮಾಡುತ್ತಾರೆ, ಸಮಾಲೋಚಿಸುತ್ತಾರೆ, ಮತ್ತು ಚರ್ಚಿಸುತ್ತಾರೆ" ಎಂದು ಫ್ರೆಂಚ್ ರಾಯಭಾರಿ ಹೇಳಿದ್ದಾರೆ.
ಭಾರತ ಮತ್ತು ಫ್ರಾನ್ಸ್ ರಾಜತಾಂತ್ರಿಕ ಸಂಬಂಧದ 25 ನೇ ವಾರ್ಷಿಕೋತ್ಸವದಂದು ಹೊಸ ಸಹಕಾರಕ್ಕಾಗಿ ಮಾರ್ಗಸೂಚಿಯನ್ನು ಸಹ ರಚಿಸಲಿವೆ. "ಈ ವರ್ಷ 25 ನೇ ವಾರ್ಷಿಕೋತ್ಸವದಂದು ನಾವು ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಸಹಕಾರಕ್ಕಾಗಿ ಮಾರ್ಗಸೂಚಿಯನ್ನು ಸಿದ್ಧಪಡಿಸಲಿದ್ದೇವೆ, ಹವಾಮಾನ ಬದಲಾವಣೆಯ ಜಾಗತಿಕ ಸಮಸ್ಯೆಗಳ ವಿರುದ್ಧ ಹೋರಾಡುತ್ತೇವೆ, ಹೊಸ ಒಪ್ಪಂದಗಳನ್ನು ನಾವು ಕೆಲವೇ ದಿನಗಳಲ್ಲಿ ಘೋಷಿಸಲಿದ್ದೇವೆ" ಎಂದು ಪ್ರಧಾನಿ ಫ್ರಾನ್ಸ್‌ಗೆ ಭೇಟಿ ನೀಡುವ ಮೊದಲು ಫ್ರಾನ್ಸ್ ರಾಯಭಾರಿ ಎಎನ್‌ಐಗೆ ನೀಡಿದ ವಿಶೇಷ ಸಂದರ್ಭದಲ್ಲಿ ಹೇಳಿದರು.
ಉಭಯ ದೇಶಗಳ ಬಾಂಧವ್ಯ ವೃದ್ಧಿ
36 ರಫೇಲ್ ವಿಮಾನಗಳನ್ನು ಭಾರತೀಯ ವಾಯುಪಡೆಗೆ ತಲುಪಿಸಲಾಗಿದೆ ಎಂದು ಫ್ರೆಂಚ್ ರಾಯಭಾರಿ ಹೇಳಿದರು ಮತ್ತು ಕೋವಿಡ್ ಸಾಂಕ್ರಾಮಿಕದ ನಡುವೆಯೂ ವಾಯುಪಡೆಗೆ 36 ರಫೇಲ್‌ಗಳನ್ನು ಸಮಯಕ್ಕೆ ತಲುಪಿಸಲಾಗಿದೆ, ಇದಕ್ಕಾಗಿ ಕೆಲಸಗಾರರು ಹೆಚ್ಚುವರಿ ಪಾಳಿಗಳು, ರಾತ್ರಿ, ವಾರಾಂತ್ಯಗಳಲ್ಲಿ ಕೆಲಸ ಮಾಡಲಾಗಿದೆ. ಪೈಲಟ್‌ಗಳು ಚೆನ್ನಾಗಿ ತರಬೇತಿ ಪಡೆದಿದ್ದಾರೆ ಮತ್ತು ರಫೇಲ್‌ಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ನನಗೆ ತಿಳಿಸಲಾಗಿದೆ. ಎಂದು ಹೇಳಿದ್ದಾರೆ.
ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವು ದೊಡ್ಡ ಪಾತ್ರವನ್ನು ವಹಿಸಬೇಕೆಂದು ಫ್ರಾನ್ಸ್ ಬಯಸುತ್ತದೆ ಎಂದು ರಾಯಭಾರಿ ಹೇಳಿದರು. "ನಾವು ಅಂತರಾಷ್ಟ್ರೀಯ ಆಡಳಿತದಲ್ಲಿ ಭಾರತವನ್ನು ನೋಡಲು ಬಯಸುತ್ತೇವೆ. ಭಾರತದ ಜತೆಗೆ ಮೌಲ್ಯಗಳನ್ನು ಹಂಚಿಕೊಳ್ಳುತ್ತೇವೆ, ಎರಡೂ ಪ್ರಜಾಫ್ರಭುತ್ವ ದೇಶಗಳು, ನಾವು ಮುಕ್ತ ಇಂಡೋ-ಪೆಸಿಫಿಕ್ ಬಗ್ಗೆ ಅದೇ ದೃಷ್ಟಿ ಹೊಂದಿದ್ದೇವೆ ಆದ್ದರಿಂದ ನಾವು ಭಾರತವನ್ನು ಹೆಚ್ಚು ನೋಡಲು ಬಯಸುತ್ತೇವೆ. ಯುಎನ್‌ಎಸ್‌ಸಿಯಲ್ಲಿ, ಭಾರತದ ಖಾಯಂ ಸದಸ್ಯತ್ವವನ್ನು ಬೆಂಬಲಿಸುತ್ತೇವೆ, ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ಜಾಗತಿಕ ಪ್ರಯತ್ನಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು" ಎಂದು ಹೇಳಿದರು.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications