ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ: ಅಚ್ಚರಿಯ ಕೊಡುಗೆ ನೀಡಿದ ಬಿಜೆಪಿ ಸಿಎಂ

Posted By:
Subscribe to Oneindia Kannada

ಗುವಹಾಟಿ, ಜ 13: ದ್ವಿತೀಯ ಪಿಯುಸಿ-2017ರಲ್ಲಿ ಅತ್ಯುತ್ತಮ ಅಂಕಗಳಿಸಿದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಅಸ್ಸಾಂ ಸರಕಾರ ಶುಕ್ರವಾರ (ಜ 12) ಅಚ್ಚರಿಯ ಕೊಡುಗೆಯನ್ನು ನೀಡಿದೆ.

'ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ' ಎನ್ನುವ ಮಾತಿನಂತೆ ಮತ್ತು ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನಾವಾಲ, ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಯನಿಯರಿಗೆ ದ್ವಿಚಕ್ರ ವಾಹನವನ್ನು (ಸ್ಕೂಟಿ) ವಿತರಿಸಿದ್ದಾರೆ.

ವಿದ್ಯಾರ್ಥಿನಿಯರಿಗೆ ಸ್ಕೂಟಿ ವಿತರಿಸಿ ಮಾತನಾಡಿದ ಸೋನಾವಾಲ, ನಿಮ್ಮ ವಿದ್ಯಾಭ್ಯಾಸಕ್ಕೆ ನಮ್ಮ ಸರಕಾರದ ಪ್ರೋತ್ಸಾಹವಿದೆ, ಇನ್ನೂ ಹೆಚ್ಚು ಹೆಚ್ಚು ಓದಿ ಶೈಕ್ಷಣಿಕ ಕ್ಷೇತ್ರದಲ್ಲಿ ಮುಂದಕ್ಕೆ ಬನ್ನಿ, ರಾಜ್ಯ ಮತ್ತು ದೇಶಕ್ಕೆ ಹೆಮ್ಮೆತನ್ನಿ. ಇಂತಹ ಕೊಡುಗೆಗಳು ಇನ್ನೂ ಹೆಚ್ಚು ನಿಮಗೆ ಸಿಗಲಿವೆ ಎಂದಿದ್ದಾರೆ.

Assam Chief Minister Sonowal gives scooties to girls who excelled in second PUC finals

ವಿದ್ಯಾರ್ಥಿನಿಯರಿಗೆ ಅಸ್ಸಾಂ ಮುಖ್ಯಮಂತ್ರಿ ಸೋನಾವಲಾ ಅವರ ಈ ಸ್ಪೂರ್ತಿದಾಯಕ ಹೇಳಿಕೆ ರಾಜ್ಯದಲ್ಲಿ ವ್ಯಾಪಕ ಪ್ರಶಂಸೆಗೊಳಗಾಗಿದೆ. ನಮ್ಮ ಸರಕಾರ ಉತ್ತಮ ಮಟ್ಟದ ಶಿಕ್ಷಣವನ್ನು ನೀಡಲು ಬದ್ದವಾಗಿದೆ. ಮನೆಯೊಂದರಲ್ಲಿ ಹೆಣ್ಣುಮಕ್ಕಳು ಓದುವುದನ್ನು ಮುಂದುವರಿಸಿದರೆ, ಕುಟುಂಬದಲ್ಲಿ ಬಹಳಷ್ಟು ಬದಲಾವಣೆ ಸಾಧ್ಯ ಎಂದು ಸೋನಾವಾಲ ಹೇಳಿದ್ದಾರೆ.

ಸ್ಕೂಟಿ ವಿತರಿಸಿರುವ ಉದ್ದೇಶ, ವಿದ್ಯಾರ್ಥಿನಿಯರು ಭಯಭೀತರಾಗದೇ ಜೊತೆಗೆ ಆತ್ಮವಿಶ್ವಾಸದಿಂದ ಮುಂದಿನ ಶಿಕ್ಷಣ ಮುಂದುವರಿಸಲಿ ಎನ್ನುವುದು. ಮಕ್ಕಳ ಶಿಕ್ಷಣಕ್ಕೆ ನಮ್ಮ ಸರಕಾರ ಕೊಡುತ್ತಿರುವ ಸಣ್ಣ ಬಹುಮಾನವಿದು. ಒಂದು ಸಾವಿರದಿಂದ ಐದು ಸಾವಿರಕ್ಕೆ ಸ್ಕೂಟಿ ವಿತರಿಸುವ ಉದ್ದೇಶವನ್ನು ಹೊಂದಿದ್ದೇವೆ ಎಂದು ಸಿಎಂ ಸೋನಾವಾಲ ಹೇಳಿದ್ದಾರೆ.

ವಿದ್ಯಾರ್ಥಿನಿಯರಿಗೆ ವಿತರಿಸಲಾಗಿರುವ ಸ್ಕೂಟಿಯ ವಿಮೆ ಮತ್ತು ನೊಂದಣಿ ಖರ್ಚನ್ನು ಸರಕಾರವೇ ಭರಿಸಲಿದೆ ಎಂದು ಬಿಜೆಪಿ ನೇತೃತ್ವದ ಅಸ್ಸಾಂ ಸರಕಾರದ ಸಿಎಂ ಸರ್ಬಾನಂದ ಸೋನಾವಾಲ ಹೇಳಿದ್ದಾರೆ. ಜೊತೆಗೆ, ಪ್ರೈಮರಿಯಿಂದ ಎಸ್ ಎಸ್ ಎಲ್ ಸಿ ವರೆಗಿನ ಸರಕಾರೀ ಶಾಲಾ ಮಕ್ಕಳಿಗೆ ಉಚಿತ ಪಠ್ಯಪುಸ್ತಕವನ್ನೂ ಸಿಎಂ ವಿತರಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Assam government on distributed scooties to more than 1,000 girl students who had excelled in the State Board 2nd PU final examinations in 2017. CM Sarbananda Sonowal saying it was one move on part of his government to accelerate the process of women empowerment in the state.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