• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾಲ್ಕು ರಾಜ್ಯಗಳಲ್ಲಿ ಲೋಕಸಭೆ ಜೊತೆಗೆ ವಿಧಾನಸಭೆ ಚುನಾವಣೆ

|

ನವದೆಹಲಿ, ಮಾರ್ಚ್‌ 11: ನಾಲ್ಕು ರಾಜ್ಯಗಳಲ್ಲಿ ಲೋಕಸಭೆ ಚುನಾವಣೆ ಜೊತೆಗೆ ವಿಧಾನಸಭೆ ಚುನಾವಣೆ ನಡೆಯಲಿದೆ. ನಿನ್ನೆ ಕೇಂದ್ರ ಚುನಾವಣಾ ಆಯೋಗವು ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯನ್ನೂ ಘೋಷಿಸಿದೆ.

ಲೋಕಸಭೆ ಚುನಾವಣೆ ಜೊತೆಗೆ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಸಿಕ್ಕಿಂ ಮತ್ತು ಒಡಿಸ್ಸಾ ರಾಜ್ಯಗಳು ವಿಧಾನಸಭೆ ಚುನಾವಣೆಯನ್ನು ಎದುರಿಸಲಿವೆ. ಜಮ್ಮು ಕಾಶ್ಮೀರದಲ್ಲಿ ಸಹ ವಿಧಾನಸಭೆ ಚುನಾವಣೆ ಘೋಷಣೆ ಆಗಬೇಕಿತ್ತು. ಆದರೆ ಚುನಾವಣೆ ಘೋಷಣೆ ಆಗಿಲ್ಲ.

2019ರ ಲೋಕಸಭಾ ಚುನಾವಣೆಯ ನೀವು ತಿಳಿಯಲೇ ಬೇಕಾದ 7 ವಿಶೇಷತೆಗಳು!

ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಸಿಕ್ಕಿಂ ರಾಜ್ಯಗಳಲ್ಲಿ ಒಂದೇ ಬಾರಿಗೆ ಏಪ್ರಿಲ್ 11 ರಂದು ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ನಡೆಯಲಿದೆ. ಒಡಿಸ್ಸಾದಲ್ಲಿ ಮಾತ್ರ ನಾಲ್ಕು ಹಂತಗಳಲ್ಲಿ ಏಪ್ರಿಲ್ 11, 18,23,29 ರಂದು ವಿಧಾನಸಭೆ-ಲೋಕಸಭೆ ಚುನಾವಣೆಗೆ ಮತದಾನ ನಡೆಯಲಿದೆ.

ತೆಲಂಗಾಣ ರಾಜ್ಯ ಪ್ರತ್ಯೇಕವಾದ ನಂತರ ತಾಂತ್ರಿಕವಾಗಿ ಮೊದಲ ಬಾರಿಗೆ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆ ಎದುರಿಸುತ್ತಿದೆ. ಆಂಧ್ರ ಪ್ರದೇಶದಲ್ಲಿ 175 ವಿಧಾನಸಭೆ ಕ್ಷೇತ್ರಗಳಿದ್ದು, 25 ಲೋಕಸಭೆ ಕ್ಷೇತ್ರಗಳಿವೆ. ಎರಡಕ್ಕೂ ಏಪ್ರಿಲ್ 11 ರಂದು ಒಂದೇ ದಿನ ಮತದಾನ ನಡೆಯಲಿದೆ.

ಅರುಣಾಚಲ ಪ್ರದೇಶದಲ್ಲಿ 60 ವಿಧಾನಸಭಾ ಕ್ಷೇತ್ರಗಳಿವೆ

ಅರುಣಾಚಲ ಪ್ರದೇಶದಲ್ಲಿ 60 ವಿಧಾನಸಭಾ ಕ್ಷೇತ್ರಗಳಿವೆ

ಬಿಜೆಪಿ ಆಡಳಿತದಲ್ಲಿರುವ ಅರುಣಾಚಲ ಪ್ರದೇಶದಲ್ಲಿ 60 ವಿಧಾನಸಭೆ ಕ್ಷೇತ್ರಗಳಿದ್ದು ಎರಡಷ್ಟೆ ಲೋಕಸಭಾ ಕ್ಷೇತ್ರಗಳಿವೆ. ಇಲ್ಲಿಯೂ ಸಹ ಏಪ್ರಿಲ್ 11 ರಂದು ಮತದಾನ ನಡೆಯಲಿದೆ. ಸಿಕ್ಕಿಂ ರಾಜ್ಯದಲ್ಲಿ 32 ವಿಧಾನಸಭೆ ಕ್ಷೇತ್ರಗಳಿದ್ದು ಕೇವಲ ಒಂದು ಲೋಕಸಭಾ ಕ್ಷೇತ್ರ ಇದೆ. ಇದಕ್ಕೂ ಸಹ ಏಪ್ರಿಲ್ 11 ರಂದೇ ಮತದಾನ ನಡೆಯಲಿದೆ.

