4 ರಾಜ್ಯಗಳ ಚುನಾವಣಾ ಫಲಿತಾಂಶ: Leading
ನವದೆಹಲಿ, ಡಿ.8: ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶಕ್ಕಾಗಿ ಮತ ಎಣಿಕೆ ಆರಂಭವಾಗಿದೆ. ದೆಹಲಿ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಡ ಮತದಾನದ LEADING ಹೀಗಿದೆ:
ಛತ್ತೀಸಗಢ ಮತ್ತೆ ಬಿಜೆಪಿ ಮಡಿಲಿಗೆ- 47 ಸ್ಥಾನ. ಕಾಂಗ್ರೆಸ್ 40. ದಿಲ್ಲಿ ಮುಂದವರಿದ ಹಾವು ಏಣಿ ಆಟ. ದಿಲ್ಲಿಯಲ್ಲಿ ಬಿಜೆಪಿಗೆ 34 - ಸರಳ ಬಹುಮತಕ್ಕೆ ದಿಲ್ಲಿಯಲ್ಲಿ 36 ಸ್ಥಾನ ಮತ್ತು ಛತ್ತೀಸ್ ಗಢದಲ್ಲಿ 46 ಸ್ಥಾನಗಳಲ್ಲಿ ಗೆಲುವು ಹೊಂದಿರ ಬೇಕಾಗುತ್ತದೆ.

ದಿಲ್ಲಿಯಲ್ಲಿ ಸ್ಪಷ್ಟ ಬಹುಮತದತ್ತ ಬಿಜೆಪಿ (36 ಸ್ಥಾನ). ಬಿಜೆಪಿಗೆ 4-0 ಲೀಡ್ ಸಾಧ್ಯತೆ. ಛತ್ತೀಸಗಢ ಬಿಜೆಪಿಗೆ 50ರಲ್ಲಿ ಲೀಡಿಂಗ್
ಛತ್ತೀಸಗಢ 44-44ರಲ್ಲಿ ತ್ರಿಶಂಕು; ದಿಲ್ಲಿಯಲ್ಲಿ ಬಿಜೆಪಿ ಮೇಲುಗೈ ಸಾಧಿಸುತ್ತಿದ್ದು ಸರಳ ಬಹುಮತದತ್ತ ಮುನ್ನಡೆಯುತ್ತಿದೆ. (ದಿಲ್ಲಿಯಲ್ಲಿ ತ್ರಿಶಂಕು ಸ್ಥಿತಿ ನಿರ್ಮಾಣವಾದರೆ ಮುಂದೇನು?)
ಛತ್ತೀಸ್ ಗಢದಲ್ಲಿ ಬಿಜೆಪಿ ಮುನ್ನಡೆಯತ್ತ. ಮೂರು ರಾಜ್ಯದಲ್ಲಿ ಸೋಲು ಒಪ್ಪಿಕೊಂಡ ಕಾಂಗ್ರೆಸ್. ಛತ್ತೀಸ್ ಗಢದಲ್ಲಿ ಬಿಜೆಪಿಗೆ ಮಣ ಸೋಲು. ಕಾಂಗ್ರೆಸ್ ಮೇಲುಗೈ. ದಿಲ್ಲಿಯಲ್ಲಿ ಬಿಜೆಪಿಗೆ ತುಸು ಮೇಲುಗೈ. ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಭಾರಿ ಬಹುಮತ. ಕೇಜ್ರಿವಾಲಾ, ಮುಖ್ಯಮಂತ್ರಿ ದೀಕ್ಷಿತ್ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.
ದಿಲ್ಲಿಯಲ್ಲಿ ಬಿಜೆಪಿ ಜತೆ ನೆಕ್ ಟು ನೆಕ್ ಹೋಗುತ್ತಿರುವ ಆಮ್ ಆದ್ಮಿ ಪಕ್ಷವು ರಾಷ್ಟ್ರಪತಿ ಆಡಳಿತ ಬಂದರೂ ಸರಿಯೇ ಯಾವುದೇ ಪಕ್ಷದ ಕೈಜೋಡಿಸುವುದಿಲ್ಲ. ರಾಷ್ಟ್ರಪತಿ ಆಳ್ವಿಕೆಯಿಂದ ಪಕ್ಷಕ್ಕೆ 6 ತಿಂಗಳ ಕಾಲಾವಕಾಶ ಲಭಿಸಲಿದ್ದು, ಮತದಾರನನ್ನು ತನ್ನತ್ತ ಒಲಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದು AAP ಲೆಕ್ಕಾಚಾರವಾಗಿದೆ. ಸ್ವತಃ ಕೇಜ್ರಿವಾಲಾ, ಮುಖ್ಯಮಂತ್ರಿ ದೀಕ್ಷಿತ್ ವಿರುದ್ಧ ಭಾರಿ ಹಿನ್ನಡೆಯಲ್ಲಿದ್ದಾರೆ.
ಆದರೆ ಮೋದಿ ಅಲೆಗೆ ಸಿಕ್ಕಿರುವ ಮತದಾರ ಲೋಕಸಭಾ ಚುನಾವಣೆ ವೇಳೆಗೆ ಮತ್ತೆ AAPಗೆ ಒಲಿಯುತ್ತಾನಾ ಎಂಬುದು ಗಮನಾರ್ಹ. ಅಥವಾ AAPಗೆ ಅತಿ ಆಸೆ ಗತಿಗೇಡು ಆದೀತಾ?
ಮತದಾರನ ಈಗಿನ ನಾಡಿಮಿಡಿತ ನೋಡಿದರೆ 'ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ'ಗೆ ಮತದಾರ ಮಣೆ ಹಾಕಿರುವುದು ಸ್ಪಷ್ಟವಾಗುತ್ತಿದೆ. ಕಾಂಗ್ರೆಸ್ ಧೂಳೀಪಟ. ಆಮ್ ಆದ್ಮಿ ಇರೋದರಲ್ಲಿ ಪರವಾಗಿಲ್ಲ.
ನಾಲ್ಲೂ ರಾಜ್ಯಗಳ ಫಲಿತಾಂಶದಲ್ಲಿ ಬಿಜೆಪಿ ಸ್ಪಷ್ಟ ಮುನ್ನಡೆ ಸಾಧಿಸುತ್ತಿದ್ದು, ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಪಕ್ಷದ ಸಂಸದೀಯ ಮಂಡಳಿ ಸಭೆ ಕರೆಯಲಾಗಿದ್ದು, ಮೋದಿ ಸಭೆಯಲ್ಲಿ ಪಾಳ್ಗೊಳ್ಳಲು ಅಹಮದಾಬಾದಿನಿಂದ ಹೊರಟಿದ್ದಾರೆ.
ರಾಜಸ್ತಾನ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಭಾರೀ ಮುನ್ನಡೆ. ಛತ್ತೀಸ್ ಗಢದಲ್ಲಿ ಬಿಜೆಪಿಗೆ ಮೇಲುಗೈ ಆಗಿದ್ದರೂ ಕಾಂಗ್ರೆಸ್ ಸಹ ಹಿಂದೆಯೇ ಇದೆ. ಇನ್ನು ದಿಲ್ಲಿಯಲ್ಲಿ ಬಿಜೆಪಿ ಮೇಲುಗೈ ಸಾಧಿಸುತ್ತಿದ್ದರೂ ಆಮ್ ಆದ್ಮಿ 18 ಸ್ಥಾನಗಳಲ್ಲಿ ಮುನ್ನಡೆ.
ಯಾವುದೇ ಗೊಂದಲಕ್ಕೆ ಎಡೆ ಮಾಡಿಕೊಡದೆ ಮತದಾರ ಪ್ರಭು ನಾಲ್ಕೂ ರಾಜ್ಯಗಳಲ್ಲಿ ಒಂದೇ ಪಕ್ಷವನ್ನು ಸ್ಪಷ್ಟವಾಗಿ ಮುನ್ನಡೆಸುತ್ತಿದ್ದು, ಬಿಜೆಪಿ ಮೇಲುಗೈ ಸಾಧಿಸಿದೆ. ದಿಲ್ಲಿಯಲ್ಲಿ ಕಾಂಗೈಗೆ ಭಾರಿ ಹಿನ್ನಡೆ, ಬಿಜೆಪಿ ಸ್ಪಷ್ಟ ಮೇಲುಗೈ, ಶೀಲಾ ದೀಕ್ಷಿತ್ ವಿರುದ್ಧ ಅರವಿಂದ್ ಖೇಜ್ರಿವಾಲಾಗೆ ಹಿನ್ನಡೆ;
ಮಧ್ಯಪ್ರದೇಶದಲ್ಲಿ ಬಿಜೆಪಿ ನಾಗಾಲೋಟ, ಛತ್ತೀಸ್ ಗಢ ಮತ್ತು ರಾಜಸ್ಥಾನದಲ್ಲಿಯೂ ಬಿಜೆಪಿ ಸ್ಪಷ್ಟ ಮುನ್ನಡೆ.