ಲೋಕಸಭೆ ಚುನಾವಣೆ 2019ರ ಮಾಹಿತಿ ಅಂಕಿ- ಅಂಶಗಳಲ್ಲಿ

ಒಡಿಸ್ಸಾದಲ್ಲಿ ನಾಲ್ಕು ಹಂತದಲ್ಲಿ ಚುನಾವಣೆ

ಒಡಿಸ್ಸಾದಲ್ಲಿ ನಾಲ್ಕು ಹಂತದಲ್ಲಿ ಚುನಾವಣೆ

ಒಡಿಸ್ಸಾದಲ್ಲಿ 147 ವಿಧಾನಸಭೆ ಕ್ಷೇತ್ರಗಳಿದ್ದು, ಪ್ರಸ್ತುತ ಬಿಜು ಜನತಾದಳ ಅಲ್ಲಿ ಆಡಳಿತ ನಡೆಸುತ್ತಿದೆ. ಒಡಿಸ್ಸಾದಲ್ಲಿ 21 ಲೋಕಸಭಾ ಕ್ಷೇತ್ರಗಳು ಸಹ ಇವೆ. ಇಲ್ಲಿ ನಾಲ್ಕು ಹಂತದಲ್ಲಿ ಮತದಾನ ನಡೆಯಲಿದ್ದು, ಏಪ್ರಿಲ್ 11, 18,23,29 ರಂದು ವಿಧಾನಸಭೆ ಹಾಗೂ ಲೋಕಸಭೆಗೆ ಒಟ್ಟಾಗಿ ಮತದಾನ ನಡೆಯಲಿದೆ.

ಚುನಾವಣೆ ದಿನಾಂಕ ಘೋಷಣೆ : ಫಾರಂ 26 ಎಂದರೇನು?

ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ಇಲ್ಲ

ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ಇಲ್ಲ

ಜಮ್ಮು ಮತ್ತು ಕಾಶ್ಮೀರದಲ್ಲಿ ಸಹ ವಿಧಾನಸಭೆ ಚುನಾವಣೆ ಈ ವೇಳೆಗೆ ಘೋಷಣೆ ಆಗಬೇಕಿತ್ತು. ಜಮ್ಮು ಕಾಶ್ಮೀರಕ್ಕೆ ಚುನಾವಣೆ ಘೋಷಣೆ ಆಗುತ್ತದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಚುನಾವಣೆ ಘೋಷಣೆ ಆಗಲಿಲ್ಲ. ಜಮ್ಮು ಕಾಶ್ಮೀರದಲ್ಲಿ ಚುನಾವಣೆ ಘೋಷಣೆ ಆಗದೇ ಇರುವುದಕ್ಕೆ ಸ್ಥಳೀಯರು ಮತ್ತು ರಾಜಕೀಯ ಮುಖಂಡರು ಮೋದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚುನಾವಣೆ ಘೋಷಣೆ ಆಗದ ಹಿಂದೆ ಮೋದಿ ಕೈವಾಡ ಇದೆ ಎಂದು ಆರೋಪಿಸುತ್ತಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಲೋಕಸಭೆ ಜತೆ ವಿಧಾನಸಭೆ ಚುನಾವಣೆ ನಡೆಯಲ್ಲ

ಮೇ 23 ರಂದು ಚುನಾವಣಾ ಫಲಿತಾಂಶ

ಮೇ 23 ರಂದು ಚುನಾವಣಾ ಫಲಿತಾಂಶ

ಲೋಕಸಭೆ ಚುನಾವಣೆಯ ದಿನಾಂಕವು ನಿನ್ನೆಯಷ್ಟೆ ಘೋಷಣೆ ಆಗಿದ್ದು, ಏಳು ಹಂತದಲ್ಲಿ ಚುನಾವಣೆ ನಡೆಯಲಿದೆ. ಏಪ್ರಿಲ್‌ 11 ರಿಂದ ಏಪ್ರಿಲ್ 29 ರವರೆಗೆ ವಿವಿಧ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 23 ರಂದು ದೇಶದಾದ್ಯಂತ ಒಂದೇ ಬಾರಿಗೆ ಮತ ಎಣಿಕೆ ನಡೆಯಲಿದೆ.

English summary
Election commission yesterday announce that four states will have their assembly elections along with lok sabha elections. Andhra Pradesh, Arunachal Pradesh, Sikkim, Odisha will have assembly elections with Lok Sabha elections 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X