ಬೆಳಗಿನ ಸುದ್ದಿ: ನಾಲ್ಕು ರಾಜ್ಯಗಳ ಮತದಾರ ತನಗೆ ನೀಡಿದ್ದ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಶಹಬ್ಬಾಸ್ ಅನಿಸಿಕೊಂಡಿದ್ದಾನೆ. ಮತ್ತು ತಾನು ನೀಡಿರುವ ತೀರ್ಪು ಹೇಗಿದೆ ಎಂಬುದನ್ನು ತಿಳಿಯಲು ಅದೇ ಮತದಾರ ಇಂದು ಭಾನುವಾರ ಮನೆಯಲ್ಲಿ ತವಕದೊಂದಿಗೆ ಕುಳಿತಿದ್ದಾನೆ.
ಕಾರ್ತೀಕ ಮಾಸದ ಶುಭ ಷಷ್ಠಿಯಂದು ಮತದಾರನ ತೀರ್ಪು ಏನಿದ್ದೀತು ಎಂದು ತಿಳಿಯುವ ಕುತೂಹಲ ನಮಗೂ ಇದೆ. ಹಾಗಾಗಿ ಕ್ಷಣಕ್ಷಣದ ಫಲಿತಾಂಶವನ್ನು ಒದಗಿಸಲು 'ಒನ್ಇಂಡಿಯಾಕನ್ನಡ' ಪಡೆ ಸಜ್ಜಾಗಿದೆ. ಇನ್ನೇನು ಕೆಲವೇ ಕ್ಷಣಗಳು ಬಾಕಿ ಅಷ್ಟೇ.
ದೆಹಲಿಯಲ್ಲಿ ಶೇ 65, ರಾಜಸ್ಥಾನದಲ್ಲಿ ಶೇ.74, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಡದಲ್ಲಿ ತಲಾ ಶೇ.70ರಷ್ಟು ಮತದಾನ ನಡೆದಿದ್ದು ಅದರ ರಿಸಲ್ಟ್ ಇನ್ನೇನು ಯಾವುದೇ ಕ್ಷಣ ಹೊರಬೀಳಲಿದೆ.
ಈ ಮಧ್ಯೆ, ಯಾರು ಏನೇ ಹೇಳಲಿ ಇದು ಖಂಡಿತ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮತ್ತು ಕಾಂಗ್ರಸ್ ಪಕ್ಷದ ಯುವರಾಜ ರಾಹುಲ್ ಗಾಂಧಿ ನಡುವಣ ಜಿದ್ದಾಜಿದ್ದಿ ಹೋರಾಟವೇ ಆಗಿದೆ. ಮೋದಿಯ ಬಿಜೆಪಿಗೆ 4-0 ಲೀಡ್ ಸಿಗುತ್ತದಾ!?
ನಾಲ್ಕು ರಾಜ್ಯಗಳಲ್ಲಿ 40ಕ್ಕೂ ಹೆಚ್ಚು ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಿದ ನರೇಂದ್ರ ಮೋದಿ ಮತ್ತು ಸುಮಾರು 20 ಸಮಾವೇಶಗಳಿಗೆ ಸೀಮಿತವಾದ ರಾಹುಲ್ ಗಾಂಧಿ ಅವರು ಮತದಾರ ಪ್ರಭುವಿಗೆ ಏನು ಮೋಡಿ ಮಾಡಿದ್ದಾರೆ ಎಂಬುದನ್ನು ತಿಳಿಯುವ ತವಕದೊಂದಿಗೆ ...












Click it and Unblock the Notifications